ಶನಿವಾರ, ನವೆಂಬರ್ 23, 2019
17 °C
ಮಹಿಳಾ ಏಕದಿನ ಕ್ರಿಕೆಟ್

ಒಂದು ಕೈಯಲ್ಲಿ ಅದ್ಭುತ ಕ್ಯಾಚ್: ಹರ್ಮನ್‌ಪ್ರೀತ್ ಕೌರ್ ವಿಡಿಯೊ ವೈರಲ್‌

Published:
Updated:

ನವದೆಹಲಿ: ಭಾರತ ಮತ್ತು ವೆಸ್ಟ್‌ಇಂಡೀಸ್‌ ನಡುವಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸ್ಟೆಫಿನಿ ಟೇಲರ್ ಬಾರಿಸಿದ ಚೆಂಡನ್ನು ಹರ್ಮನ್‌ ಪ್ರೀತ್ ಕೌರ್ ಅವರು  ಡೈವ್‌ ಹೊಡೆದು ಒಂದು ಕೈಯಲ್ಲಿ ಕ್ಯಾಚ್‌ ಹಿಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಈ ಅದ್ಭುತ ಕ್ಯಾಚ್‌ಗಾಗಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಭಾರತ ಮತ್ತು ವೆಸ್ಟ್‌ಇಂಡೀಸ್‌ ನಡುವೆ 3 ಏಕದಿನ ಪಂದ್ಯಗಳ ಸರಣಿಯನ್ನು ಆಯೋಜಿಸಲಾಗಿದ್ದು, ಗುರುವಾರ ಸರ್‌ವಿವಿಯನ್‌ ರಿರ್ಚಡ್‌ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಒಂದು ರನ್‌ಗಳ ಅಂತರದಲ್ಲಿ ಭಾರತ ಸೋತಿದೆ. ಮೊದಲು ಬ್ಯಾಟಿಂಗ್ ನಡೆಸಿದ  ವೆಸ್ಟ್ ಇಂಡೀಸ್ ತಂಡವು 225 ರನ್‌ ಗಳಿಸಿತ್ತು. ಇದನ್ನು ಬೆನ್ನಟ್ಟಿದ ಭಾರತವು 224ರನ್‌ ಕಲೆಹಾಕಿದ್ದು ಒಂದು ರನ್‌ಗಳ ಅಂತರದಿಂದ ಪರಾಭವಗೊಂಡಿತು.

ಪ್ರತಿಕ್ರಿಯಿಸಿ (+)