ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಷಭ್ ಪಂತ್ ಆಟಕ್ಕೆ ಮನಸೋತಿದ್ದೇನೆ, ಅವರೊಬ್ಬ ಮ್ಯಾಚ್ ವಿನ್ನರ್: ಸೌರವ್ ಗಂಗೂಲಿ

Last Updated 3 ಏಪ್ರಿಲ್ 2021, 12:52 IST
ಅಕ್ಷರ ಗಾತ್ರ

ನವದೆಹಲಿ: ಟೀಮ್ ಇಂಡಿಯಾದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಆಟಕ್ಕೆ ಮನಸೋತಿದ್ದೇನೆ. ನಿಜಕ್ಕೂ ಅವರೊಬ್ಬ ಮ್ಯಾಚ್ ವಿನ್ನರ್ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನೋಡುವುದನ್ನು ಹೆಚ್ಚು ಇಷ್ಟಪಡುತ್ತೇನೆ ಎಂದೂ ಅವರು ಹೇಳಿದ್ದಾರೆ.

ತಂಡದಲ್ಲಿ ಅನೇಕ ಅದ್ಭುತ ಆಟಗಾರರಿದ್ದಾರೆ. ಬಿಸಿಸಿಐ ಅಧ್ಯಕ್ಷರಾಗಿದ್ದುಕೊಂಡು ನನ್ನ ನೆಚ್ಚಿನ ಆಟಗಾರ ಯಾರು ಎಂಬುದನ್ನು ಹೇಳುವುದು ಸರಿಯಲ್ಲ. ಎಲ್ಲರೂ ನೆಚ್ಚಿನ ಆಟಗಾರರೇ. ಆದರೆ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟಿಂಗನ್ನು ಆಸ್ವಾದಿಸುತ್ತೇನೆ ಎಂದು ಆನ್‌ಲೈನ್ ಟ್ಯುಟೋರಿಯಲ್ ಆ್ಯಪ್ ‘ಕ್ಲಾಸ್‌ಪ್ಲಸ್’ ನಡೆಸಿದ ಸಂವಾದದಲ್ಲಿ ಅವರು ಹೇಳಿದ್ದಾರೆ.

ರಿಷಭ್ ಪಂತ್ ಆಟಕ್ಕೆ ನಾನು ಮನಸೋತಿದ್ದೇನೆ. ಯಾಕೆಂದರೆ ಅವರೊಬ್ಬ ಮ್ಯಾಚ್ ವಿನ್ನರ್ ಆಟಗಾರ ಎಂದು ನಾನು ಭಾವಿಸಿದ್ದೇನೆ. ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಕೂಡ ಒಳ್ಳೆಯ ಆಟಗಾರರು. ಶಾರ್ದೂಲ್ ಠಾಕೂರ್ ಅವರ ಆಟವನ್ನು ಇಷ್ಟಪಡುತ್ತೇನೆ. ಯಾಕೆಂದರೆ ಅವರು ಧೈರ್ಯವಂತ ಆಟಗಾರ ಎಂದು ಗಂಗೂಲಿ ಹೇಳಿದ್ದಾರೆ.

ಭಾರತದಲ್ಲಿ ಅಪಾರ ಕ್ರಿಕೆಟ್ ಪ್ರತಿಭೆಗಳಿವೆ. ಸುನಿಲ್ ಗವಾಸ್ಕರ್ ಅವರು ಆಡುತ್ತಿದ್ದ ಕಾಲದಲ್ಲಿ ಅವರ ನಂತರ ಯಾರು ಎಂದು ಜನ ಯೋಚಿಸುತ್ತಿದ್ದರು. ಅವರ ನಂತರ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಬಂದರು. ತೆಂಡೂಲ್ಕರ್, ದ್ರಾವಿಡ್ ನಿವೃತ್ತರಾದ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್ ತಂಡವನ್ನು ಸೇರಿಕೊಂಡರು. ಭಾರತದಲ್ಲಿ ಸಾಕಷ್ಟು ಕ್ರಿಕೆಟ್ ಪ್ರತಿಭೆಗಳಿವೆ. ಪ್ರತಿ ತಲೆಮಾರಿನಲ್ಲೂ ವಿಶ್ವ ತಂಡಗಳ ವಿರುದ್ಧ ಗೆಲುವು ತಂದುಕೊಡಬಲ್ಲ ಆಟಗಾರರನ್ನು ಭಾರತ ನೀಡಬಲ್ಲದು ಎಂದು ನಾನು ಭಾವಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT