ಬುಧವಾರ, ಡಿಸೆಂಬರ್ 11, 2019
19 °C

ಬರೋಡಾ ತಂಡದಲ್ಲಿ ಹಾರ್ದಿಕ್‌ ಪಾಂಡ್ಯ

Published:
Updated:
Deccan Herald

ವಡೋದರ: ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರು ಮುಂಬೈ ಎದುರಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಕ್ಕೆ ಸೋಮವಾರ ಪ್ರಕಟಿಸಲಾಗಿರುವ ಬರೋಡಾ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಈ ಬಾರಿಯ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದ ವೇಳೆ ಬೆನ್ನು ನೋವಿಗೆ ಒಳಗಾಗಿದ್ದ 25 ವರ್ಷ ವಯಸ್ಸಿನ ಹಾರ್ದಿಕ್‌ ಇದರಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಬರೋಡಾ ಮತ್ತು ಮುಂಬೈ ನಡುವಣ ಹಣಾಹಣಿ ಡಿಸೆಂಬರ್‌ 14ರಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಹಿರಿಯ ಆಲ್‌ರೌಂಡರ್‌ ಯೂಸುಫ್‌ ಪಠಾಣ್‌, ಧಿರೇನ್‌ ಮಿಸ್ತ್ರಿ ಅವರೂ ತಂಡದಲ್ಲಿದ್ದಾರೆ. ಕೇದಾರ್‌ ದೇವಧರ್‌ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡ ಇಂತಿದೆ: ಕೇದಾರ್‌ ದೇವಧರ್‌ (ನಾಯಕ), ಆದಿತ್ಯ ವಾಗ್ಮೋಡೆ, ವಿಷ್ಣು ಸೋಲಂಕಿ (ಉಪ ನಾಯಕ), ಯೂಸುಫ್‌ ಪಠಾಣ್‌, ಸ್ವಪ್ನಿಲ್‌ ಸಿಂಗ್‌, ಭಾರ್ಗವ್‌ ಭಟ್‌, ಶೋಯೆಬ್‌ ಥಾಯ್‌, ರಿಷಿ ಅರೋತೆ, ಲ್ಯೂಕ್‌ಮನ್‌ ಮೆರಿವಾಲಾ, ಶಿವಾಲಿಕ್‌ ಶರ್ಮಾ, ಮಿತೇಶ್‌ ಪಟೇಲ್‌ (ವಿಕೆಟ್‌ ಕೀಪರ್‌), ಧಿರೇನ್‌ ಮಿಸ್ತ್ರಿ, ಶೋಯಬ್‌ ಸೊಪಾರಿಯಾ, ಪ್ರತ್ಯೂಷ್‌ ಕುಮಾರ್‌ ಮತ್ತು ಹಾರ್ದಿಕ್‌ ಪಾಂಡ್ಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು