ಕೋಚ್ ರವಿ ಶಾಸ್ತ್ರಿ ವಿರುದ್ಧ ಹರಿಹಾಯ್ದ ಹರಭಜನ್

7

ಕೋಚ್ ರವಿ ಶಾಸ್ತ್ರಿ ವಿರುದ್ಧ ಹರಿಹಾಯ್ದ ಹರಭಜನ್

Published:
Updated:
Deccan Herald

ನವದೆಹಲಿ: ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಅನುಭವಿಸಿದ ಹೀನಾಯ ಸೋಲಿನ ಕುರಿತು ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಮಾತನಾಡಬೇಕು. ತಂಡದ ಇಂತಹ ಕಳಪೆ  ಆಟದ ಹೊಣೆಯನ್ನು ಅವರು ಹೊರಬೇಕು ಎಂದು ಹಿರಿಯ ಕ್ರಿಕೆಟಿಗ ಹರಭಜನ್ ಸಿಂಗ್ ಹೇಳಿದ್ದಾರೆ.

ಮಂಗಳವಾರ ಅವರು ‘ಆಜ್‌ ತಕ್’ ಟಿವಿ ವಾಹಿನಿಯೊಂದಿಗೆ ಮಾತನಾಡಿದ ಅವರು, ‘ರವಿಶಾಸ್ತ್ರಿಯವರು ಇವತ್ತಿಲ್ಲದಿದ್ದರೂ ನಾಳೆ ಮಾತನಾಡಲೇಬೇಕು. ಆಟದಲ್ಲಿ ಸೋಲು–ಗೆಲುವು ಸಾಮಾನ್ಯ. ಆದರೆ ಎರಡನೇ ಪಂದ್ಯದಲ್ಲಿ ಒಂದಿನಿತೂ ಹೋರಾಟ ಮನೋಭಾವ ಪ್ರದರ್ಶಿಸಲಿಲ್ಲ ಎನ್ನುವುದು ಇಲ್ಲಿ ಗಮನಾರ್ಹ. ಒಂದೊಮ್ಮೆ ಭಾರತವು ಸರಣಿ ಸೋತರೆ ಅದರ ಸಂಪೂರ್ಣ ಹೊಣೆಯನ್ನು ಕೋಚ್ ತೆಗೆದುಕೊಳ್ಳಬೇಕು’ ಎಂದರು.

‘ವಿದೇಶಿ ನೆಲದಲ್ಲ ಸರಣಿ ಆಡುವಾಗ ನಮ್ಮ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜೋಡಿಯ ಆಟವು ಮಹತ್ವದ್ದಾಗಿರುತ್ತದೆ. ಆದರೆ ಪ್ರತಿ ಪಂದ್ಯದಲ್ಲಿಯೂ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಬದಲು ಮಾಡುತ್ತಿರುವುದು ಒಳ್ಳೆಯದಲ್ಲ. ಮಧ್ಯಮ ಕ್ರಮಾಂಕದ ಕಥೆಯೂ ಇದೇ ಆಗಿದೆ. ಲಾರ್ಡ್ಸ್‌ನಲ್ಲಿ ಹಸಿರು ಪಿಚ್‌ ನೀಡಲಾಗಿತ್ತು. ಆದರೂ ಇಬ್ಬರೂ ಸ್ಪಿನ್ನರ್‌ಗಳನ್ನು ಆಡಿಸಲು ತಂಡದ ಆಡಳಿತವು ನಿರ್ಧರಿಸಿದ್ದು ಅಚ್ಚರಿ ಮೂಡಿಸಿದೆ. ಮೂರನೇ ವೇಗದ ಬೌಲರ್‌ ಆಗಿ ಉಮೇಶ್ ಯಾದವ್ ಅವರನ್ನು ಆಡಿಸಿದ್ದರೆ ಆತಿಥೇಯರನ್ನು 160–170 ರನ್‌ಗಳಿಗೆ ಕಟ್ಟಿಹಾಕಬಹುದಿತ್ತು’ ಎಂದು ಹರಭಜನ್ ಅಭಿಪ್ರಾಯಪಟ್ಟಿದ್ದಾರೆ.

‘ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಹೆಚ್ಚು ರನ್‌ ಗಳಿಸಿಲ್ಲ. ಅವರಿಗೆ ಬೌಲಿಂಗ್ ಮಾಡಲೂ ಹೆಚ್ಚು ಅವಕಾಶ ನೀಡಿಲ್ಲ. ಅವರನ್ನು ಆಲ್‌ರೌಂಡರ್‌ ಎಂದು ಕರೆಯುವ ಅಗತ್ಯ ಇಲ್ಲ. ಅವರು ಇದೇ ರೀತಿ ಆಡಿದರೆ ಭವಿಷ್ಯ ಅತಂತ್ರವಾಗುವುದು ಖಚಿತ. ಅವರನ್ನು ಕಪಿಲ್‌ ದೇವ್ ಅವರೊಂದಿಗೆ ಹೋಲಿಕೆ ಮಾಡುವುದನ್ನು ಬಿಡಬೇಕು’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !