ಶನಿವಾರ, ಜನವರಿ 18, 2020
25 °C

ನಿನ್ನ ತೊಡೆಗಿಂತ, ಆತನ ಕಾಲಿನ ಸ್ನಾಯುವೇ ಪುಷ್ಠಿ: ಚಾಹಲ್ ಕಾಲೆಳೆದ ಕೊಹ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಟಕ್‌: ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗೆ ತಯಾರಿ ನಡೆಸುತ್ತಿದ್ದಾಗ ತೆಗೆದ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಯಜುವೇಂದ್ರ ಚಾಹಲ್‌ರನ್ನು ನಾಯಕ ವಿರಾಟ್‌ ಕೊಹ್ಲಿ ಕಿಚಾಯಿಸಿದ್ದಾರೆ.

ಏಕದಿನ ಸರಣಿಯ ಮೂರನೇ ಪಂದ್ಯವು ಭಾನುವಾರ ಕಟಕ್‌ನಲ್ಲಿ ನಡೆಯಲಿದೆ. ಇಲ್ಲಿನ ಕ್ರೀಡಾಂಗಣದಲ್ಲಿ ಎದುರಾಳಿ ತಂಡದ ನಾಯಕ ಕೀರನ್‌ ಪೊಲಾರ್ಡ್‌ ಜೊತೆಗೆ ಬ್ಯಾಟ್‌ ಹಿಡಿದು ಅಭ್ಯಾಸ ನಡೆಸಿದ್ದರು. ಆ ಸಂದರ್ಭದಲ್ಲಿ ತೆಗೆದ ಚಿತ್ರವನ್ನು ಚಾಹಲ್‌, ‘10 ಕೆ.ಜಿ ತೂಕದ ಬ್ಯಾಟ್‌, 2.5 ಕೆ.ಜಿ ತೂಕದ ಕೈ’ ಎಂಬ ಶೀರ್ಷಿಕೆಯೊಂದಿಗೆ ಶೇರ್‌ ಮಾಡಿಕೊಂಡಿದ್ದರು.

ಇದಕ್ಕೆ ಕಾಮೆಂಟ್‌ ಮಾಡಿರುವ ವಿರಾಟ್‌ ಕೊಹ್ಲಿ, ‘ನಿನ್ನ ತೊಡೆಗಿಂತ ಆತನ ಮೀನಖಂಡ (ಕಾಲಿನ ಸ್ನಾಯು) ದೊಡ್ಡದಾಗಿದೆ’ ಎಂದು ಬರೆದಿದ್ದಾರೆ. ಈ ಪೋಟೊ ವೈರಲ್‌ ಆಗಿದ್ದು, 29 ಸಾವಿರಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ.

 
 
 
 

 
 
 
 
 
 
 
 
 

10 kilo ka bat, 2.5 kilo ka haath !!

A post shared by Yuzvendra Chahal (@yuzi_chahal23) on

ವಿಂಡೀಸ್‌ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಚಾಹಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ. ಸ್ಪಿನ್‌ ಹೊಣೆಯನ್ನು ಕುಲದೀಪ್‌ ಯಾದವ್‌ ಮತ್ತು ರವೀಂದ್ರ ಜಡೇಜಾ ಹೊತ್ತಿರುವುದರಿಂದ ಹೀಗಾಗಿ ಅವರಿಗೆ ಮೂರನೇ ಪಂದ್ಯದಲ್ಲಿಯೂ ಸ್ಥಾನ ಸಿಗುವುದು ಅನುಮಾನ.

ಸರಣಿಯ ಮೊದಲ ಪಂದ್ಯದಲ್ಲಿ ವಿಂಡೀಸ್‌ ಎಂಟು ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.

ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದ್ದ ಭಾರತ, 107 ರನ್‌ಗಳಿಂದ ಗೆದ್ದು ಬೀಗಿತ್ತು. ಹೀಗಾಗಿ ಮೂರನೇ ಪಂದ್ಯವು ಕುತೂಹಲ ಕೆರಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು