ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 82 ರನ್ಗಳ ಅಂತರದ ಭರ್ಜರಿ ಜಯ ಗಳಿಸಿದೆ.

ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಜಿಟಿ, ಸತತ ಐದನೇ ಗೆಲುವು ದಾಖಲಿದೆ. ಇದು ಐಪಿಎಲ್ನಲ್ಲಿ ಗುಜರಾತ್ನ ಅತಿ ದೊಡ್ಡ ಗೆಲುವಾಗಿದೆ (ರನ್ ಅಂತರದಲ್ಲಿ).

ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್, ಸಾಯಿ ಸುದರ್ಶನ್ (61) ಹಾಗೂ ವಾಷಿಂಗ್ಟನ್ ಸುಂದರ್ (50) ಬಿರುಸಿನ ಅರ್ಧಶತಕಗಳ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 168 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ 14.5 ಓವರ್ಗಳಲ್ಲಿ 86 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಇದು ಐಪಿಎಲ್ನಲ್ಲಿ ಎಸ್ಆರ್ಎಚ್ ತಂಡದ ಕಳಪೆ ಸಾಧನೆಯಾಗಿದೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನ...

ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಿಂದಿಕ್ಕಿರುವ ಗುಜರಾತ್ ಟೈಟನ್ಸ್, ಅಗ್ರಸ್ಥಾನಕ್ಕೇರಿದೆ. ಶುಭಮನ್ ಗಿಲ್ ಪಡೆ 12 ಪಂದ್ಯಗಳಲ್ಲಿ ಎಂಟು ಗೆಲುವು ಹಾಗೂ ನಾಲ್ಕು ಸೋಲಿನೊಂದಿಗೆ 16 ಅಂಕ ಗಳಿಸಿದೆ.

ಮತ್ತೊಂದೆಡೆ ಸನ್ರೈಸರ್ಸ್ ಹೈದರಾಬಾದ್ 12 ಪಂದ್ಯಗಳಲ್ಲಿ ಏಳು ಜಯ ಹಾಗೂ ಐದು ಸೋಲಿನೊಂದಿಗೆ 14 ಅಂಕ ಗಳಿಸಿದ್ದು, ಮೂರನೇ ಸ್ಥಾನದಲ್ಲಿದೆ.

ಸಾಯಿ, ಸುಂದರ್ ಅಮೋಘ ನಟ...

ಜಿಟಿ ಪರ ಸಮಯೋಚಿತ ಅರ್ಧಶತಕ ಗಳಿಸಿದ ಸಾಯಿ ಸುದರ್ಶನ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಸುದರ್ಶನ್ 44 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ಗಳಿಂದ 61 ರನ್ ಗಳಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವಾಷಿಂಗ್ಟನ್ ಸುಂದರ್ 33 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ನಿಂದ 50 ರನ್ ಗಳಿಸಿದರು.

ಎಸ್ಆರ್ಎಚ್ ಬ್ಯಾಟರ್ಗಳ ವೈಫಲ್ಯ...

ಮತ್ತೊಂದೆಡೆ ಎಸ್ಆರ್ಎಚ್ ಬ್ಯಾಟರ್ಗಳು ಸಂಪೂರ್ಣ ವೈಫಲ್ಯವನ್ನು ಕಂಡರು. ಟ್ರಾವಿಸ್ ಹೆಡ್ ಶೂನ್ಯಕ್ಕೆ ಔಟ್ ಆದರು. ಅಭಿಷೇಕ್ ಶರ್ಮಾ (6), ಇಶಾನ್ ಕಿಶನ್ (11), ಸ್ಮರಣ್ ರವಿಚಂದ್ರನ್ (9), ಹೆನ್ರಿಚ್ ಕ್ಲಾಸೆನ್ (14)ಸಹ ನಿರಾಸೆ ಮೂಡಿಸಿದರು. ಗುಜರಾತ್ ಪರ ಕಗಿಸೊ ರಬಾಡ, ಜೇಸನ್ ಹೋಲ್ಡರ್ ತಲಾ ಮೂರು ಪ್ರಸಿದ್ಧ ಕೃಷ್ಣ ಎರಡು ಮತ್ತು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಗಳಿಸಿ ಮಿಂಚಿದರು.
.IPL Stats: ಪಂಜಾಬ್ಗೆ ಸತತ ನಾಲ್ಕನೇ ಸೋಲು, ಡೆಲ್ಲಿ ಪ್ಲೇ-ಆಫ್ ಕನಸು ಜೀವಂತ.IPL Stats: ಕೃಣಾಲ್ ಮಿಂಚು, ಭುವಿ ಸಿಕ್ಸರ್; ಆರ್ಸಿಬಿ ಟಾಪರ್, ಮುಂಬೈ ನಿರ್ಗಮನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.