ಅಹಮದಾಬಾದ್ : ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಅವರ ಶತಕದ ಜೊತೆಯಾಟದ ಬಲದಿಂದ ಗುಜರಾತ್ ಟೈಟನ್ಸ್ ತಂಡವು ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 89 ರನ್ಗಳಿಂದ ಸುಲಭವಾಗಿ ಮಣಿಸಿತು. ಈ ಸೋಲಿನೊಂದಿಗೆ ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡವು ಪ್ಲೇ ಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿತ್ತು.

ಉಭಯ ತಂಡಗಳಿಗೆ ಇದು ಲೀಗ್ ಹಂತದಲ್ಲಿ ಕೊನೆಯ ಪಂದ್ಯವಾಗಿತ್ತು. ಗುಜರಾತ್ ತಂಡವು ಈ ಮೊದಲೇ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ಈ ಗೆಲುವಿನೊಂದಿಗೆ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೆನ್ನೈ ತಂಡವು ಈ ಪಂದ್ಯವನ್ನು ಗೆದ್ದಿದ್ದರೆ ಮುಂದಿನ ಹಂತಕ್ಕೇರುವ ಕ್ಷಿಣ ಅವಕಾಶ ಜೀವಂತವಾಗಿ ಉಳಿಯುತ್ತಿತ್ತು. ಆದರೆ, ಹ್ಯಾಟ್ರಿಕ್ ಸೋಲಿನೊಂದಿಗೆ ಋತುರಾಜ್ ಗಾಯಕವಾಡ್ ಪಡೆಯು ಈ ಬಾರಿಯ ಅಭಿಯಾನ ಮುಗಿಸಿತು.

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಾಯಿ (84; 53ಎ, 4X7, 6X4) ಮತ್ತು ಗಿಲ್ (64; 37ಎ, 4X7, 6X3) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 125 ರನ್ ಸೇರಿಸಿದರು. ಜೋಸ್ ಬಟ್ಲರ್ (ಔಟಾಗದೇ 57; 27ಎ, 4X5, 6X4) ಅವರೂ ಮಿಂಚಿನ ಅರ್ಧಶತಕ ಹೊಡೆದರು. ಅದರಿಂದಾಗಿ ಟೈಟನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 229 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಚೆನ್ನೈ ತಂಡವು ಟೈಟನ್ಸ್ನ ವೇಗಿಗಳಾದ ಮೊಹಮ್ಮದ್ ಸಿರಾಜ್ (26ಕ್ಕೆ 3), ಕಗಿಸೊ ರಬಾಡ (32ಕ್ಕೆ 3) ಮತ್ತು ಸ್ಪಿನ್ನರ್ ರಶೀದ್ ಖಾನ್ (18ಕ್ಕೆ 3) ಅವರ ಪರಿಣಾಮಕಾರಿ ದಾಳಿಗೆ ತತ್ತರಿಸಿತು. ಶಿವಂ ದುಬೆ (47;17ಎ) ಹೊರತುಪಡಿಸಿ ಉಳಿಸಿ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಯಾವುದೇ ಹಂತದಲ್ಲಿ ಚೇತರಿಸಿಕೊಳ್ಳದ ಚೆನ್ನೈ ತಂಡವು 13.4 ಓವರ್ಗಳಲ್ಲಿ 140 ರನ್ ಗಳಿಸಿ ಹೋರಾಟಕ್ಕೆ ತೆರೆ ಎಳೆಯಿತು.

ಸಿರಾಜ್ ಅವರು ಆರಂಭದಲ್ಲೇ ಚೆನ್ನೈ ತಂಡಕ್ಕೆ ಬಲವಾದ ಪೆಟ್ಟು ನೀಡಿದರು. ಉತ್ತಮ ಲಯದಲ್ಲಿದ್ದ ಸಂಜು ಸ್ಯಾಮ್ಸನ್ ಅವರನ್ನು ಇನಿಂಗ್ಸ್ನ ಮೊದಲ ಎಸೆತದಲ್ಲೇ ಔಟ್ ಮಾಡಿದ ಸಿರಾಜ್, ತಮ್ಮ ಎರಡನೇ ಓವರ್ನಲ್ಲಿ ಗಾಯಕವಾಡ್ (16ಎ) ಮತ್ತು ಉರ್ವಿಲ್ (0) ಅವರ ವಿಕೆಟ್ ಪಡೆದು ಸಂಭ್ರಮಿಸಿದರು. ಹೀಗಾಗಿ 28 ರನ್ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು.

ನಂತರ, ರಶೀದ್ ಮತ್ತು ರಬಾಡ ಅವರು ವಿಕೆಟ್ ಬೇಟೆ ಆರಂಭಿಸಿದರು. ಇದರಿಂದಾಗಿ, ಮ್ಯಾರ್ಥ್ಯೂ ಶಾರ್ಟ್ (24), ಕಾರ್ತಿಕ್ ಶರ್ಮಾ (19), ಡೆವಾಲ್ಡ್ ಬ್ರೆವಿಸ್ ಅವರೂ ಕ್ರೀಸ್ನಲ್ಲಿ ಜಾಸ್ತಿ ಹೊತ್ತು ನಿಲ್ಲಲಿಲ್ಲ. ಆದರೆ, ದುಬೆ ಮಾತ್ರ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಬಾರಿಸಿ ಗಮನ ಸೆಳೆದರು.

ಇದಕ್ಕೂ ಮೊದಲು ಆರಂಭಿಕ ಓವರ್ನಿಂದಲೇ ಸಾಯಿ ಮತ್ತು ಗಿಲ್ ಅವರು ಬೀಸಾಟವಾಡಿದರು. ಈ ಟೂರ್ನಿಯಲ್ಲಿ ಇಬ್ಬರೂ ಬ್ಯಾಟರ್ಗಳು 600 ರನ್ಗಳ ಗಡಿಯನ್ನು ದಾಟಿದರು. ಸಾಯಿ 14 ಪಂದ್ಯಗಳಿಂದ ಒಟ್ಟು 638 ರನ್ ಗಳಿಸಿ, ಆರೆಂಜ್ ಕ್ಯಾಪ್ ಹಾಕಿಕೊಂಡರು.

ಪವರ್ಪ್ಲೇ ಅವಧಿಯಲ್ಲಿ ಅಬ್ಬರಿಸಿದ ಇವರಿಬ್ಬರೂ ನಂತರದ ಆರು ಓವರ್ಗಳಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. ಶತಕದ ಸನಿಹ ಸಾಗಿದ್ದ ಸಾಯಿ ಅವರ ವಿಕೆಟ್ ಗಳಿಸುವಲ್ಲಿ ಅನ್ಷುಲ್ ಕಂಬೋಜ್ ಯಶಸ್ವಿಯಾದರು. ಆದರೆ ಕ್ರೀಸ್ಗೆ ಬಂದ ಬಟ್ಲರ್ ವೇಗವಾಗಿ ರನ್ ಗಳಿಸಿದರು. ಗಿಲ್ ಮತ್ತು ಬಟ್ಲರ್ ಸೇರಿ 36 ಎಸೆತಗಳಲ್ಲಿ 82 ರನ್ ಕಲೆಹಾಕಿದರು. 19ನೇ ಓವರ್ನಲ್ಲಿ ಜಾನ್ಸನ್ ಹಾಕಿದ ಎಸೆತವನ್ನು ಬೌಂಡರಿ ದಾಟಿಸುವ ಧಾವಂತದಲ್ಲಿ ಗಿಲ್ ಅವರು ಶಿವಂ ದುಬೆ ಕ್ಯಾಚ್ ಕೊಟ್ಟರು.

ಚೆನ್ನೈ ಬೌಲಿಂಗ್ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ. ಮುಕೇಶ್ ಚೌಧರಿ, ಸ್ಪೆನ್ಸರ್ ಜಾನ್ಸನ್ ಮತ್ತು ಅನ್ಷುಲ್ ಲಾ ಒಂದು ವಿಕೆಟ್ ಪಡೆದರು. ಆದರೆ ರನ್ ನಿಯಂತ್ರಿಸುವಲ್ಲಿ ಎಲ್ಲರೂ ವಿಫಲರಾದರು.

ಸಂಕ್ಷಿಪ್ತ ಸ್ಕೋರು: ಗುಜರಾತ್ ಟೈಟನ್ಸ್: 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 229 (ಸಾಯಿ ಸುದರ್ಶನ್ 84, ಶುಭಮನ್ ಗಿಲ್ 64, ಜೋಸ್ ಬಟ್ಲರ್ ಔಟಾಗದೇ 57, ಮುಕೇಶ್ ಚೌಧರಿ 36ಕ್ಕೆ1, ಸ್ಪೆನ್ಸರ್ ಜಾನ್ಸನ್ 47ಕ್ಕೆ1, ಅನ್ಷುಲ್ ಕಂಬೋಜ್ 56ಕ್ಕೆ1). ಚೆನ್ನೈ ಸೂಪರ್ ಕಿಂಗ್ಸ್: 13.4 ಓವರ್ಗಳಲ್ಲಿ 140 (ಮ್ಯಾರ್ಥ್ಯೂ ಶಾರ್ಟ್ 24, ಶಿವಂ ದುಬೆ 47; ಮೊಹಮ್ಮದ್ ಸಿರಾಜ್ 26ಕ್ಕೆ 3, ಕಗಿಸೊ ರಬಾಡ 32ಕ್ಕೆ 3, ರಶೀದ್ ಖಾನ್ 18ಕ್ಕೆ 3). ಪಂದ್ಯದ ಆಟಗಾರ: ಮೊಹಮ್ಮದ್ ಸಿರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.