ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೆಸ್ಟ್ ಉಳಿವಿಗಾಗಿ ಐಸಿಸಿ ವಿಶೇಷ ಯೋಜನೆ; ಚಿಂತನೆ

Published : 23 ಆಗಸ್ಟ್ 2024, 17:21 IST
Last Updated : 23 ಆಗಸ್ಟ್ 2024, 17:21 IST
ಫಾಲೋ ಮಾಡಿ
Comments

ಸಿಡ್ನಿ: ಟೆಸ್ಟ್ ಕ್ರಿಕೆಟ್ ಮಾದರಿಯನ್ನು ಉಳಿಸಿ ಬೆಳೆಸುವ ಉದ್ದೇಶಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ₹ 125 ಕೋಟಿಯನ್ನು ಮೀಸಲಿಡಲು ಯೋಜಿಸಿದೆ. 

ಟೆಸ್ಟ್ ಆಟಗಾರರ ಪಂದ್ಯ ಶುಲ್ಕ ಮತ್ತಿತರ ಸೌಲಭ್ಯಗಳನ್ನು ಹೆಚ್ಚಿಸಲು ಹಾಗೂ ಆಟಗಾರರು ಟಿ20 ಫ್ರ್ಯಾಂಚೈಸಿ ಲೀಗ್‌ಗಳತ್ತ ವಲಸೆ ಹೋಗುವುದನ್ನು ತಡೆಯಲು ಈ ನಿಧಿ ಬಳಕೆಯಾಗಬೇಕು ಎಂಬ ಪ್ರಸ್ತಾವವನ್ನು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸಲ್ಲಿಸಿದೆ. ಐಸಿಸಿಯ ಅಧ್ಯಕ್ಷ ಹುದ್ದೆಗೇರಲು ಸ್ಪರ್ಧೆಯಲ್ಲಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಬೆಂಬಲವು ಇದಕ್ಕೆ ಇದೆ ಎಂದು ‘ದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ಪ್ರಕಟಿಸಿದೆ.  

ಈ ಯೋಜನೆಯಲ್ಲಿ ಆಟಗಾರರು  ಈಗ ಪಡೆಯುತ್ತಿರುವ ಪಂದ್ಯದ ಶುಲ್ಕದಲ್ಲಿ ಹೆಚ್ಚಳವಾಗುವುದು. ವಿದೇಶ ಪ್ರವಾಸಗಳಿಗೆ ಹೆಚ್ಚು ಸೌಲಭ್ಯಗಳು ನೀಡಲಾಗುವುದು. ಆರ್ಥಿಕ ಸಂಕಷ್ಟದಲ್ಲಿರುವ ವೆಸ್ಟ್ ಇಂಡೀಸ್‌ನಂತಹ ರಾಷ್ಟ್ರೀಯ ಕ್ರಿಕೆಟ್ ಮಂಡಳಿಗಳಿಗೆ ಇದರಿಂದ ಅನುಕೂಲವಾಗಲಿದೆ. 

‘ಈ ಯೋಜನೆ ಕಾರ್ಯಗತವಾದರೆ ಟೆಸ್ಟ್ ಆಡುವ ಎಲ್ಲ ಆಟಗಾರರಿಗೂ ಕನಿಷ್ಠ ಸಂಭಾವನೆ ಲಭಿಸಲಿದೆ. ಟೆಸ್ಟ್‌ ಕ್ರಿಕೆಟ್ ಉಳಿವಿಗಾಗಿ ಮಹತ್ವದ ಹೆಜ್ಜೆ ಇಡುತ್ತಿರುವುದು ಸಂತಸವಾಗಿದೆ‘ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಚೇರ್ಮನ್ ಮೈಕ್ ಬೇರ್ಡ್ ಹೇಳಿದ್ದಾರೆ. ಅವರೇ ಕಳೆದ ಜನವರಿಯಲ್ಲಿ ಈ ಪ್ರಸ್ತಾವ ಸಲ್ಲಿಸಿದ್ದರು. 

ಈ ವರ್ಷದ ಆರಂಭದಲ್ಲಿ ಬಿಸಿಸಿಐ ಭಾರತದ ಟೆಸ್ಟ್ ಕ್ರಿಕೆಟಿಗರಿಗಾಗಿ ಪ್ರೋತ್ಸಾಹದನವನ್ನು ಘೋಷಿಸಿತ್ತು. ನಿರಂತರ  ಉತ್ತಮವಾಗಿ ಆಟವಾಡುವವರಿಗೆ ಬಹುಮಾನ ಮೊತ್ತವನ್ನೂ ಘೋಷಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT