ಶನಿವಾರ, ಅಕ್ಟೋಬರ್ 19, 2019
28 °C

ಹಾರ್ದಿಕ್ ಪಾಂಡ್ಯಗೆ ಶಸ್ತಚಿಕಿತ್ಸೆ

Published:
Updated:
Prajavani

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಶನಿವಾರ ಲಂಡನ್‌ನ ಆಸ್ಪತ್ರೆಯಲ್ಲಿ ಬೆನ್ನೆಲುಬಿನ ಶಸ್ತ್ರಚಿಕಿತ್ಸೆಗೊಳಗಾದರು.

ವೈದ್ಯರು ಅವರಿಗೆ 12–16 ವಾರಗಳ ವಿಶ್ತಾಂತಿ ಪಡೆಯುವಂತೆ ಸಲಹೆ ಮಾಡಿದ್ದಾರೆ. ಆದ್ದರಿಂದ ಅವರು ಸುಮಾರು ನಾಲ್ಕು ತಿಂಗಳು ಕ್ರಿಕೆಟ್‌ ನಿಂದ ದೂರ ಉಳಿಯುವರು. ಮುಂದಿನ ವರ್ಷದ ಐಪಿಎಲ್ ಟೂರ್ನಿಯ ವೇಳೆಗೆ ಅವರು ಫಿಟ್ ಆಗುವ ನಿರೀಕ್ಷೆ ಇದೆ.

‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಿಮ್ಮೆಲ್ಲರ ಶುಭಹಾರೈಕೆಗಳಿಗೆ ನಾನು ಕೃತಜ್ಞನಾಗಿದ್ದೇನೆ. ಬೇಗನೆ ಮರಳಿಬರುತ್ತೇನೆ. ಅಲ್ಲಿಯವರೆಗೂ ನನ್ನನ್ನು ಮಿಸ್‌ ಮಾಡಿಕೊಳ್ಳಿ’ ಎಂದು ಹಾರ್ದಿಕ್ ಇನ್ಸ್ಟಾಗ್ರಾಮ್‌ನಲ್ಲಿ ಸಂದೇಶ ಬರೆದು ಚಿತ್ರ ಪೋಸ್ಟ್ ಮಾಡಿದ್ದಾರೆ.

Post Comments (+)