ಕೋಲ್ಕತ್ತ: ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಆಟಗಾರರಿಗೆ ಕೋಲ್ಕತ್ತದಿಂದ ತವರಿಗೆ ಮರಳಲು ಐಸಿಸಿಯು ಮಂಗಳವಾರ ಪ್ರತ್ಯೇಕ ವಿಮಾನಗಳ ವ್ಯವಸ್ಥೆ ಮಾಡಿದೆ. ಈ ಮೊದಲು ಬಾಡಿಗೆ (ಚಾರ್ಟರ್) ವಿಮಾನದಲ್ಲಿ ಮಾಡಿದ ಪ್ರಯಾಣ ವ್ಯವಸ್ಥೆಯಲ್ಲಿ ತಾಂತ್ರಿಕ ಅಡಚಣೆ ಕಂಡುಬಂದ ಕಾರಣ ಪರ್ಯಾಯ ವ್ಯವಸ್ಥೆ ಮಾಡಲಾಯಿತು.

‘ಆಟಗಾರರಿಗೆ ಪ್ರತ್ಯೇಕ ವಿಮಾನಗಳಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಂದೇ ತಂಡದ ಎಲ್ಲರಿಗೂ ಒಂದೇ ವಿಮಾನದಲ್ಲಿ ಟಿಕೆಟ್ಗಳನ್ನು ಕಾದಿರಿಸಲು ಸಾಧ್ಯವಾಗಿಲ್ಲ. ಆದರೆ ಐಸಿಸಿಯ ಅವರ ಪ್ರಯಾಣ ವ್ಯವಸ್ಥೆ ನೋಡಿಕೊಂಡಿದೆ. ಐಸಿಸಿ ಅಧ್ಯಕ್ಷ ಜಯ್ ಶಾ ಅವರು ವೈಯಕ್ತಿಕವಾಗಿ ಆಟಗಾರರ ಜೊತೆ ಮಾತನಾಡಿದ್ದಾರೆ. ಸುರಕ್ಷಿತವಾಗಿ ತವರಿಗೆ ತಲುಪಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.

ವೆಸ್ಟ್ ಇಂಡೀಸ್ ತಂಡದ ಡ್ಯಾರೆನ್ ಸಮಿ ಸೋಮವಾರ ರಾತ್ರಿಯೇ ತವರಿಗೆ ಪ್ರಯಾಣ ಬೆಳೆಸಿದ್ದರು.

ವೆಸ್ಟ್ ಇಂಡೀಸ್ ಮಾರ್ಚ್ 1ರಂದು ಈಡನ್ಗಾರ್ಡನ್ನಲ್ಲಿ ತನ್ನ ಕೊನೆಯ ಸೂಪರ್ ಎಂಟರ ಹಂತದ ಪಂದ್ಯ ಆಡಿದ್ದು ಭಾರತಕ್ಕೆ ಸೋತಿತ್ತು. ಆದರೆ ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಸಂಘರ್ಷದ ಪರಿಣಾಮ ವಾಯುಪ್ರದೇಶ ನಿರ್ಬಂಧದಿಂದ ತಂಡ ತವರಿಗೆ ಮರಳಲು ಸಾಧ್ಯವಾಗಿಲ್ಲ.

ಐಸಿಸಿಯ ವಿಮಾನಯಾನ ಪಾಲುದಾರನಾಗಿರುವ ಎಮಿರೇಟ್ಸ್, ಕೊಲ್ಲಿ ರಾಷ್ಟ್ರಗಳ ಮೂಲಕ ಪ್ರಯಾಣ ಜಾಲ ಹೊಂದಿದೆ. ಆದರೆ ದುಬೈ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡ ಕಾರಣ ವಿಮಾನಯಾನ ಸಾಧ್ಯವಾಗಿಲ್ಲ.

ಇದಕ್ಕೆ ಮೊದಲು, ತಂಡಗಳ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದ ಬಾಡಿಗೆ ವಿಮಾನ ಮಂಗಳವಾರ ಸಂಜೆ ಕೋಲ್ಕತ್ತದಿಂದ ಜೋಹಾನ್ಸ್ಬರ್ಗ್ಗೆ ತೆರಳಬೇಕಿತ್ತು. ಅಲ್ಲಿಂದ ವೆಸ್ಟ್ ಇಂಡೀಸ್ ತಂಡ ಅದೇ ವಿಮಾನದಲ್ಲಿ ಆ್ಯಂಟಿಗಾಕ್ಕೆ ಪ್ರಯಾಣಿಸಬೇಕಾಗಿತ್ತು. ಆದರೆ ಪ್ರಯಾಣ ವ್ಯವಸ್ಥೆಯಲ್ಲಿ ಕಂಡುಬಂದ ತಾಂತ್ರಿಕ ಅಡಚಣೆಯ ಕಾರಣ ಈ ಯೋಜನೆ ರದ್ದಾಯಿತು ಎಂದು ಮೂಲವೊಂದು ತಿಳಿಸಿದೆ.

ವೆಸ್ಟ್ ಇಂಡೀಸ್ನ 12 ಆಟಗಾರರು ನೆರವು ಸಿಬ್ಬಂದಿಯೊಂದಿಗೆ ಕೋಲ್ಕತ್ತದಲ್ಲೇ ಉಳಿದಿದ್ದಾರೆ. ದಕ್ಷಿಣ ಆಫ್ರಿಕಾದ 12 ಆಟಗಾರರು, ಇಬ್ಬರು ನೆರವು ಸಿಬ್ಬಂದಿ ಬಾಕಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.