ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನಕ್ಕೆ ಆಸಿಸ್ ವೇಗದ ಆಘಾತ

Last Updated 12 ಜೂನ್ 2019, 15:44 IST
ಅಕ್ಷರ ಗಾತ್ರ

ಟಾಂಟನ್‌: ಆಸ್ಟ್ರೇಲಿಯಾ ನೀಡಿರುವ 308ರನ್‌ಗಳ ಸವಾಲಿನ ಗುರಿ ಬೆನ್ನತ್ತಿರುವ ಪಾಕಿಸ್ತಾನ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ವೇಗಿಗಳಾದ ಪ್ಯಾಟ್‌ ಕಮಿನ್ಸ್‌ ಹಾಗೂನೇಥನ್ ಕಾಲ್ಟರ್‌ನೇಲ್ ತಲಾ ಒಂದು ವಿಕೆಟ್‌ ಪಡೆದು ಪಾಕ್‌ ಜಯದ ಆಸೆಗೆ ಪೆಟ್ಟು ನೀಡಿದ್ದಾರೆ.

ಇಮಾಮ್‌ ಉಲ್‌ ಹಕ್‌(53) ಜೊತೆ ಇನಿಂಗ್ಸ್‌ ಆರಂಭಿಸಿದ ಫಕರ್‌ ಜಮಾನ್‌, ಕಮಿನ್ಸ್‌ ಎಸೆತದಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ ಸೇರಿಕೊಂಡರು. ಬಳಿಕ ಬಂದ ಬಾಬರ್‌ ಅಜಾಂ ಎರಡನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವಾಡುವ ಮೂಲಕ ಅಲ್ಪ ಚೇತರಿಕೆ ನೀಡಿದರಾದರೂ ದೊಡ್ಡ ಮೊತ್ತ ಗಳಿಸಲು ವಿಫಲವಾದರು. 28 ಎಸೆತಗಳಲ್ಲಿ 7 ಬೌಂಡರಿ ಸಹಿತ 30ರನ್‌ ಗಳಿಸಿದ್ದ ವೇಳೆ ಕಾಲ್ಟರ್‌ನೇಲ್‌ಗೆ ವಿಕೆಟ್‌ ಒಪ್ಪಿಸಿದರು. ಈ ಇಬ್ಬರ ಕ್ಯಾಚ್‌ಗಳನ್ನುಕೇನ್ ರಿಚರ್ಡ್ಸನ್ ಪಡೆದರು.

ಅನುಭವಿ ಆಲ್ರೌಂಡರ್‌ ಮೊಹಮ್ಮದ್‌ ಹಫೀಜ್‌ ಹಾಗೂ ಇಮಾಮ್‌ಮೂರನೇ ವಿಕೆಟ್‌ಗೆ 80ರನ್‌ ಗಳಿಸುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ, ಕಮಿನ್ಸ್‌ ಈ ಜೋಡಿಯನ್ನು ಬೇರ್ಪಡಿಸಿದರು. ಹಫೀಜ್ ಕೂಡ 46 ರನ್‌ ಗಳಿಸಿಇಮಾಮ್‌ ಹಾದಿಯಲ್ಲೇ ಪೆವಿಲಿಯನ್‌ ಸೇರಿಕೊಂಡರು. ಮತ್ತೊಬ್ಬ ಅನುಭವಿಶೋಯಬ್ ಮಲಿಕ್ ಎರಡು ಎಸೆತಗಳಲ್ಲಿ ಸೊನ್ನೆ ಸುತ್ತಿದರು.

ಸದ್ಯ ನಾಯಕಸರ್ಫರಾಜ್‌ ಅಹಮದ್‌ ಹಾಗೂ ಆಸಿಫ್‌ ಅಲಿ ಕ್ರೀಸ್‌ನಲ್ಲಿದ್ದು, ಕ್ರಮವಾಗಿ 12 ಮತ್ತು 4 ರನ್‌ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ ಇನ್ನೂ 151 ರನ್‌ ಗಳಿಸಿಬೇಕಿದೆ.

ಲೈವ್‌ ಸ್ಕೋರ್‌ಗಾಗಿಇಲ್ಲಿ ಕ್ಲಿಕ್ಕಿಸಿ:ಆಸ್ಟ್ರೇಲಿಯಾ vs ಪಾಕಿಸ್ತಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT