ವಾರ್ನರ್ ಶತಕ, ಫಿಂಚ್ ಅರ್ಧ ಶತಕ| ಪಾಕಿಸ್ತಾನಕ್ಕೆ 308ರನ್ ಗುರಿ ನೀಡಿದ ಆಸಿಸ್

ಬುಧವಾರ, ಜೂನ್ 19, 2019
25 °C

ವಾರ್ನರ್ ಶತಕ, ಫಿಂಚ್ ಅರ್ಧ ಶತಕ| ಪಾಕಿಸ್ತಾನಕ್ಕೆ 308ರನ್ ಗುರಿ ನೀಡಿದ ಆಸಿಸ್

Published:
Updated:

ಟಾಂಟನ್(ಇಂಗ್ಲೆಂಡ್): ಹಿಂದಿನ ಪಂದ್ಯದಲ್ಲಿ ಭಾರತದೆದುರು 36ರನ್‌ ಅಂತರದ ಸೋಲು ಕಂಡು ಜಯದ ಲಯಕ್ಕೆ ಮರಳುವತ್ತ ಚಿತ್ತ ನೆಟ್ಟಿದ್ದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಇಂದು ಪಾಕಿಸ್ತಾನ ಬೌಲರ್‌ಗಳನ್ನು ಕಾಡಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆ್ಯರನ್‌ ಫಿಂಚ್‌ ಹಾಗೂ ಡೇವಿಡ್‌ ವಾರ್ನರ್‌ ಅವರ ಭರ್ಜರಿ ಬ್ಯಾಟಿಂಗ್‌ ಬಲದಿಂದ ಆಸ್ಟ್ರೇಲಿಯಾ 307ರನ್ ಕಲೆ ಹಾಕಿದೆ.

ಫಿಂಚ್‌ ವಾರ್ನರ್‌ ಜೋಡಿ ಮೊದಲ ವಿಕೆಟ್‌ಗೆ 22.1 ಓವರ್‌ಗಳಲ್ಲಿ 146ರನ್ ಗಳಿಸಿತು. ಫಿಂಚ್‌(82) ಔಟಾದ ಬಳಿಕವೂ ಉತ್ತಮವಾಗಿ ಆಡಿದ ವಾರ್ನರ್‌ 111 ಎಸೆತಗಳಲ್ಲಿ 107ರನ್‌ ಗಳಿಸಿದರು.

ಒಂದು ಹಂತದಲ್ಲಿ ಕೇವಲ 2ವಿಕೆಟ್‌ಗೆ 200ರನ್‌ ಗಳಿಸಿದ್ದ ಆಸ್ಟ್ರೇಲಿಯಾ 350ರ ಗಡಿ ದಾಟುವ ಲೆಕ್ಕಾಚಾರದಲ್ಲಿತ್ತು. ಆದರೆ, ಡೇವಿಡ್‌ ವಾರ್ನರ್‌ ವಿಕೆಟ್‌ ಪತನದ ರನ್‌ ಗತಿ ಇಳಿಯಿತು. 37.5ನೇ ಓವರ್‌ನಲ್ಲಿ ವಾರ್ನರ್‌ ಔಟಾದಾಗ ಆಸಿಸ್‌ 242ರನ್‌ ಗಳಿಸಿತ್ತು. ಬಳಿಕ ಲಯಕ್ಕೆ ಮರಳಿದಂತೆ ಆಡಿದ ಪಾಕ್‌ ಬೌಲರ್‌ಗಳು ರನ್‌ ವೇಗಕ್ಕೆ ತಕ್ಕ ಮಟ್ಟಿಗೆ ಕಡಿವಾಣ ಹಾಕಿದರು.

ಉಸ್ಮಾನ್‌ ಖ್ವಾಜಾ, ಶಾನ್‌ ಮಾರ್ಸ್‌ ಸೇರಿದಂತೆ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್‌ ಗಳಿಸದ ಕಾರಣ ನಿರೀಕ್ಷಿತ ಲೆಕ್ಕಾಚಾರ ತಲುಪಲು ವಿಫಲವಾದ ಆಸ್ಟ್ರೇಲಿಯಾ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಆಲೌಟ್‌ ಆಯಿತು.

ಹತ್ತು ಓವರ್‌ಗಳಲ್ಲಿ ಕೇವಲ 30ರನ್‌ ನೀಡಿದ ಮೊಹಮ್ಮದ್‌ ಅಮೀರ್‌ 5 ವಿಕೆಟ್‌ ಪಡೆದು ಮಿಂಚಿದರು.

ಲೈವ್‌ ಸ್ಕೋರ್‌ ಬೋರ್ಡ್‌ ನೋಡಲು ಇಲ್ಲಿ ಕ್ಲಿಕ್ಕಿಸಿ: ಆಸ್ಟ್ರೇಲಿಯಾ vs ಪಾಕಿಸ್ತಾನ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !