ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮೊತ್ತದತ್ತ ಹೈದರಾಬಾದ್

ಕೂಚ್ ಬೆಹಾರ್‌ ಟ್ರೋಫಿ ಕ್ರಿಕೆಟ್ ಟೂರ್ನಿ
Last Updated 22 ನವೆಂಬರ್ 2019, 18:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆರಂಭಿಕ ಬ್ಯಾಟ್ಸ್‌ಮನ್‌ ಎ. ವೈಷ್ಣವ ರೆಡ್ಡಿ ಅವರ 95 ರನ್ ಗಳ ನೆರವಿನಿಂದ ಹೈದರಾಬಾದ್ ತಂಡ ಶುಕ್ರವಾರ ಆರಂಭವಾದ 19 ವರ್ಷದ ಒಳಗಿನವರ ಕೂಚ್ ಬೆಹಾರ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಸಾಗಿದೆ.

ಇಲ್ಲಿನ ರಾಜನಗರದಲ್ಲಿರುವ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ‌ ಮಾಡಿಕೊಂಡ ಹೈದರಾಬಾದ್ ತಂಡ ಮೊದಲ ದಿನದಾಟದ ಅಂತ್ಯಕ್ಕೆ 91 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 272 ರನ್ ಕಲೆ ಹಾಕಿದೆ.

ವೈಷ್ಣವ ರೆಡ್ಡಿ 162 ಎಸೆತಗಳನ್ನು ಎದುರಿಸಿದರು. ಅಬ್ದುಲ್ ವಾಹೀದ್ 34, ಪಿ. ಗೌರವ ರೆಡ್ಡಿ 35, ಅನಂತ ಪ್ರತೀಕ ರೆಡ್ಡಿ 34 ಹಾಗೂ ಎ.ಸಿ. ಗಂಗಮ್ (ಬ್ಯಾಟಿಂಗ್ 40) ರನ್ ಕಲೆ ಹಾಕಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.

ಹೈದರಾಬಾದ್ ತಂಡ 32 ರನ್ ಗಳಿಸುವಷ್ಟರಲ್ಲಿ ಆರಂಭದ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರದ ಬ್ಯಾಟ್ಸ್‌ಮನ್ ಗಳು ತಂಡಕ್ಕೆ ಆಸರೆಯಾದರು. ರಾಜ್ಯ ತಂಡದ ಕೆ.ಎಲ್. ರುದ್ರೇಶ, ಮೊಹಮ್ಮದ್ ಅಕಿಬ್ ಜಾವದ್, ಶಶಿಕುಮಾರ್ ಕಾಂಬ್ಳೆ ತಲಾ ಒಂದು ವಿಕೆಟ್ ಪಡೆದರೆ, ಪರಸ್ ಆರ್ಯ ಹಾಗೂ ಚಿನ್ಮಯ ನಿಂಗರಾಜ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು.

ಉತ್ತಮ ಅವಕಾಶ:ಫೆ. 15ರ ವರೆಗೆ ಈ ಟೂರ್ನಿ ನಡೆ ಯಲಿದ್ದು, ಇದೇ ಅವಧಿಯಲ್ಲಿ ರಣಜಿ ಟೂರ್ನಿ ಕೂಡ ಜರುಗಲಿದೆ‌. ಆದ್ದರಿಂದ ಯುವ ಆಟಗಾರರಿಗೆ ರಣಜಿ ತಂಡದಲ್ಲಿ ಸ್ಥಾನ ಪಡೆಯಲು ಈ ಟೂರ್ನಿ ಉತ್ತಮ ವೇದಿಕೆಯಾಗಿದೆ‌.

ಎಲೀಟ್ ಎ ಹಾಗೂ ಬಿ ಗುಂಪಿನಲ್ಲಿ ಒಟ್ಟು 18 ತಂಡಗಳಿವೆ. ಪ್ಲೇಟ್ ವಿಭಾಗದಲ್ಲಿ ಹತ್ತು ತಂಡಗಳು ಪೈಪೋಟಿ ನಡೆಸಲಿವೆ. ಎಲೀಟ್ ವಿಭಾಗದಲ್ಲಿ ಪ್ರತಿ ತಂಡಗಳು ತಲಾ ಎಂಟು ಪಂದ್ಯಗಳನ್ನು ಆಡಲಿವೆ. ಮುಂದಿನ ಎರಡು ಪಂದ್ಯ ಗಳಲ್ಲಿ ರಾಜ್ಯ ತಂಡ ಕ್ರಮವಾಗಿ ಗುಜರಾತ್ ಹಾಗೂ ವಿದರ್ಭ ತಂಡಗಳ ಸವಾಲು ಎದುರಿಸಲಿದೆ. ಕೂಚ್ ಬೆಹಾರಿ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ನಾಕೌಟ್ ಹಂತ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT