ನವದೆಹಲಿ: ಐಪಿಎಲ್ನಲ್ಲಿ ನೀರಸ ಪ್ರದರ್ಶನದ ನಂತರ ಮಾನಸಿಕ ಒತ್ತಡ ಮತ್ತು ಸಂಪೂರ್ಣವಾಗಿ ದಣಿದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಫ್ರಾಂಚೈಸಿಯನ್ನು ತೊರೆಯಲು ಸಜ್ಜಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

32 ವರ್ಷದ ಹಾರ್ದಿಕ್ 2024ರಲ್ಲಿ ರೋಹಿತ್ ಶರ್ಮಾ ನಂತರ ನಾಯಕತ್ವ ವಹಿಸಿಕೊಂಡಿದ್ದರು. ಹಾಲಿ ಆವೃತ್ತಿಯಲ್ಲಿ ತಂಡದ ಅಭಿಯಾನ ಕೊನೆಗೊಳ್ಳುವ ವಾರಗಳ ಮೊದಲು ಅವರು ಫ್ರ್ಯಾಂಚೈಸಿ ತೊರೆಯುವ ಬಗ್ಗೆ ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಈ ಬಾರಿ ಪ್ಲೇ ಆಫ್ ಕನಸು ಭಗ್ನಗೊಂಡ ನಂತರ, ಇನ್ನೂ ಕೆಲವು ಪಂದ್ಯಗಳು ಬಾಕಿ ಉಳಿದಿರುವಂತೆ ಹಾರ್ದಿಕ್ ಮತ್ತು ಆಡಳಿತ ಮಂಡಳಿ ಈ ಬಗ್ಗೆ ಪರಸ್ಪರ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.

‘ಮಾನಸಿಕ ಒತ್ತಡ ಮತ್ತು ಸಂಪೂರ್ಣ ದಣಿದಿರುವ ಹಾರ್ದಿಕ್ ಅವರು ಟೂರ್ನಿಯ ವೇಳೆ ಬೆನ್ನುನೋವಿಗೂ ತುತ್ತಾಗಿದ್ದಾರೆ. ಪ್ಲೇ-ಆಫ್ ಕನಸು ಕಮರಿದ ನಂತರ ತಾವು ಫ್ರ್ಯಾಂಚೈಸಿಯಲ್ಲಿ ಮುಂದುವರಿಯುವದಿಲ್ಲ ಎಂದು ಹಾರ್ದಿಕ್ ತಿಳಿಸಿದ್ದರು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಐಪಿಎಲ್ ಮೂಲವೊಂದು ಪಿಟಿಐಗೆ ತಿಳಿಸಿದೆ.

ಈ ಬಾರಿಯ ಐಪಿಎಲ್ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು 14 ಪಂದ್ಯಗಳಲ್ಲಿ ಕೇವಲ ನಾಲ್ಕನ್ನು ಗೆದ್ದುಕೊಂಡಿದೆ. ಅಂಕಪಟ್ಟಿಯಲ್ಲಿ 9ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ. ಕಳೆದ ಆವೃತ್ತಿಯಲ್ಲಿ ತಂಡವು ಪ್ಲೇ ಅಫ್ ಪ್ರವೇಶಿಸಿತ್ತು. 2024ರ ಆವೃತ್ತಿಯಲ್ಲಿ ಕೊನೆಯ ಸ್ಥಾನ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.