ಭಾರತ–ನ್ಯೂಜಿಲೆಂಡ್‌ ಪಂದ್ಯಕ್ಕೆ ಮಳೆ ಕಾಟ: ಸಂಜೆ 6ಕ್ಕೆ ಪಿಚ್‌ ಪರಿಶೀಲನೆ

ಶುಕ್ರವಾರ, ಜೂನ್ 21, 2019
22 °C
ಬ್ಲಾಕ್ ಕ್ಯಾಪ್ಸ್ vs ಮೆನ್ ಇನ್ ಬ್ಲೂ

ಭಾರತ–ನ್ಯೂಜಿಲೆಂಡ್‌ ಪಂದ್ಯಕ್ಕೆ ಮಳೆ ಕಾಟ: ಸಂಜೆ 6ಕ್ಕೆ ಪಿಚ್‌ ಪರಿಶೀಲನೆ

Published:
Updated:

ನಾಟಿಂಗಂ: ಈ ಬಾರಿಯ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ಕಂಡಿರುವ ನ್ಯೂಜಿಲೆಂಡ್‌(3) ಹಾಗೂ ಭಾರತ(2) ತಂಡಗಳು ಇಲ್ಲಿನ ಟ್ರೆಂಟ್‌ಬ್ರಿಜ್‌ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿದ್ದು, ಮಳೆಯಿಂದಾಗಿ ಪಂದ್ಯ ಆರಂಭ ವಿಳಂಬವಾಗಿದೆ.

ಈಗಾಗಲೇ ಮೈದಾನದಲ್ಲಿ ಓಡಾಡಿ ಪರಿಶೀಲನೆ ನಡೆಸಿದ್ದು, ತೇವಾಂಶ ಹೆಚ್ಚಿರುವ ಕಾರಣ ಕಾಯುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಈಗ ಊಟದ ವಿರಾಹ ಘೋಷಣೆಯಾಗಿದ್ದು, ಸಂಜೆ 6ಕ್ಕೆ ಮತ್ತೊಮ್ಮೆ ಪಿಚ್‌ ಪರಿಶೀಲನೆ ನಡೆಯಲಿದೆ. 

ಕೇನ್‌ ವಿಲಿಯಮ್ಸನ್‌ ನೇತೃತ್ವದ ಕಿವೀಸ್‌ ಪಡೆ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನ ತಂಡಗಳ ಎದುರು ಕ್ರಮವಾಗಿ 10, 2, 7 ವಿಕೆಟ್‌ ಗಳಿಂದ ಜಯ ಸಾಧಿಸಿದೆ. ವಿರಾಟ್‌ ಕೊಹ್ಲಿ ನೇತೃತ್ವದ ಬಲಿಷ್ಠ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದೆ. ಹೀಗಾಗಿ ಗೆಲುವಿನ ಲಯ ಉಳಿಸಿಕೊಂಡು ಮುಂದುವರಿಯುವ ತವಕ ಎರಡೂ ತಂಡಗಳದ್ದು.

ವಿಶ್ವಕಪ್‌ ಪಂದ್ಯಾವಳಿಯಲ್ಲಿ ಉಭಯ ತಂಡಗಳು ಇದುವರೆಗೆ 7 ಬಾರಿ ಮುಖಾಮುಖಿಯಾಗಿವೆ. ನಾಲ್ಕರಲ್ಲಿ ನ್ಯೂಜಿಲೆಂಡ್ ಹಾಗೂ ಮೂರರಲ್ಲಿ ಭಾರತ ಗೆಲುವು ಕಂಡಿವೆ. ಈ ಪಂದ್ಯ ಗೆದ್ದು ಸಮಬಲ ಸಾಧಿಸುವ ಅವಕಾಶ ಕೊಹ್ಲಿ ಪಡೆಗೆ ಇದೆ. ಅಂತರ ಹೆಚ್ಚಿಸಿಕೊಳ್ಳುವ ಅವಕಾಶ ಕೇನ್‌ ಬಳಗಕ್ಕೂ ಇದೆ.

ಅಷ್ಟೇನು ಪ್ರಬಲವಲ್ಲದ ತಂಡಗಳ ವಿರುದ್ಧ ಗೆಲುವು ಕಂಡಿರುವ ಕೇನ್‌ ಪಡೆಯನ್ನು ಕಾಡಲು ಕೊಹ್ಲಿ ಮತ್ತು ತಂಡ ಸಜ್ಜಾಗಿದೆ.

ಖದರ್‌ ತೋರಲು ‘ಗಬ್ಬರ್‌’ ಇಲ್ಲ
ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ಅಬ್ಬರಿಸಿದ್ದ ‘ಗಬ್ಬರ್‌’ ಶಿಖರ್‌ ಧವನ್‌ ಗಾಯಗೊಂಡು ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಆಡಲಿದ್ದು ರೋಹಿತ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸಲಿದ್ದಾರೆ.

ರಿಷಭ್‌ಗೆ ಬುಲಾವ್
ಶಿಖರ್ ಧವನ್ ಅವರ ಬದಲಿಗೆ ಯುವ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಭಾರತ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದೇ ಭಾನುವಾರ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದ ವೇಳೆಗೆ ರಿಷಭ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಪಂತ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಗಳಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದರು. ಐಪಿಎಲ್‌ನಲ್ಲಿಯೂ  ಉತ್ತಮವಾಗಿ ಆಡಿದ್ದರು.

‘ಇಂಗ್ಲೆಂಡ್‌ಗೆ ಬರಲಿರುವ ಪಂತ್ ಅವರು ಭಾರತದ ಡ್ರೆಸ್ಸಿಂಗ್ ರೂಮ್‌ನಲ್ಲಿರುವುದಿಲ್ಲ. ಭ್ರಷ್ಟಾಚಾರ ನಿಗ್ರಹ ತಡೆ ಕಾಯಿದೆಯಡಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಆದ್ದರಿಂದ ರಿಷಭ್ ಅವರು ಎಡಗೈ ಬೌಲರ್ ಖಲೀಲ್ ಅಹಮದ್ ಅವರ ಜೊತೆಗೆ ಪ್ರಯಾಣಿಸಲಿದ್ದಾರೆ. ಮ್ಯಾಂಚೆಸ್ಟರ್ ತಲುಪಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !