ಹೊಸದುರ್ಗ: ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಜೂನಿಯರ್ ಕಾಲೇಜು ಆವರಣದಲ್ಲಿ ಎಲ್ಇಡಿ ಪರದೆಯಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದ ಅಭಿಮಾನಿಗಳು ಆರ್ಸಿಬಿ ಗೆಲುವನ್ನು ಸಂಭ್ರಮಿಸಿದರು.

ಮುಖಂಡರಾದ ಬಿ.ಜಿ. ಅರುಣ್ ಕುಮಾರ್ ಹಾಗೂ ದಳವಾಯಿ ವೆಂಕಟೇಶ್ ಅವರ ಸಹಕಾರದಿಂದ ಜೂನಿಯರ್ ಕಾಲೇಜು ಆವರಣದಲ್ಲಿ ದೊಡ್ಡ ಪರದೆ ಅಳವಡಿಸಲಾಗಿತ್ತು. ಸಂಜೆ 7 ಗಂಟೆ ಆಗುತ್ತಿದ್ದಂತೆಯೇ ಯುವಕರು, ಮಕ್ಕಳು, ಅಭಿಮಾನಿಗಳೆಲ್ಲಾ ಘೋಷಣೆ ಕೂಗುತ್ತ, ಆರ್ಸಿಬಿ ಜೆರ್ಸಿ ಹಾಕಿಕೊಂಡು ಆವರಣದಲ್ಲಿ ಜಮಾಯಿಸಿದ್ದರು.

‘ಸೋತರೂ ಗೆದ್ದರೂ ಆರ್ಸಿಬಿ ಮೇಲೆ ನಮ್ಮ ಪ್ರೀತಿ, ಅಭಿಮಾನ ಎಂದಿಗೂ ಕಡಿಮೆಯಾಗಲ್ಲ. 17 ವರ್ಷದಿಂದ ಆರ್ಸಿಬಿ ಅಭಿಮಾನಿಯಾಗಿ ಪಂದ್ಯ ವೀಕ್ಷಣೆ ಮಾಡುತ್ತಿದ್ದೇವೆ. 2025ರಲ್ಲಿ ಮೊದಲನೇ ಬಾರಿ ಕಪ್ ಗೆದ್ದ ಸಂದರ್ಭದಲ್ಲಿ ತಾಲ್ಲೂಕಿನಾದ್ಯಂತ ಒಂದು ವಾರ ಹಬ್ಬದ ವಾತಾವರಣ ಮನೆ ಮಾಡಿತ್ತು. ಈ ಬಾರಿಯೂ ಕಪ್ ಗೆದ್ದಿದ್ದೇವೆ. ತಾಲ್ಲೂಕಿನ ಯುವಕರು, ಪೊಲೀಸ್ ಇಲಾಖೆ, ಸಾರ್ವಜನಿಕರ ಸಹಕಾರದಿಂದ ಪಂದ್ಯ ವೀಕ್ಷಣೆ ಮಾಡಿದ್ದೇವೆ’ ಎಂದು ಮುಖಂಡ ದಳವಾಯಿ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಾದ್ಯಂತ ಆರ್ಸಿಬಿ ಅಭಿಮಾನಿಗಳು ಬಹಳ ಇದ್ದಾರೆ. ಪ್ರತಿ ವರ್ಷ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಈ ಬಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಕ್ರಿಕೆಟ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಯುವಕರು ಆರ್ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ ಎಂದು ಬಿ.ಜಿ. ಅರುಣ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-44-1276586566

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.