ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲ್‌ ಕ್ಯಾಪ್ಟನ್ ಧೋನಿಗೂ ಸಿಟ್ಟು ಬರುತ್ತಿತ್ತು: ಗೌತಮ್‌ ಗಂಭೀರ್

ಘಟನೆ ಮೆಲುಕು ಹಾಕಿದ ಇರ್ಫಾನ್ ಪಠಾಣ್, ಗೌತಮ್ ಗಂಭೀರ್
Last Updated 13 ಮೇ 2020, 2:41 IST
ಅಕ್ಷರ ಗಾತ್ರ

ಮುಂಬೈ : ಶಾಂತ ಸ್ವಭಾವದ ‘ನಾಯಕ’ನೆಂದೇ ಹೆಸರಾಗಿರುವ ಮಹೇಂದ್ರಸಿಂಗ್ ಧೋನಿ ಅವರೂ ಹಲವು ಬಾರಿ ಸಿಟ್ಟಿಗೆದ್ದಿದ್ದರಂತೆ!

‘ಧೋನಿ ಸಿ್ಡುಕಿದ್ದನ್ನು ನೋಡಿಯೇ ಇಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ನಾನು ಒಂದೆರಡು ಸಲ ನೋಡಿದ್ದೇನೆ. 2007ರ ವಿಶ್ವಕಪ್ ಮತ್ತು ಇನ್ನಿತರ ವಿಶ್ವಕಪ್ ಟೂರ್ನಿಗಳಲ್ಲಿ ನಾವು ಚೆನ್ನಾಗಿ ಆಡದ ಸಂದರ್ಭದಲ್ಲಿ ಅವರು ಸಿಟ್ಟಿಗೆದ್ದ ಸಂದರ್ಭಗಳು ಇದ್ದವು’ ಎಂದು ಹಿರಿಯ ಕ್ರಿಕೆಟಿಗ ಮತ್ತು ಸಂಸದ ಗೌತಮ್ ಗಂಭೀರ್ ಹೆಳಿದ್ದಾರೆ.

‘ಧೋನಿ ಕೂಡ ಮನುಷ್ಯರೇ. ಅವರು ಸಂದರ್ಭಗಳಿಗೆ ಪ್ರತಿಕ್ರಿಯಿಸುವುದು ಸಹಜ. ಸಿಟ್ಟು ತೋರಿಸಿದ್ದರಲ್ಲಿ ತಪ್ಪೇನಿಲ್ಲ. ಆದರೆ ನಾನು ನೋಡಿದ ಹಾಗೆ ಬೇರೆಲ್ಲ ನಾಯಕರಿಗಿಂತಲೂ ಹೆಚ್ಚು ಶಾಂತ ಸ್ವಭಾವಿಯಾಗಿದ್ದವರು ಧೋನಿ. ಅವರು ನನಗಿಂತಲೂ ಸಮಾಧಾನಚಿತ್ತರು’ ಎಂದು ಸ್ಟಾರ್ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಗಂಭೀರ್ ಶ್ಲಾಘಿಸಿದ್ದಾರೆ.

ಇಂತಹದೇ ಘಟನೆಯನ್ನು ನೆನಪಿಸಿಕೊಂಡಿರುವ ಆಲ್‌ರೌಂಡರ್ ಇರ್ಫಾನ್ ಪಠಾಣ್, ‘2006–07ರ ಸಂದರ್ಭ. ಅಭ್ಯಾಸ ಪಂದ್ಯವೊಂದರಲ್ಲಿ ಧೋನಿಯವರನ್ನು ಔಟ್ ಎಂದು ತೀರ್ಪು ನೀಡಲಾಗಿತ್ತು. ಆಗ ಅವರು ಡ್ರೆಸ್ಸಿಂಗ್ ರೂಮ್‌ಗೆ ಮರಳಿ ತಮ್ಮ ಕೈಯಲ್ಲಿದ್ದ ಬ್ಯಾಟ್‌ ಅನ್ನು ಬೀಸಿ ಒಗೆದಿದ್ದರು. ನಂತರದ ನೆಟ್ಸ್‌ ಅಭ್ಯಾಸಕ್ಕೂ ಅವರು ತಡವಾಗಿ ಬಂದಿದ್ದರು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT