ಕೋಲ್ಕತ್ತ: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಎದುರು ಶನಿವಾರ ನಡೆದ ಪಂದ್ಯದಲ್ಲಿ ತಮ್ಮ ತಂಡದ ಸೋಲಿಗೆ ನಾಲ್ಕು ಕ್ಯಾಚ್ಗಳನ್ನು ಕೈಚೆಲ್ಲಿದ್ದು ಕಾರಣ ಎಂದು ಗುಜರಾತ್ ಟೈಟನ್ಸ್ ಸಹಾಯಕ ಕೋಚ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ.

ಫಿನ್ ಅಲೆನ್ (93; 35ಎಸೆತ) ಅವರ ಎರಡು ಕ್ಯಾಚ್ಗಳೂ ಅದರಲ್ಲಿ ಸೇರಿದ್ದವು. ಅಲೆನ್ ಅವರಲ್ಲದೇ ಅಂಗಕ್ರಿಷ್ ರಘುವಂಶಿ (ಔಟಾಗದೇ 82) ಮತ್ತು ಕ್ಯಾಮರಾನ್ ಗ್ರೀನ್ (ಔಟಾಗದೇ 52) ಅಬ್ಬರದ ಅರ್ಧಶತಕ ದಾಖಲಿಸಿದರು. ಇದರಿಂದಾಗಿ ಕೋಲ್ಕತ್ತ 20 ಓವರ್ಗಳಲ್ಲಿ 2 ವಿಕೆಟ್ಗಳಿಗೆ 247 ರನ್ ಗಳಿಸಿತ್ತು. ಆದರೆ ಟೈಟನ್ಸ್ ತಂಡವು 4 ವಿಕೆಟ್ಗಳಿಗೆ 218 ರನ್ ಗಳಿಸಿತು. ಅಜಿಂಕ್ಯ ರಹಾನೆ ಬಳಗವು 29 ರನ್ಗಳಿಂದ ಜಯಿಸಿತು.

‘ಹೈ ಸ್ಕೋರಿಂಗ್ ಪಂದ್ಯಗಳಲ್ಲಿ ಆಡುವಾಗಲೂ ಎದುರಾಳಿ ತಂಡದಲ್ಲಿ ಶ್ರೇಷ್ಠ ಬ್ಯಾಟರ್ಗಳಿದ್ದಾಗ ಎಚ್ಚರಿಕೆಯಿಂದಿರಬೇಕು. ಅದರಲ್ಲೂ ಕ್ಯಾಚ್ ಕೈಬಿಡುವುದು ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತವೆ. ಉತ್ತಮ ಬ್ಯಾಟರ್ಗಳು ಪದೇ ಪದೇ ತಪ್ಪು ಮಾಡುವುದಿಲ್ಲ. ಆದ್ದರಿಂದ ಅವರ ಕ್ಯಾಚ್ ಬಿಟ್ಟು ನಾವೂ ಅವಕಾಶ ನೀಡಬಾರದು’ ಎಂದು ಪಟೇಲ್ ಹೇಳಿದರು.

ಅಲೆನ್ ಅವರು 14 ರನ್ ಗಳಿಸಿದ್ದಾಗ ಜೇಸನ್ ಹೋಲ್ಡರ್ ಅವರು ಕವರ್ಸ್ನಲ್ಲಿ ಮತ್ತು 33 ರನ್ ಮಾಡಿದ್ದಾಗ ಮೊಹಮ್ಮದ್ ಸಿರಾಜ್ ಅವರು ಕ್ಯಾಚ್ ಕೈಚೆಲ್ಲಿದ್ದರು. ಗ್ರೀನ್ 23 ರನ್ ಗಳಿಸಿದ್ದಾಗ ಅರ್ಷದ್ ಖಾನ್ ಜೀವದಾನ ನೀಡಿದರು. 52 ರನ್ ಗಳಿಸಿದ್ದ ರಘುವಂಶಿಗೂ ಒಂದು ಜೀವದಾನ ಲಭಿಸಿತ್ತು.

‘ನಮಗೆ ಪ್ಲೇ ಆಫ್ ಹಾದಿ ಸುಲಭವಾಗಿದೆ. ಮುಂದಿನ ಒಂದು ಪಂದ್ಯ ಗೆದ್ದರೂ ಅರ್ಹತೆ ಗಿಟ್ಟಿಸುತ್ತೇವೆ’ ಎಂದು ಹೇಳಿದರು. ಸದ್ಯ ಗುಜರಾತ್ ತಂಡವು 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.