6

‘ದಾದಾ’ ಹುಟ್ಟಿದ ದಿನ

Published:
Updated:
ಸೌರವ್‌ ಗಂಗೂಲಿ ಮತ್ತು ಎಂಎಸ್ ದೋನಿ ಜತೆಯಾಗಿ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ(ದಾದಾ) ಅವರ 46ನೇ ಹುಟ್ಟುಹಬ್ಬ ಅಭಿಮಾನಿಗಳು, ಕ್ರೀಡಾಪಟುಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 

ಬಹುತೇಕ ಎಲ್ಲ ಸೆಲೆಬ್ರಿಟಿಗಳ ಜನ್ಮದಿನದಂದೂ ತಮಾಷೆ ಟ್ವೀಟ್‌ಗಳ ಮೂಲಕ ನಗು ಮೂಡಿಸುವ ಮಾಜಿ ಕ್ರಿಕೆಟಿಗ ಸೆಹ್ವಾಗ್‌, ಸೌರವ್‌ ಕುರಿತು 4 ಅಂಶಗಳನ್ನು ಒಳಗೊಂಡ ಟ್ವೀಟ್‌ ಮಾಡಿದ್ದಾರೆ. 

’ಎದ್ದು ಎರಡು ಬಾರಿ ಕಣ್ಣು ಮಿಟುಕಿಸಿ, ಒಂದೆರಡು ಹೆಜ್ಜೆಹಾಕಿ; ಧೂಳೀಪಟ ಮಾಡಿ ಬೌಲರ್‌ಗಳನ್ನು ಮತ್ತು ಕೆಲವು ಸಲ ಪ್ರೇಕ್ಷಕರನ್ನೂ; ಸ್ವಿಂಗ್‌ ಮಾಡಿ ಚೆಂಡನ್ನಷ್ಟೇ ಅಲ್ಲ, ನಿಮ್ಮ ತಲೆಗೂದಲನ್ನೂ,..; ಯಾರೂ ಗಮನಿಸುತ್ತಿಲ್ಲ ಎಂಬಂತೆ ಸಂಭ್ರಮಿಸಿ; ಅದ್ಭುತ ವ್ಯಕ್ತಿಗೆ ಶುಭಾಶಯ’ ಎಂದು ಫೋಟೋ ಸಹಿತ ಪ್ರಕಟಿಸಿದ್ದಾರೆ. 

ಸೌರವ್‌ ಭಾರತ ತಂಡದ ನಾಯಕರಾಗಿದ್ದ ಸಮಯದಲ್ಲಿ ಮುಂಚೂಣಿಗೆ ಬಂದ ಆಟಗಾರ ವೀರೇಂದ್ರ ಸೆಹ್ವಾಗ್‌. ಯಾವುದೇ ಇನ್ನಿಂಗ್ಸ್‌ ಪ್ರಾರಂಭದಲ್ಲಿಯೂ ಸೆಹ್ವಾಗ್‌ರನ್ನು ಪ್ರಾರಂಭಿಕನಾಗಿ ಕಣಕ್ಕಿಳಿಸುತ್ತಿದ್ದರು. 

ಶನಿವಾರ 37ನೇ ಹುಟ್ಟುಹಬ್ಬ ಆಚರಿಸಿಕೊಂಡ ಕ್ರಿಕೆಟಿಗ ಎಂಎಸ್‌ ದೋನಿ ಅವರಿಗೂ ಸೆಹ್ವಾಗ್‌, ಚಿತ್ರಸಹಿತ ಟ್ವೀಟ್‌ ಮಾಡಿದ್ದರು. ಇದೂ ಸಹ ಅಭಿಮಾನಿಗಳಿಗೆ ಕಚಗುಳಿ ಇಟ್ಟಿತ್ತು. ಸ್ಟಂಪ್‌ ಆಗುವ ಎಚ್ಚರಿಕೆಯಲ್ಲಿ ಕ್ರಿಸ್‌ವರೆಗೂ ಕಾಲುಗಳನ್ನು ಚಾಚಿರುವ ಚಿತ್ರದೊಂದಿದೆ, ’ನಿಮ್ಮ ಜೀವನವು ಇದಕ್ಕಿಂತಲೂ ಹೆಚ್ಚು ವಿಸ್ತರಿಸಲಿ ಹಾಗೂ ನೀವು ಮಾಡುವ ಸ್ಟಂಪಿಂಗ್‌ಗೂ ಹೆಚ್ಚು ವೇಗವಾಗಿ ಎಲ್ಲದರಲ್ಲಿಯೂ ಸಂತೋಷ ಸಿಗಲಿ. ಓಂ ಫಿನಿಷಾಯ ನಮಃ’ ಎಂದಿದ್ದರು. 

ಇನ್ನಷ್ಟು ಶುಭಾಶಯಗಳ ಟ್ವೀಟ್‌

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !