ಭಾರತ ಕ್ರಿಕೆಟ್ ತಂಡದ ತಾರಾ ಆಲ್ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಹಾಗೂ ಮಾಡೆಲ್ ಮಹಿಕಾ ಶರ್ಮಾ ಅವರ ಪ್ರೀತಿಯ ವಿಚಾರ ಎಲ್ಲರಿಗೂ ಗೊತ್ತಿದೆ.

ನಿನ್ನೆ (ಮಾರ್ಚ್ 8) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್ಗಳ ಭರ್ಜರಿ ಜಯ ಸಾಧಿಸಿತ್ತು.

ಭಾರತ T20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಮಹಿಕಾ ಶರ್ಮಾ ಮೈದಾನಕ್ಕೆ ಓಡೋಡಿ ಬಂದು ಹಾರ್ದಿಕ್ ಪಾಂಡ್ಯ ಅವರನ್ನು ತಬ್ಬಿಕೊಂಡರು.

ಪಂದ್ಯಾವಳಿಯ ಉದ್ದಕ್ಕೂ, ಎಲ್ಲಾ ಕಡೆಗಳಲ್ಲೂ ಪಾಂಡ್ಯ ಅವರ ಗೆಳತಿ ಮಹಿಕಾ ಶರ್ಮಾ ಜೊತೆಗಿದ್ದರು. ಫೈನಲ್ ಪಂದ್ಯದ ಸಮಯದಲ್ಲಿಯೂ ಮಹಿಕಾ, ಪಾಂಡ್ಯ ಅವರನ್ನು ಹುರಿದುಂಬಿಸಿದರು.

ಪಂದ್ಯ ಗೆದ್ದ ಬಳಿಕ ಪಾಂಡ್ಯ ಅವರ ಜೊತೆ ಭರ್ಜರಿ ಡ್ಯಾನ್ಸ್ ಮಾಡಿ, ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಲಕ್ಷಾಂತರ ಅಭಿಮಾನಿಗಳ ನಡುವೆ ಹಾರ್ದಿಕ್ ಪಾಂಡ್ಯಗೆ ಮಹಿಕಾ ಶರ್ಮಾ ಮುತ್ತು ಕೊಟ್ಟಿದ್ದು ಎಲ್ಲರ ಗಮನ ಸೆಳೆದಿದೆ.

ನೀಲಿ ಬಣ್ಣದ ಉಡುಪು ಧರಿಸಿ ಮೈದಾನಕ್ಕೆ ಬಂದ ಮಹಿಕಾ ಶರ್ಮಾ ಅವರು ಹಾರ್ದಿಕ್ ಪಾಂಡ್ಯ ಕೈ ಹಿಡಿದು ಕೆಲಕಾಲ ಮಾತುಕತೆಯಲ್ಲಿ ತೊಡಗಿದ್ದರು. ಗೆದ್ದ ಖುಷಿಯಲ್ಲಿದ್ದ ಇಬ್ಬರು ಮೈದಾನದಲ್ಲಿಯೇ ಡ್ಯಾನ್ಸ್ ಮಾಡಿ ಒಬ್ಬರಿಗೊಬ್ಬರು ಸಂಭ್ರಮಿಸಿದರು.

ಅಲ್ಲದೆ ‘ಮಹಿಕಾ ನನ್ನ ಜೀವನಕ್ಕೆ ಕಾಲಿಟ್ಟ ಸಮಯದಿಂದ, ನಾನು ಗೆಲ್ಲುತ್ತಿದ್ದೇನೆ’ ಎಂದು ಪಾಂಡ್ಯ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ಇಬ್ಬರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಾರ್ದಿಕ್ ಪಾಂಡ್ಯಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.