ಮಾರ್ಚ್ 28ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ 2026ಕ್ಕೆ ಚಾಲನೆ ಸಿಗಲಿದೆ. ಈ ನಡುವೆ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಹನುಮಾನ್ ಚಾಲೀಸಾ ಕುರಿತು ಮಾತನಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ₹12 ಕೋಟಿ ಬೆಲೆಯ ಫೆರಾರಿ ಕಂಪನಿಯ ಸೂಪರ್ ಕಾರು ಖರೀದಿಸಿ ಸುದ್ದಿಯಾಗಿದ್ದರು. ಇದೀಗ 'ಹನುಮಾನ್ ಚಾಲೀಸಾ' ಭಕ್ತಿಗೀತೆ ಕೇಳುವುದಾಗಿ ಹೇಳಿಕೆ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಂಡ್ಯ ಅವರು, ಹನುಮಾನ್ ಚಾಲೀಸಾ ಭಕ್ತಿಗೀತೆಯನ್ನು ಕೇಳುವುದರಿಂದ ನನಗೆ ‘ಸಕಾರಾತ್ಮಕ ಶಕ್ತಿ’ ಸಿಗುತ್ತದೆ ಎಂದಿದ್ದಾರೆ.

‘ನನ್ನ ಬಳಿ ಫೆರಾರಿ ಕಾರು ಇರುವುದು ಅನೇಕರನ್ನು ಆಕರ್ಷಿಸುತ್ತಿದೆ. ಆದರೆ, ದುಬಾರಿ ಬೆಲೆಯ ಆ ಕಾರಿನಲ್ಲೂ ನಾನು ಹನುಮಾನ್ ಚಾಲೀಸಾ ಕೇಳುತ್ತೇನೆ. ಅದರಿಂದ ನನಗೆ ನೆಮ್ಮದಿ ಸಿಗುತ್ತದೆ’ಎಂದು ಪಾಂಡ್ಯ ಅವರು ಹೇಳಿದ್ದಾರೆ. ಈ ವೇಳೆ ಕಿರಾನ್ ಪೋಲಾರ್ಡ್ ಕೂಡ ಹಾಜರಿದ್ದರು.

ಮುಂದುವರೆದು ಮಾತನಾಡಿದ ಅವರು ‘ಹನುಮಾನ್ ಚಾಲೀಸಾದಷ್ಟು ಸಕಾರಾತ್ಮಕ ಶಕ್ತಿ ನೀಡುವ ಇನ್ನೊಂದು ಹಾಡು ಇರಲು ಸಾಧ್ಯವಿಲ್ಲ ಎಂಬ ನನ್ನ ಮಾತನ್ನು ಎಲ್ಲರೂ ಒಪ್ಪುತ್ತಾರೆ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.
.ವಿಶ್ವಕಪ್ ಗೆದ್ದ ಬೆನ್ನಲ್ಲೆ ಹಾರ್ದಿಕ್ ಪಾಂಡ್ಯಾಗೆ ಸಂಕಷ್ಟ: ದೂರು ದಾಖಲಿಸಿದ ವಕೀಲ.ಜಗತ್ತೇ ತಲೆಕೆಳಗಾದರೂ, ನಾನು ನಂಬೋದು ಕಠಿಣ ಪರಿಶ್ರಮವನ್ನಷ್ಟೇ: ಹಾರ್ದಿಕ್ ಪಾಂಡ್ಯ.
ಭಾರತ 2026ರ ಟಿ20 ವಿಶ್ವಕಪ್ ಬಳಿಕ ಪಾಂಡ್ಯ ಅವರ ಹೊಸದಾದ ಫೆರಾರಿ ಕಾರಿನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಕಾರಿನಲ್ಲಿ ಪಾಂಡ್ಯ ಅವರು ಗೆಳತಿ ಮಹೀಕಾ ಶರ್ಮಾ ಜೊತೆ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.