ಗುವಾಹಟಿ: ಮಳೆಯಿಂದಾಗಿ 11 ಓವರ್ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 27 ರನ್ಗಳಿಂದ ಸೋತ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಸೋಲಿನ ಹೊಣೆಯನ್ನು ಬೌಲರ್ಗಳು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಮಳೆಯಿಂದಾಗಿ 2 ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸುತ್ತಾರೆ. ಆದರೆ, ನಾಯಕನ ಆಯ್ಕೆ ಸಮರ್ಥಿಸಿಕೊಳ್ಳುವಲ್ಲಿ ಮುಂಬೈ ಬೌಲರ್ಗಳು ವಿಫಲರಾದರು. ರಾಜಸ್ಥಾನ ತಂಡದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಮುಂಬೈ ಬೌಲರ್ಗಳ ಮೇಲೆ ಸವಾರಿ ಮಾಡಿದರು.

ಪಂದ್ಯದ ಸೋಲಿನ ಕುರಿತು ಮಾತನಾಡಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ, ‘ನಾವು ಪವರ್ಪ್ಲೇನಲ್ಲಿ ಉತ್ತಮ ಬೌಲಿಂಗ್ ಮಾಡಲಿಲ್ಲ. ರಾಜಸ್ಥಾನ ತಂಡದ ಆರಂಭಿಕರು ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಸೋಲಿನ ಜವಾಬ್ದಾರಿಯನ್ನು ಬೌಲರ್ಗಳು ತೆಗೆದುಕೊಳ್ಳಬೇಕು. ಕಳಪೆ ಬೌಲಿಂಗ್ನಿಂದಾಗಿ ನಾವು ಸೋಲು ಅನುಭವಿಸಬೇಕಾಯಿತು’ ಎಂದರು.

‘ನಾನು ಈ ಪಂದ್ಯದ ಸೋಲಿನ ಹೊಣೆಯನ್ನು ಬ್ಯಾಟರ್ಗಳ ಮೇಲೆ ಹೊರಿಸುವುದಿಲ್ಲ. ಖಂಡಿತವಾಗಿಯೂ ಬೌಲಿಂಗ್ ವಿಭಾಗ ಸೋಲಿನ ಹೊಣೆ ತೆಗೆದುಕೊಳ್ಳಬೇಕು. ಬೌಲಿಂಗ್ ವಿಭಾಗ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರೆ, ನಾವು ಪಂದ್ಯವನ್ನು ಗೆಲ್ಲಬಹುದಿತ್ತು’ ಎಂದಿದ್ದಾರೆ.

ವೈಭವ್ ಸೂರ್ಯವಂಶಿ ಕುರಿತು ಮಾತನಾಡಿದ ಪಾಂಡ್ಯ, ‘15 ವರ್ಷದ ಹುಡುಗ ಆ ರೀತಿ ಆಡುವುದನ್ನು ನೋಡುವುದು ತುಂಬಾ ವಿಶೇಷವಾಗಿದೆ. ಅವನು ಬ್ಯಾಟಿಂಗ್ ಮಾಡುವ ರೀತಿ, ಅವನಲ್ಲಿರುವ ನಿರ್ಭಿತಿ ನೋಡುವುದು ಅದ್ಭುತವಾಗಿದೆ. ಅವನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ’ ಎಂದು ಹೇಳಿದ್ದಾರೆ.

ಮುಂದಿನ ಪಂದ್ಯದ ಕುರಿತು ಮಾತನಾಡಿದ ಪಾಂಡ್ಯ, ‘ತಪ್ಪುಗಳಿಂದ ಪಾಠ ಕಲಿಯಿರಿ. ನಾಳೆ ಬೆಳಿಗ್ಗೆ ಬರುತ್ತೆ, ಸೂರ್ಯ ಉದಯಿಸುತ್ತಾನೆ, ಮುಂದಿನ ಪಂದ್ಯಕ್ಕೆ ಚೆನ್ನಾಗಿ ತಯಾರಿ ನಡೆಸಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.