ನವದೆಹಲಿ: ಕನ್ನಡಿಗ ಪ್ರಸಿದ್ಧ ಕೃಷ್ಣ (52ಕ್ಕೆ2) ಅವರು ಪಂದ್ಯದ ಕೊನೆಯ ಓವರ್ನಲ್ಲಿ ‘ಮ್ಯಾಜಿಕ್’ ಮಾಡಿದರು. ಅದರಿಂದಾಗಿ, ಗುಜರಾತ್ ಟೈಟನ್ಸ್ ತಂಡವು ಬುಧವಾರ 1 ರನ್ ಅಂತರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 211 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಕೆ.ಎಲ್.ರಾಹುಲ್ (92; 52ಎ) ಹಾಗೂ ಪಥುಮ್ ನಿಸಾಂಕ (41; 24ಎ) ಉತ್ತಮ ಆರಂಭ ಒದಗಿಸಿದರು. ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಗಾಯಗೊಂಡು ನಿವೃತ್ತಿಯಾದರೂ, ಮತ್ತೆ ಬ್ಯಾಟಿಂಗ್ಗೆ ಇಳಿದು ಅಬ್ಬರಿಸಿದರು. ಮೊಹಮ್ಮದ್ ಸಿರಾಜ್ ಎಸೆದ ಇನಿಂಗ್ಸ್ನ19ನೇ ಓವರ್ನಲ್ಲಿ 23 ರನ್ ಸೂರೆಮಾಡಿದರು.

ಡೆಲ್ಲಿ ಗೆಲುವಿಗೆ ಕೊನೆಯ ಓವರ್ನಲ್ಲಿ 13 ರನ್ ಬೇಕಿತ್ತು. ವಿಪ್ರಜ್ ನಿಗಮ್ ಹಾಗೂ ‘ಚೇಸ್ ಮಾಸ್ಟರ್’ ಮಿಲ್ಲರ್ ಕ್ರೀಸ್ನಲ್ಲಿದ್ದರು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವಿಪ್ರಜ್, ಎರಡನೇ ಎಸೆತದಲ್ಲಿ ಶುಭಮನ್ ಗಿಲ್ಗೆ ಕ್ಯಾಚ್ ಆದರು. ಕ್ರೀಸ್ಗೆ ಬಂದ ಕುಲದೀಪ್ ಯಾದವ್ ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಓವರ್ನ ನಾಲ್ಕನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ‘ಕಿಲ್ಲರ್’ ಮಿಲ್ಲರ್ ಡೆಲ್ಲಿ ತಂಡಕ್ಕೆ ಗೆಲುವು ಹತ್ತಿರವಾಗಿಸಿದರು.

ಕೊನೆಯ ಎರಡು ಎಸೆತಗಳಲ್ಲಿ 2 ರನ್ಗಳಷ್ಟೇ ಬೇಕಿದ್ದವು. ಐದನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳಲು ಮಿಲ್ಲರ್ ನಿರಾಕರಿಸಿದರು. ಆದರೆ, ಅದು ತಂಡಕ್ಕೆ ಮುಳುವೂ ಆಯಿತು. ಪ್ರಸಿದ್ಧ ಎಸೆದ ಕೊನೆಯ ಎಸೆತದಲ್ಲಿ ರನ್ ಗಳಿಸಲು ಮಿಲ್ಲರ್ ವಿಫಲರಾದರು. ಚೆಂಡು ನೇರವಾಗಿ ವಿಕೆಟ್ಕೀಪರ್ ಬಟ್ಲರ್ ಕೈಸೇರಿತು. ‘ಬೈ’ ರನ್ಗಾಗಿ ಯತ್ನಿಸಿದ ಕುಲದೀಪ್ ರನೌಟ್ ಆದರು. ಅಕ್ಷರ್ ಪಟೇಲ್ ಪಡೆ 8 ವಿಕೆಟ್ಗೆ 209 ರನ್ ಗಳಿಸಿ, ಓವರ್ ಪೂರೈಸಿತು.

ಅಫ್ಗಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ (17ಕ್ಕೆ3) ಡೆಲ್ಲಿ ತಂಡದ ಪ್ರಮುಖ ವಿಕೆಟ್ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಕಳೆದೆರಡು ಪಂದ್ಯಗಳಲ್ಲಿ ಮಿಂಚಿದ್ದ ‘ಇಂಪ್ಯಾಕ್ಟ್ ಸಬ್ಸ್ಟಿಟ್ಯೂಟ್’ ಸಮೀರ್ ರಿಜ್ವಿ ಅವರು ರಶೀದ್ ಅವರಿಗೆ ವಿಕೆಟ್ ಒಪ್ಪಿಸಿದರು.

ಇದಕ್ಕೆ ಮೊದಲು, ಲಯಕ್ಕೆ ಮರಳಿದ ಜೋಸ್ ಬಟ್ಲರ್ (52; 27ಎ) ಹಾಗೂ ನಾಯಕ ಶುಭಮನ್ ಗಿಲ್ (70; 45ಎ) ಅವರ ಅಮೋಘ ಬ್ಯಾಟಿಂಗ್ ಬಲದಿಂದ ಟೈಟನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 210 ರನ್ ಗಳಿಸಿತು.

ಟಾಸ್ ಗೆದ್ದ ಆತಿಥೇಯ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೂರನೇ ಓವರ್ನಲ್ಲಿ ಸಾಯಿ ಸುದರ್ಶನ್ ವಿಕೆಟ್ ಗಳಿಸಿದ ಮುಕೇಶ್ ಕುಮಾರ್ ಸಂಭ್ರಮಿಸಿದರು. ಆಗ ಇನ್ನೊಂದು ಬದಿಯಲ್ಲಿದ್ದ ಶುಭಮನ್ ಗಿಲ್ ಅವರೊಂದಿಗೆ ಸೇರಿಕೊಂಡ ಬಟ್ಲರ್ ತಮ್ಮ ಹಳೆಯ ವೈಭವಕ್ಕೆ ಮರಳಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿದರು.

ಇಂಗ್ಲೆಂಡ್ ವಿಕೆಟ್ಕೀಪರ್ –ಬ್ಯಾಟರ್ ಬಟ್ಲರ್ ಅವರು ಈಚೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫಾರ್ಮ್ ಕೊರತೆ ಅನು ಭವಿಸಿದ್ದರು. ಈ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿಯೂ ಅವರು ಆಟಕ್ಕೆ ಕುದುರಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಪುಟಿದೆದ್ದರು. 27 ಎಸೆತಗಳಲ್ಲಿ 52 ರನ್ ಹೊಡೆದರು. 3 ಬೌಂಡರಿ, 5 ಸಿಕ್ಸರ್ ಬಾರಿಸಿದರು.

ಗಿಲ್ ಜೊತೆಗೂಡಿದ ವಾಷಿಂಗ್ಟನ್ ಸುಂದರ್ (55; 32ಎ) ಅವರು ಕೂಡ ಬೌಲರ್ಗಳನ್ನು ದಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.