ಭಾನುವಾರ, ಸೆಪ್ಟೆಂಬರ್ 22, 2019
22 °C

ಆ್ಯರನ್–ವಾರ್ನರ್ ಶತಕದ ಜತೆಯಾಟ| ಬೃಹತ್ ಮೊತ್ತದತ್ತ ಆಸಿಸ್

Published:
Updated:

ಟಾಂಟನ್(ಇಂಗ್ಲೆಂಡ್): ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ನಾಯಕ ಆ್ಯರನ್ ಫಿಂಚ್‌ ಹಾಗೂ ಡೇವಿಡ್‌ ವಾರ್ನರ್‌ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಬೃಹತ್‌ ಮೊತ್ತದತ್ತ ಹೆಜ್ಜೆ ಇಟ್ಟಿದೆ.

ವಿಶ್ವಕಪ್‌ ಪಂದ್ಯಾವಳಿಯ 17ನೇ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮದ್ ಲೆಕ್ಕಾಚಾರವನ್ನು ತಲೆಕೆಳಗು ಮಾಡುವಂತೆ ವಾರ್ನರ್‌ ಹಾಗೂ ಫಿಂಚ್‌ ಬ್ಯಾಟ್‌ ಬೀಸಿದರು. 22.1 ಓವರ್‌ ವರೆಗೆ ಆಡಿದ ಈ ಜೋಡಿ ಮೊದಲ ವಿಕೆಟ್‌ಗೆ 146ರನ್‌ ಕಲೆ ಹಾಕಿತು.

84 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 82ರನ್‌ ಗಳಿಸಿ ಶತಕದತ್ತ ಮುನ್ನಡೆದಿದ್ದ ಫಿಂಚ್‌ ಮೊಹಮ್ಮದ್‌ ಆಮೀರ್‌ ಬೌಲಿಂಗ್‌ನಲ್ಲಿ ಮೊಹಮ್ಮದ್‌ ಅಫೀಜ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಬಳಿಕ ಬಂದ ಸ್ಟೀವ್ ಸ್ಮಿತ್‌ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. 10ರನ್‌ ಗಳಿಸಿದ್ದ ವೇಳೆ ಹಫೀಜ್‌ ಎಸೆತದಲ್ಲಿ ಪೆವಿಲಿಯನ್‌ ಸೇರಿಕೊಂಡರು.

ಸದ್ಯ ವಾರ್ನರ್‌(82) ಜೊತೆಗೆ ಗ್ಲೇನ್‌ ಮ್ಯಾಕ್ಸ್‌ವೆಲ್‌ ಕ್ರೀಸ್‌ನಲ್ಲಿದ್ದು, ಆಸ್ಟ್ರೇಲಿಯಾ 30 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್‌ ಕಳೆದುಕೊಂಡು 191ರನ್‌ ಕಲೆ ಹಾಕಿದೆ.

Post Comments (+)