ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ರೇಟಿಂಗ್‌ | ನಾಗಪುರ, ದೆಹಲಿ ಪಿಚ್‌ಗಳು ಸಾಧಾರಣ

Last Updated 24 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ನವದೆಹಲಿ: ನಾಗಪುರದ ಜಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ಹಾಗೂ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್‌ಗಳು ಸಾಧಾರಣ ಗುಣಮಟ್ಟದ್ದಾಗಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯ ರೆಫರಿ ರೇಟಿಂಗ್ ನೀಡಿದ್ದಾರೆ.

ಆಸ್ಟ್ರೇಲಿಯಾ ಎದುರಿನ ಬಾರ್ಡರ್‌ ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿ ಮೊದಲ ಪಂದ್ಯವು ನಾಗಪುರದಲ್ಲಿ ಹಾಗೂ ಎರಡನೇಯದ್ದು ದೆಹಲಿಯಲ್ಲಿ ನಡೆದಿದ್ದವು. ಎರಡೂ ಪಂದ್ಯಗಳು ಮೂರನೇ ದಿನವೇ ಮುಕ್ತಾಯವಾಗಿದ್ದವು. ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಅಪಾರ ಟೀಕೆಗಳು ವ್ಯಕ್ತವಾಗಿದ್ದವು. ಕೆಲವು ಮಾಜಿ ಕ್ರಿಕೆಟಿಗರೂ ಆಸಮಾಧಾನ ವ್ಯಕ್ತಪಡಿಸಿದ್ದರು.

ಪಂದ್ಯ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರು ಪಿಚ್‌ಗಳ ಗುಣಮಟ್ಟದ ಕುರಿತು ಐಸಿಸಿಯ ಶ್ರೇಯಾಂಕ ಪಟ್ಟಿಯಲ್ಲಿ ದಾಖಲಿಸಿದ್ದಾರೆ.

ಐಸಿಸಿಯಲ್ಲಿ ಆರು ಬಗೆಯಲ್ಲಿ ಪಿಚ್ ರೇಟಿಂಗ್ ನೀಡಲಾಗುತ್ತದೆ. ಅತ್ಯುತ್ತಮ, ಉತ್ತಮ, ಸಾಧಾರಣ, ಸಾಧಾರಣಕ್ಕಿಂತ ಕಡಿಮೆ, ಕಳಪೆ ಮತ್ತು ಅನರ್ಹ ಎಂಬ ರೇಟಿಂಗ್‌ಗಳನ್ನು ನೀಡಲಾಗುತ್ತದೆ. ಇದರಲ್ಲ ಸಾಧಾರಣಕ್ಕಿಂತ ಕಡಿಮೆ, ಕಳಪೆ ಹಾಗೂ ಅನರ್ಹ ರೇಟಿಂಗ್‌ಗಳು ಸಿಕ್ಕಾಗ ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ.

ಈ ಹಿಂದೆಯೂ ನಾಗಪುರದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಎರಡೇ ದಿನಗಳಲ್ಲಿ ಮುಕ್ತಾಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT