ಶನಿವಾರ, ಫೆಬ್ರವರಿ 27, 2021
30 °C

IND v AUS 4th Test: ರೋಹಿತ್ ಶರ್ಮಾ, ಗಿಲ್ ವಿಕೆಟ್ ಪತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುತ್ತಿರುವ ಭಾರತ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿದೆ. 

ಆರಂಭಿಕ ‌ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ(44), ಶುಭ್ಮನ್ ಗಿಲ್(7) ಕ್ರಮವಾಗಿ ನಥನ್ ಲಯೋನ್ ಮತ್ತು ಪ್ಯಟ್ ಕಮಿನ್ಸ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ. ಕ್ರೀಸ್‌ನಲ್ಲಿರುವ ಚೇತೇಶ್ವರ್ ಪೂಜಾರ ಮತ್ತು ನಾಯಕ ಅಜಿಂಕ್ಯ ರಹಾನೆ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ನಡೆಸಿದ್ದಾರೆ. ಟೀ ವಿರಾಮಕ್ಕೆ ಭಾರತ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು.

ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ 369 ರನ್‌ಗೆ ಕೊನೆಗೊಂಡಿತ್ತು. ನಾಯಕ ಟಿಮ್ ಪೇನ್ 50 ರನ್ ಗಳಿಸಿ ತಂಡದ ಮೊತ್ತ ಹೆಚ್ಚಲು ಕಾರಣರಾದರು. ಮೊದಲ ಟೆಸ್ಟ್ ಆಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ತಲಾ 3 ವಿಕೆಟ್ ಪಡೆದುಕೊಂಡು ಆಸಿಸ್ ರನ್ ವೇಗಕ್ಕೆ ಬ್ರೇಕ್ ಹಾಕಿದ್ದರು.

ಇವತ್ತು ಶಾರ್ದೂಲ್ ಠಾಕೂರ್ ಟಿಮ್ ಪೇನ್, ಪ್ಯಾಟ್ ಕಮಿನ್ಸ್ ವಿಕೆಟ್ ಪಡೆದರೆ,  ವಾಷಿಂಗ್ಟನ್ ಸುಂದರ್, ಕೆಮರೂನ್ ಗ್ರೀನ್ ಮತ್ತು ನಥನ್ ಲಯೋನ್ ವಿಕೆಟ್ ಪಡೆದರು. ನಟರಾಜನ್, ಜೋಶ್ ಹ್ಯಾಜಲ್‌ವುಡ್ ವಿಕೆಟ್ ಪಡೆದು ಇನ್ನಿಂಗ್ಸ್ ಮುಗಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು