ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಚ್‌ನಲ್ಲಿ ತೇವ, ಟಾಸ್ ವಿಳಂಬ| ಕಿವೀಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತ ಪಾಕ್?

Last Updated 26 ಜೂನ್ 2019, 12:30 IST
ಅಕ್ಷರ ಗಾತ್ರ

ಬರ್ಮಿಂಗಂ:ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಲು ಹೆಣಗಾಡುತ್ತಿರುವ ಪಾಕಿಸ್ತಾನ ಹಾಗೂ ಸತತ ಗೆಲುವಿನ ಲಯದಲ್ಲಿರುವ ನ್ಯೂಜಿಲೆಂಡ್‌ ತಂಡ ಇಲ್ಲಿನಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಇಂದು ಮುಖಾಮುಖಿಯಾಗುತ್ತಿವೆ.ಕ್ರೀಡಾಂಗಣದಲ್ಲಿ ತೇವ ಇರುವುದರಿಂದ ಟಾಸ್‌ ವಿಳಂಬವಾಗಿದ್ದು, ಪಂದ್ಯವೂ ತಡವಾಗಿ ಆರಂಭವಾಗಲಿದೆ.

ಟಾಸ್‌ ಗೆದ್ದ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಬ್ಯಾಟಿಂಗ್ಆಯ್ಕೆ ಮಾಡಿಕೊಂಡಿದ್ದಾರೆ. ಈ ತಂಡ ಟೂರ್ನಿಯಲ್ಲಿ ಇದುವರೆಗೆ ಒಂದೂ ಪಂದ್ಯ ಸೋತಿಲ್ಲ. ಅನುಭವಿ ಟ್ರೆಂಟ್‌ ಬೌಲ್ಟ್‌ ಹಾಗೂಲಾಕಿ ಫರ್ಗ್ಯುಸನ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ಇಂಡೀಸ್‌ ತಂಡದ ವಿರುದ್ಧ ಶತಕ ಸಿಡಿಸಿದ್ದ ಕೇನ್‌, ಕಿವೀಸ್‌ ಬ್ಯಾಟಿಂಗ್‌ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ.ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ ಅವರು ಸ್ಥಿರ ಪ್ರದರ್ಶನ ತೋರಲು ವಿಫಲವಾಗುತ್ತಿರುವುದು ತಂಡದ ತಲೆನೋವಾಗಿದೆ.

ಆಡಿರುವ ಆರರಲ್ಲಿ ಮೂರು ಪಂದ್ಯ ಸೋತು, ಎರಡರಲ್ಲಿ ಗೆದ್ದಿರುವ ಪಾಕಿಸ್ತಾನದ ಒಂದು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಪಾಯಿಂಟ್‌ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿರುವ ಪಾಕ್‌ಪರಬಾಬರ್ ಅಜಂ ಮತ್ತು ಹ್ಯಾರಿಸ್ ಸೊಹೈಲ್ ಉತ್ತಮವಾಗಿ ಆಡಿದ್ದಾರೆ. ಉಳಿದ ಆಟಗಾರರು ಸಾಮರ್ಥ್ಯಕ್ಕೆ ತಕ್ಕ ಆಟ ಆಡಿಲ್ಲ.ಮೊಹಮ್ಮದ್ ಅಮೀರ್, ವಹಾಬ್ ರಿಯಾಜ್ ಹಾಗೂ ಶಾಬದ್ ಖಾನ್‌ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗವೂ ಚೆನ್ನಾಗಿದೆ. ಹೀಗಾಗಿ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಿದರೆ ಮಾತ್ರ ಕೇನ್‌ ಬಳಗವನ್ನು ಕಟ್ಟಿ ಹಾಕಲು ಸಾಧ್ಯ. ಈ ಪಂದ್ಯ ಗೆದ್ದರೆಸರ್ಫರಾಜ್‌ ಅಹ್ಮದ್‌ ಬಳಗದ ಸೆಮಿಫೈನಲ್‌ ತಲುಪುವ ಆಸೆ ಜೀವಂತ ಉಳಿಯಲಿದೆ.

ತಂಡಗಳು
ನ್ಯೂಜಿಲೆಂಡ್:ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಲಾಕಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಕಾಲಿನ್ ಮನ್ರೊ, ಜಿಮ್ಮಿ ನಿಶಾಮ್, ಹೆನ್ರಿ ನಿಕೊಲ್ಸ್, ಮಿಷೆಲ್ ಸ್ಯಾಂಟನರ್, ಈಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್.

ಪಾಕಿಸ್ತಾನ:ಸರ್ಫರಾಜ್ ಅಹಮದ್ (ನಾಯಕ), ಫಕ್ರ್‌ ಜಮಾನ್, ಶಾಹೀನ್ ಅಫ್ರಿದಿ, ಅಸಿಫ್ ಅಲಿ, ಹಸನ್ ಅಲಿ, ಮೊಹಮ್ಮದ್ ಅಮೀರ್, ಬಾಬರ್ ಅಜಂ, ಮೊಹಮ್ಮದ್ ಹಫೀಜ್, ಇಮಾಮ್ ಉಲ್ ಹಕ್, ಮೊಹಮ್ಮದ್ ಹಸನೈನ್, ಶಾದಾಬ್ ಖಾನ್, ಶೊಯಬ್ ಮಲಿಕ್, ವಹಾಬ್ ರಿಯಾಜ್, ಹ್ಯಾರಿಸ್ ಸೊಹೈಲ್, ಇಮಾದ್ ವಸೀಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT