ರಾಹುಲ್‌ ದ್ರಾವಿಡ್‌ಗೆ ‘ಹಾಲ್‌ ಆಫ್‌ ಫೇಮ್‌’ ಗೌರವ

7

ರಾಹುಲ್‌ ದ್ರಾವಿಡ್‌ಗೆ ‘ಹಾಲ್‌ ಆಫ್‌ ಫೇಮ್‌’ ಗೌರವ

Published:
Updated:

ನವದೆಹಲಿ: ಐಸಿಸಿ ಕ್ರಿಕೆಟ್‌ ‘ಹಾಲ್‌ ಆಫ್‌ ಫೇಮ್‌’ ಗೌರವಕ್ಕೆ ಕರ್ನಾಟಕದ ಹಿರಿಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಮತ್ತು ಆಸ್ಟ್ರೇಲಿಯಾದ ಆಟಗಾರ ರಿಕಿ ಪಾಂಟಿಂಗ್ ಅವರು ಭಾಜನರಾಗಿದ್ದಾರೆ. 

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಪರಿಗಣಿಸಿ ದ್ರಾವಿಡ್‌ಗೆ ಈ ಗೌರವ ಸಂದಿದೆ.

ಈ ಪುರಸ್ಕಾರಕ್ಕೆ ಪಾತ್ರರಾದ ಭಾರತದ ಐದನೇ ಆಟಗಾರ ಎಂಬ ಹಿರಿಮೆಯನ್ನು ದ್ರಾವಿಡ್‌ ತಮ್ಮದಾಗಿಸಿಕೊಂಡಿದ್ದಾರೆ. 

ಕಪಿಲ್‌ ದೇವ್‌ ಮತ್ತು ಅನಿಲ್‌ ಕುಂಬ್ಳೆ, ಸುನಿಲ್‌ ಗಾವಸ್ಕರ್‌, ಬಿಷನ್‌ ಸಿಂಗ್‌ ಬೇಡಿ ಅವರು ಮೊದಲು ಈ ಸಾಧನೆ ಮಾಡಿದ್ದರು.

ಕ್ರಿಕೆಟ್‌ಗೆ ಕೊಡುಗೆ ನೀಡಿದ ವಿಶ್ವದ ಅತ್ಯುತ್ತಮ ಆಟಗಾರರನ್ನು ಗುರುತಿಸಲಾಗಿದೆ. ‘ಹಾಲ್‌ ಆಫ್‌ ಫೇಮ್‌’ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರಾಹುಲ್‌ ದ್ರಾವಿಡ್‌, ರಿಕಿ ಪಾಂಟಿಂಗ್‌, ಕ್ಲೇರ್‌ ಅವರನ್ನು ಅಭಿನಂದಿಸುತ್ತೇನೆ ಎಂದು ಐಸಿಸಿಯ ಮುಖ್ಯ ಕಾರ್ಯನಿರ್ವಾಹಕ ಡೇವ್‌ ರಿಚರ್ಡ್ಸ್‌ನ್‌ ಹೇಳಿದ್ದಾರೆ.

ದ್ರಾವಿಡ್‌ ಮತ್ತು ರಿಕಿ ಪಾಂಟಿಂಗ್‌ ಅವರು ಟೆಸ್ಟ್‌ ಮತ್ತು ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ರನ್‌ಗಳನ್ನು ತಮ್ಮ ರಾಷ್ಟ್ರಗಳ ತಂಡಕ್ಕೆ ನೀಡಿದ್ದಾರೆ. ‘ಗೋಡೆ’ ಖ್ಯಾತಿಯ ದ್ರಾವಿಡ್‌ ಅವರು 1973 ಜನವರಿ 11ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದರು. 

ಈ ಗೌರವಕ್ಕೆ ಇಂಗ್ಲೆಂಡ್‌ನ ಮಹಿಳಾ ವಿಕೆಟ್‌ ಕೀಪರ್‌ ಮತ್ತು ಬ್ಯಾಟ್ಸ್‌ಮನ್‌ ಆಗಿರುವ ಕ್ಲೇರ್‌ ಟೈಲರ್‌ ಸಹ ಪಾತ್ರರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 16

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !