ಐಸಿಸಿ ನೂತನ ಸಿಇಒ ಆಗಿ ಮನು ನೇಮಕ

7

ಐಸಿಸಿ ನೂತನ ಸಿಇಒ ಆಗಿ ಮನು ನೇಮಕ

Published:
Updated:
Prajavani

ದುಬೈ: ಭಾರತದ ಮನು ಶಾಹನೆಯ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ನೂತನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದಾರೆ.

ಪ್ರಸ್ತುತ ಸಿಇಒ ಆಗಿರುವ ಡೇವಿಡ್‌ ರಿಚರ್ಡ್ಸನ್‌ ಅವರ ಒಪ್ಪಂದದ ಅವಧಿ ಈ ವರ್ಷದ ಏಕದಿನ ವಿಶ್ವಕಪ್‌ನ ಬಳಿಕ (ಜುಲೈ) ಕೊನೆಯಾಗಲಿದೆ. ಹೀಗಾಗಿ ಮನು ಅವರನ್ನು ಆರು ತಿಂಗಳು ಮುಂಚಿತವಾಗಿಯೇ ಈ ಹುದ್ದೆಗೆ ನೇಮಿಸಲಾಗಿದೆ.

ಮನು ಅವರು ಸಿಂಗಪುರ ಸ್ಪೋರ್ಟ್ಸ್‌ ಹಬ್‌ನ ಸಿಇಒ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಜೊತೆಗೆ ಇಎಸ್‌ಪಿಎನ್‌ ಸ್ಟಾರ್‌ ಸ್ಪೋರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರು ಮುಂದಿನ ತಿಂಗಳು ಕೆಲಸಕ್ಕೆ ಹಾಜರಾಗಲಿದ್ದು, ಜುಲೈನಲ್ಲಿ ಅಧಿಕೃತವಾಗಿ ಸಿಇಒ ಹುದ್ದೆ ಅಲಂಕರಿಸಲಿದ್ದಾರೆ.

‘ವಾಣಿಜ್ಯ ಕ್ಷೇತ್ರದಲ್ಲಿ 22 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಮನು ಅವರಿಗಿದೆ. ಹೀಗಾಗಿ ಅವರನ್ನು ಸಿಇಒ ಆಗಿ ನೇಮಿಸಲಾಗಿದ್ದು ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ನಮಗಿದೆ’ ಎಂದು ಐಸಿಸಿ ಮುಖ್ಯಸ್ಥ ಶಶಾಂಕ್‌ ಮನೋಹರ್‌ ತಿಳಿಸಿದ್ದಾರೆ.

‘ಐಸಿಸಿಯ ಸಿಇಒ ಆಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ಮನು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !