ಹಂಪಾಪುರ: ಹೋಬಳಿ ಸೇರಿದಂತೆ ಎಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕಿನಾದ್ಯಂತ ಭಾನುವಾರ ಅಭಿಮಾನಿಗಳು ಐಪಿಎಲ್ ಕ್ರಿಕೆಟ್ ಟೂರ್ನಿಯನ್ನು ದೊಡ್ಡ ಪರದೆಗಳ ವೀಕ್ಷಿಸಿ ಖುಷಿಪಟ್ಟರು.

ಎರಡು ತಾಲ್ಲೂಕುಗಳಿಂದ ವಿವಿಧ ಹಳ್ಳಿಗಳಲ್ಲಿ ಸುಮಾರು 30ಕ್ಕೂ ಹೆಚ್ಚಿನ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಆರ್.ಸಿ.ಬಿ ತಂಡದ ಆಟಗಾರರು ಬ್ಯಾಟಿಂಗ್ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳನ್ನು ಗಳಿಸುತ್ತಿದ್ದಂತೆ ಮತ್ತು ವಿಕೆಟ್ ಬೀಳುತ್ತಿದ್ದಂತೆ ಪಟಾಕಿಗಳನ್ನು ಸಿಡಿಸುವುದರ ಮೂಲಕ ಸಂತಸ ವ್ಯಕ್ತಪಡಿಸಿದರು.

ಎಚ್.ಡಿ.ಕೋಟೆ ಪಟ್ಟಣ, ಜಕ್ಕಹಳ್ಳಿ, ಬೆಳತ್ತೂರು, ಸರಗೂರು, ಚಿಕ್ಕದೇವಮ್ಮನ ಬೆಟ್ಟದ ಹಾಲಗಡ, ಸಾಗರೆ, ಹೆಬ್ಬಲಗುಪ್ಪೆ, ಭೋಗೇಶ್ವರ ಕಾಲೊನಿ, ಫೈಲ್ವಾನ್ ಕಾಲೊನಿ, ಹಾರೋಪುರ, ಟೈಗರ್ ಬ್ಲಾಕ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ದೊಡ್ಡ ದೊಡ್ಡ ಪರದೆಗಳಲ್ಲಿ ಐಪಿಎಲ್ ನೇರಪ್ರಸಾರ ಮಾಡಲಾಯಿತು. ಎಲ್.ಇಡಿ ಪರದೆ ನಿಗಧಿಗಿಂತ ಹೆಚ್ಚಿನ ಬಾಡಿಗೆಗೆ ಅಳವಡಿಸುತ್ತಿದ್ದುದು ಸಹ ಕಂಡುಬಂತು.

‘ಕಳೆದ ವರ್ಷ ಆರ್ಸಿಬಿ ತಂಡ ಜಯ ಗಳಿಸಿತ್ತು. ಈಗ ಎರಡನೇ ಬಾರಿ ಕಪ್ ಗೆದ್ದು ಖುಷಿ ಹೆಚ್ಚಿಸಿದರು ಎಂದು ಆರ್.ಸಿ.ಬಿ ಅಭಿಮಾನಿ ಭೋಗೇಶ್ವರ ಕಾಲೊನಿಯ ಚೇತನ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-38-693393080

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.