ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ತಮ್ಮ ಪ್ರತಿಭೆ, ಕಠಿಣ ಪರಿಶ್ರಮ ಹಾಗೂ ಸ್ಪಿನ್ ಬೌಲಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಭಾರತ 2007ರ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಹರ್ಭಜನ್ ಅವರು ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ಎಎಪಿ ಪಕ್ಷದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ, ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿ ಸೇರಲು ಅವರು ಸಜ್ಜಾಗಿದ್ದಾರೆ.

ಹರ್ಭಜನ್ ಸಿಂಗ್ ಅವರು ತಮ್ಮ ಪತ್ನಿ ಗೀತಾ ಬಸ್ರಾ ಹಾಗೂ ಇಬ್ಬರು ಮಕ್ಕಳೊಂದಿಗೆ ಪಂಜಾಬ್ನ ಜಲಂಧರ್ನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಅವರು ಬರೋಬ್ಬರಿ ₹7 ಕೋಟಿ ಮೌಲ್ಯದ ಬಿಳಿ ಬಣ್ಣದ ಬಂಗಲೆಯನ್ನು ಹೊಂದಿದ್ದಾರೆ. ಅವರ ಈ ಐಷಾರಾಮಿ ಬಂಗಲೆಯೊಳಗೆ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ನೋಡೋಣ.

ಬಂಗಲೆ ಒಳಗೆ ಏನಿದೆ?

ಪಂಜಾಬ್ನಲ್ಲಿರುವ ಈ ಬಂಗಲೆಯು ಬಹು ಮಹಡಿಯಿಂದ ಕೂಡಿದ್ದು, ಆಧುನಿಕ ವಿನ್ಯಾಸ ಶೈಲಿಯಿಂದ ನಿರ್ಮಾಣ ಮಾಡಲಾಗಿದೆ. ಮನೆಗೆ ರಾಯಲ್ ಏಷ್ಯನ್ ಪೇಂಟ್ಸ್ ಮಾಡಲಾಗಿದೆ. ಸುಂದರ ಹಾಗೂ ನುಣುಪಾದ ಗೋಡೆಗಳಿದ್ದು, ಒಳಾಂಗಣವು ನೀಲಿ ಬಣ್ಣದಿಂದ ಕೂಡಿದೆ. ಈ ಮನೆಯಲ್ಲಿ 4 ಕುಟುಂಬಗಳು ವಾಸ ಮಾಡಬಹುದು ಎನ್ನಲಾಗಿದೆ.

ಲಿವಿಂಗ್ ರೂಮ್ನಿಂದ ಹಿಡಿದು ಮಲಗುವ ಕೋಣೆಗಳವರೆಗೆ, ಐಷಾರಾಮಿ ಸ್ಫರ್ಶ ನೀಡಲಾಗಿದೆ. ಮನೆಗೆ ಬೃಹತ್ ಗಾತ್ರದ ಕಿಟಕಿಗಳು ಹಾಗೂ ಬಾಗಿಲನ್ನು ಅಳವಡಿಸಲಾಗಿದೆ. ಜೊತೆಗೆ ರಾಯಲ್ ಲುಕ್ ನೀಡುವಂತೆ ಕೆತ್ತನೆಯ ವಿನ್ಯಾಸವನ್ನೂ ಮಾಡಲಾಗಿದೆ.

‘ಸರ್ಕಾರದಿಂದ ಜಾಗ ಪಡೆದು, 2010ರಲ್ಲಿ ಈ ಬಂಗಲೆಯನ್ನು ನಿರ್ಮಾಣ ಮಾಡಲಾಯಿತು. ಮನೆಯಲ್ಲಿ ಹೆಚ್ಚಿನ ಸ್ಥಳಾವಕಾಶ ಹಾಗೂ ಸೂರ್ಯನ ಬೆಳಕು ಬೀಳಬೇಕು ಎಂಬುದು ನನ್ನ ಯೋಜನೆಯಾಗಿತ್ತು. ಅದರಂತೆ ಬಂಗಲೆಯನ್ನು ನಿರ್ಮಾಣ ಮಾಡಿದೆ’ ಎಂದು ಹರ್ಭಜನ್ ಹೇಳಿಕೊಂಡಿದ್ದಾರೆ.

ಮನೆಯ ಇನ್ನಷ್ಟು ವಿಚಾರಗಳನ್ನು ಹಂಚಿಕೊಂಡಿರುವ ಹರ್ಭಜನ್, ‘ ಬಂಗಲೆಯ ಒಳಂಗಾಣದ ವಿನ್ಯಾಸಕಿ ನನ್ನ ಪತ್ನಿ. ಮನೆಯ ವಿನ್ಯಾಸದ ಕುರಿತು ಇಬ್ಬರು ಚರ್ಚಿಸಿ ಅಂತಿಮ ನಿರ್ಧಾರ ಮಾಡಿದ್ದೆವು’ ಎಂದು ಹೇಳಿದ್ದಾರೆ.

ಮನೆಯಲ್ಲಿ ಏನಿದೆ?

ಬಂಗಲೆಯ ಒಳಾಂಗಣವು ತೆಳು ನೀಲಿ ಬಣ್ಣದಿಂದ ಕೂಡಿದೆ. ಟೆಕ್ಸ್ಚರ್ಡ್ ವಾಲ್ಪೇಪರ್ ಮತ್ತು ಚಿನ್ನದ ಗೋಡೆ ಗಡಿಯಾರವಿದೆ. ’ನಾವು ಈ ಮನೆಯನ್ನು ತುಂಬಾ ಇಷ್ಟಪಟ್ಟಿದ್ದೇವೆ. ಇಲ್ಲಿಗೆ ಬಂದಾಗ ಶಾಂತಿ ದೊರಕುತ್ತದೆ’ ಎಂದು ಹೇಳಿದ್ದಾರೆ.

ಹರ್ಭಜನ್ ಮತ್ತು ಗೀತಾ ಮಲಗುವ ಕೋಣೆ ನೀಲಿ ಹಾಗೂ ಬಿಳಿ ಬಣ್ಣದಿಂದ ಕೂಡಿದೆ. ಹಾಸಿಗೆಯ ಹಿಂಭಾಗ ನೀಲಿ ಬಣ್ಣದ ವಿನ್ಯಾಸವಿದೆ. ಕಡುಗೆಂಪು ಬಣ್ಣದ ಕುರ್ಚಿಗಳು ಮತ್ತು ಬಿಳಿ-ನೀಲಿ ಬಣ್ಣದ ಕಿಟಕಿ ಪರದೆಗಳಿವೆ. ‘ಈ ಕೋಣೆ ನನಗೆ ತುಂಬಾ ಇಷ್ಟವಾಗುತ್ತದೆ. ಇದಕ್ಕೆ ದಿನವಿಡೀ ಸೂರ್ಯನ ಬೆಳಕು ಬೀಳುತ್ತದೆ. ಕೊಠಡಿ ಬಣ್ಣ ಬಿಳಿಯಾಗಿರುವುದರಿಂದ, ಇದು ಪ್ರಶಾಂತ ಭಾವನೆಯನ್ನು ನೀಡುತ್ತದೆ’ ಎಂದು ಗೀತಾ ವಿವರಿಸಿದ್ದಾರೆ.

ಈ ಮನೆಯಲ್ಲಿ ಹರ್ಭಜನ್ ಅವರ ಬಾಲ್ಯದ ಛಾಯಾಚಿತ್ರಗಳ ಜೊತೆಗೆ ಗೀತಾ ಅವರ ಪುಸ್ತಕಗಳಿಂದ ತುಂಬಿದ ಕಪಾಟು ಇದೆ. ಗುಹೆಯನ್ನು ಹೋಲುವ ಮತ್ತೊಂದು ಕೋಣೆ ಇದೆ. ಅದು ಹರ್ಭಜನ್ ಸಿಂಗ್ ಅವರ ಪರಂಪರೆಯ ಆಚರಣೆಯಾಗಿದೆ.

ಗೋಡೆಯೊಂದರ ಮೇಲೆ ಹರ್ಭಜನ್ ಅವರ ಭಾವಚಿತ್ರವಿದೆ. ಇದನ್ನು ಹೆಬ್ಬೆರಳಿನ ಗುರುತುಗಳಿಂದ ಬಿಡಿಸಲಾಗಿದೆ. ಮೆಟ್ಟಿಲ ಪಕ್ಕದಲ್ಲಿ ಹರ್ಭಜನ್ ಅವರು ತಮ್ಮ ವೃತ್ತಿ ಜೀವನದಲ್ಲಿ ಗಳಿಸಿದ ಪ್ರಶಸ್ತಿಗಳನ್ನು ಜೊಡಿಸಿದ್ದಾರೆ.

ಟೆರೇಸ್, ಥಿಯೇಟರ್, ಉದ್ಯಾನ

ಬಂಗಲೆಯ ಮಹಡಿಯ ಮೇಲೆ ಉದ್ಯಾನವನವಿದೆ. ಒಂದು ಕೋಣೆಯಲ್ಲಿ ಹೋಮ್ ಥಿಯೇಟರ್ ಇದೆ. ಇದು ಸಂಪೂರ್ಣವಾಗಿ ಚಿತ್ರಮಂದಿರದಂತೆಯೇ ಇದ್ದು, ಐಷಾರಾಮಿ ಸೋಫಾಗಳಿಂದ ಕೂಡಿದೆ. ಬಂಗಲೆಯ ಮುಂಭಾಗ ದೊಡ್ಡ ಉದ್ಯಾನದೊಂದಿಗೆ ತೆರೆದ ಸ್ಥಳವೂ ಇದೆ. ಅಲ್ಲಿ ತರಕಾರಿಗಳನ್ನು ಬೆಳೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.