ಭಾನುವಾರ, ಜನವರಿ 24, 2021
18 °C
ಶೀನ್‌ ಸ್ಪೋರ್ಟ್ಸ್‌, ಅಮೇಯ ಸ್ಪೋರ್ಟ್ಸ್‌ ತಂಡಗಳಿಗೆ ಸೋಲು

ಮಹಿಳಾ ಕ್ರಿಕೆಟ್: ಹೆರಾನ್–ಕಿಣಿ ಆರ್‌ಆರ್ ತಂಡಗಳು ಫೈನಲ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆರಾನ್ ಸ್ಪೋರ್ಟ್ಸ್ ಮತ್ತು ಕಿಣಿ ಆರ್‌.ಆರ್.ಸ್ಪೋರ್ಟ್ಸ್ ತಂಡಗಳು ಫಾಲ್ಕನ್ ಸ್ಪೋರ್ಟ್ಸ್ ಕ್ಲಬ್‌ನ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಮಹಿಳೆಯರ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದವು. ಭಾನುವಾರ ನಡೆದ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಈ ಎರಡು ತಂಡಗಳು ತಲಾ 16 ಪಾಯಿಂಟ್ ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದವು. 

ಮೊದಲ ಪಂದ್ಯದಲ್ಲಿ ಹೆರಾನ್ ಸ್ಪೋರ್ಟ್ಸ್ ಐದು ವಿಕೆಟ್‌ಗಳಿಂದ ಶೀನ್ ಸ್ಪೋರ್ಟ್ಸ್ ತಂಡವನ್ನು ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಕಿಣಿ ಆರ್‌.ಆರ್‌ ತಂಡ 26 ರನ್‌ಗಳಿಂದ ಅಮೇಯ ಸ್ಪೋರ್ಟ್ಸ್ ವಿರುದ್ಧ ಜಯ ಗಳಿಸಿತು. ಅಮೇಯ ತಂಡಕ್ಕೆ ಇದು ಸತತ ಐದನೇ ಸೋಲು.

ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಹೆರಾನ್‌ ಸ್ಪೋರ್ಟ್ಸ್ 123 ರನ್‌ಗಳಿಗೆ ಎದುರಾಳಿ ತಂಡವನ್ನು ಕಟ್ಟಿಹಾಕಿತು. ಗುರಿ ಬೆನ್ನಟ್ಟಿದ ತಂಡ ನಾಲ್ಕು ಎಸೆತ ಬಾಕಿ ಇರುವಾಗಲೇ ಜಯ ಗಳಿಸಿತು. 

ಸಂಕ್ಷಿಪ್ತ ಸ್ಕೋರು
ಶೀನ್ ಸ್ಪೋರ್ಟ್ಸ್:
20 ಓವರ್‌ಗಳಲ್ಲಿ 2ಕ್ಕೆ 123 (ಜೆಮಿಮಾ ರಾಡ್ರಿಗಸ್ 12, ಪ್ರತ್ಯೂಷಾ ಕುಮಾರಿ 59, ದೀಪ್ತಿ ಶರ್ಮಾ 32; ಮೋನಿಕಾ ಪಟೇಲ್ 22ಕ್ಕೆ1, ಅದಿತಿ ರಾಜೇಶ್ 14ಕ್ಕೆ1)
ಹೆರಾನ್ ಸ್ಪೋರ್ಟ್ಸ್: 19.2 ಓವರ್‌ಗಳಲ್ಲಿ 5ಕ್ಕೆ 125 (ದಿವ್ಯಜ್ಞಾನಾನಂದ 11, ಶುಭಾ 17, ಅದಿತಿ ರಾಜೇಶ್ 56, ಆಯುಷಿ ಸೋನಿ 15, ಆಶಾ ಔಟಾಗದೆ 15; ದೀಪ್ತಿ ಶರ್ಮಾ 20ಕ್ಕೆ1, ರಕ್ಷಿತಾ ಕೃಷ್ಣಪ್ಪ 15ಕ್ಕೆ2, ರಾಜೇಶ್ವರಿ 25ಕ್ಕೆ1, ಜೆಮಿಮಾ ರಾಡ್ರಿಗಸ್ 7ಕ್ಕೆ1).
ಫಲಿತಾಂಶ: ಹೆರಾನ್‌ ಸ್ಪೋರ್ಟ್ಸ್‌ಗೆ 5 ವಿಕೆಟ್‌ಗಳ ಜಯ
ಪಂದ್ಯದ ಶ್ರೇಷ್ಠ ಆಟಗಾರ್ತಿ: ಅದಿತಿ ರಾಜೇಶ್.

ಕಿಣಿ ಆರ್‌.ಆರ್‌.ಸ್ಪೋರ್ಟ್ಸ್‌: 6ಕ್ಕೆ 142 (ವಿನಿತಾ ವಿ.ಆರ್‌ 12, ಪೂನಮ್ ರಾವತ್ 47, ನುಶತ್ ಪರ್ವೀನ್ 45, ಅರುಂಧತಿ 20; ಅನುಜಾ ಪಾಟೀಲ್ 10ಕ್ಕೆ2, ಪೂಜಾ ಕುಮಾರಿ 47ಕ್ಕೆ3)
ಅಮೇಯ ಸ್ಪೋರ್ಟ್ಸ್: 20 ಓವರ್‌ಗಳಲ್ಲಿ 5ಕ್ಕೆ 116 (ತಿರುಷ್ ಕಾಮಿನಿ 30, ವೇದಾ ಕೃಷ್ಣಮೂರ್ತಿ 18, ನಿಕ್ಕಿ ಪ್ರಸಾದ್ 16, ಮೋನಾ ಮೇಶ್ರಮ್ 17, ಅನುಜಾ ಪಾಟೀಲ್ ಔಟಾಗದೆ 22; ಶಿಶಿರ ಗೌಡ 21ಕ್ಕೆ2).
ಫಲಿತಾಂಶ: ಕಿಣಿ ಸ್ಪೋರ್ಟ್ಸ್‌ಗೆ 26 ರನ್‌ಗಳ ಜಯ
ಪಂದ್ಯದ ಶ್ರೇಷ್ಠ ಆಟಗಾರ್ತಿ: ನುಶತ್ ಪರ್ವೀನ್‌

ಫೈನಲ್ ಪಂದ್ಯ: ಜನವರಿ 12ರಂದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು