ಶುಕ್ರವಾರ, ಮಾರ್ಚ್ 31, 2023
22 °C

ಮುಂದಿನ ವರ್ಷ ಎಬಿ ಡಿವಿಲಿಯರ್ಸ್ ಆರ್‌ಸಿಬಿಗೆ ವಾಪಸ್? ಕೊಹ್ಲಿ ಹೇಳಿದ್ದೇನು?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂದಿನ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸ್‌ಗೆ ಎಬಿ ಡಿವಿಲಿಯರ್ಸ್ ಮರಳುವ ನಂಬಿಕೆಯಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಆರ್‌ಸಿಬಿ ಯಶಸ್ಸಿನಲ್ಲಿ ಮಹತ್ತರ ಕೊಡುಗೆ ಸಲ್ಲಿಸಿರುವ ಎಬಿಡಿ, ಕಳೆದ ವರ್ಷ ಎಲ್ಲ ಪ್ರಕಾರದ ಕ್ರಿಕೆಟ್‌ಗೂ ವಿದಾಯ ಸಲ್ಲಿಸಿದ್ದರು.

ಇದನ್ನೂ ಓದಿ: 

'ನಾನು ಅವರನ್ನು (ಎಬಿಡಿ) ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಅವರೊಂದಿಗೆ ನಿಯಮಿತವಾಗಿ ಮಾತನಾಡುತ್ತೇನೆ. ಅವರು ಇತ್ತೀಚೆಗೆ ಅಮೆರಿಕದಲ್ಲಿ ಕುಟುಂಬದೊಂದಿಗೆ ಗಾಲ್ಫ್ ವೀಕ್ಷಿಸುತ್ತಿದ್ದರು. ಅವರು ಆರ್‌ಸಿಬಿ ಪ್ರದರ್ಶನವನ್ನು ನಿಕಟವಾಗಿ ವೀಕ್ಷಿಸುತ್ತಿದ್ದು, ಮುಂದಿನ ವರ್ಷ ಹೆಚ್ಚಿನ ಸಾಮರ್ಥ್ಯದೊಂದಿಗೆ ಮರಳುವ ಭರವಸೆ ಹೊಂದಿದ್ದೇನೆ' ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿದ್ದಾರೆ. 'ಮಿಸ್ಟರ್ 360 ಡಿಗ್ರಿ ಬ್ಯಾಟರ್' ಎಂದೇ ಖ್ಯಾತರಾಗಿರುವ ಎಬಿಡಿ ಜೊತೆಗೆ ಕಿಂಗ್ ಕೊಹ್ಲಿ ಹಲವಾರು ಸ್ಮರಣೀಯ ಜೊತೆಯಾಟದಲ್ಲಿ ಭಾಗಿಯಾಗಿದ್ದರು.

ಎಬಿಡಿ ಹಾಗೂ ವಿರಾಟ್ ಗೆಳೆತನ ಕ್ರಿಕೆಟ್ ಆಟಕ್ಕೂ ಮೀರಿದ್ದಾಗಿದೆ.

 

ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ ಅವರೊಂದಿಗೂ ಪರಸ್ಪರ ಗೌರವ ಹೊಂದಿರುವುದಾಗಿ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಅವರು (ಡುಪ್ಲೆಸಿ) ದಕ್ಷಿಣ ಆಫ್ರಿಕಾದ ನಾಯಕರಾಗುವುದಕ್ಕಿಂತ ಮೂದಲೇ ಉತ್ತಮ ಬಾಂಧವ್ಯ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು