ಕೊಲಂಬೊ: ಶ್ರೀಲಂಕಾ ತಂಡವು, ಯುಎಇಯಲ್ಲಿ ಅಫ್ಗಾನಿಸ್ತಾನ ವಿರುದ್ಧ ಇದೇ 13ರಂದು ಆರಂಭವಾಬೇಕಿದ್ದ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನುಅನಿರ್ದಿಷ್ಟವಾಗಿ ಮುಂದಕ್ಕೆ ಹಾಕಿದೆ.

ವಾಯುಪ್ರದೇಶ ನಿರ್ಬಂಧ ಮತ್ತು ಇರಾನ್– ಅಮೆರಿಕ ಯುದ್ಧದ ಕಾರಣ ನಿಗದಿತ ಪ್ರವಾಸವನ್ನು ನಾವು ಸದ್ಯ ರದ್ದುಮಾಡಬೇಕಾಯಿತು ಎಂದು ಶ್ರೀಲಂಕಾ ಕ್ರಿಕೆಟ್ ಅಧಿಕಾರಿಯೊಬ್ಬರು ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಟಿ20 ಪಂದ್ಯಗಳು ಇದೇ 13, 15 ಮತ್ತು 17ರಂದು ಶಾರ್ಜಾದಲ್ಲಿ ನಿಗದಿಯಾಗಿದ್ದವು. ಏಕದಿನ ಪಂದ್ಯಗಳು 20, 22 ಮತ್ತು 25ರಂದು ದುಬೈನಲ್ಲಿ ನಿಗದಿಯಾಗಿದ್ದವು.

ಇದೇ ಮೊದಲ ಬಾರಿ ಅಫ್ಗಾನಿಸ್ತಾನವು, ಶ್ರೀಲಂಕಾ ವಿರುದ್ಧ ದ್ವಿಪಕ್ಷೀಯ ಸರಣಿಯ ಆತಿಥ್ಯ ವಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.