ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ- ಪಾಕ್ ನಡುವಿನ ಪಂದ್ಯ ರದ್ದು ಬಗ್ಗೆ ಯಾವುದೇ ಸೂಚನೆ ಲಭಿಸಿಲ್ಲ

Last Updated 20 ಫೆಬ್ರುವರಿ 2019, 4:21 IST
ಅಕ್ಷರ ಗಾತ್ರ

ನವದೆಹಲಿ:ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಈಗಾಗಲೇ ನಿಗದಿತವಾಗಿರುವ ಪಂದ್ಯಗಳಲ್ಲಿ ಬದಲಾವಣೆ ತರುವ ಬಗ್ಗೆ ಯಾವುದೇ ತೀರ್ಮಾ ನ ಕೈಗೊಂಡಿಲ್ಲ ಎಂದು ನಿರ್ಗಮಿತ ಐಸಿಸಿ ಮುಖ್ಯ ಆಡಳಿತಾಧಿಕಾರಿ ಡೇವ್ ರಿಚರ್ಡ್ಸನ್ ಹೇಳಿದ್ದಾರೆ.

ನಾವು ಇಲ್ಲಿಯವರೆಗೆ ಮಂಡಳಿಗೆ ಪತ್ರ ಬರೆದಿಲ್ಲ ಎಂದು ಲಂಡನ್‍ನಲ್ಲಿ ಇಎಸ್‍ಪಿಎನ್ ಕ್ರಿಕ್‍ಇನ್ಫೋ ಜತೆ ಮಾತನಾಡಿದ ರಿಚರ್ಡ್ಸನ್ ಈ ಬಗ್ಗೆ ಬಿಸಿಸಿಐ ಮತ್ತು ಪಿಸಿಬಿ ಸದಸ್ಯರ ಜತೆ ಈ ಬಗ್ಗೆ ಮಾತನಾಡಲಿದ್ದೇವೆ. ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯ ಸೇರಿದಂತೆ ಯಾವುದೇ ಪಂದ್ಯಗಳಲ್ಲಿ ಬದಲಾವಣೆಯಾಗಿರುವ ಬಗ್ಗೆ ಸೂಚನೆ ಲಭಿಸಿಲ್ಲ ಎಂದಿದ್ದಾರೆ.

ಜಗತ್ತಿನಲ್ಲಿ ನಡೆಯುವ ಬಹುದೊಡ್ಡ ಕ್ರೀಡಾಕೂಟವಾಗಿದೆ.ಭಾರತ ಮತ್ತ ಪಾಕ್ ನಡುವಿನ ಪಂದ್ಯಗಳು ಈ ಪಂದ್ಯಾವಳಿಯ ಮುಖ್ಯ ಆಕರ್ಷಣೆ ಎಂದು ವಿಶ್ವಕಪ್ ಟೂರ್ನಿಯ ನಿರ್ದೇಶಕ ಸ್ಟೇವ್ ಎಲ್‍ವರ್ಥಿ ಹೇಳಿದ್ದಾರೆ.

ಪುಲ್ವಾಮ ದಾಳಿ ಹಿನ್ನಲೆಯಲ್ಲಿ ಭಾರತ- ಪಾಕ್ ನಡುವಿನ ಪಂದ್ಯ ರದ್ದು ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದ್ದು,ಪಂದ್ಯ ರದ್ದು ಬಗ್ಗೆ ಇಲ್ಲಿಯವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ವಿಶ್ವಕಪ್ ಆರಂಭವಾಗಲು ಇನ್ನು 100 ದಿನಗಳು ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT