ಟೆಸ್ಟ್ ರ‍್ಯಾಂಕಿಂಗ್‌: ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟ ವಿರಾಟ್‌ ಕೊಹ್ಲಿ

6

ಟೆಸ್ಟ್ ರ‍್ಯಾಂಕಿಂಗ್‌: ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟ ವಿರಾಟ್‌ ಕೊಹ್ಲಿ

Published:
Updated:

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಅವರನ್ನು ಹಿಂದಿಕ್ಕಿ ವಿಶ್ವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಇದರರೊಂದಿಗೆ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಏಳನೇ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ಗೌರವಕ್ಕೂ ಪಾತ್ರರಾದರು. ಈ ಹಿಂದೆ ಸುನೀಲ್‌ ಗವಾಸ್ಕರ್‌, ದಿಲೀಪ್‌ ವೆಂಗ್‌ಸರ್ಕರ್‌, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌ ಹಾಗೂ ಗೌತಮ್‌ ಗಂಭೀರ್‌ ಅಗ್ರ ಸ್ಥಾನಕ್ಕೇರಿದ ಸಾಧನೆ ಮಾಡಿದ್ದರು.

ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದು, 12 ತಿಂಗಳ ನಿಷೇಧ ಶಿಕ್ಷೆ ಅನುಭವಿಸುತ್ತಿರುವ ಸ್ಟೀವ್‌ ಸ್ಮಿತ್‌(329) ಅವರಿಗಿಂತ 5 ಪಾಯಿಂಟ್ಸ್‌ ಮುಂದಿರುವ ಕೊಹ್ಲಿ 2015ರಿಂದ ಎರಡನೇ ಸ್ಥಾನದಲ್ಲಿದ್ದರು.

ಸದ್ಯ ವಿರಾಟ್‌ ಖಾತೆಯಲ್ಲಿ 934 ಪಾಯಿಂಟ್‌ಗಳಿವೆ. ಇದು ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ದಾಖಲಾದ ಸಾರ್ವಕಾಲಿಕ ಅತಿಹೆಚ್ಚು ರೇಟಿಂಗ್‌ ಪಾಯಿಂಟ್ಸ್‌ ಆಗಿದೆ. ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌ 916 ಪಾಯಿಂಟ್ಸ್‌ ಕಲೆಹಾಕಿದ್ದುದು ಇದುವರೆಗಿನ ದಾಖಲೆಯಾಗಿತ್ತು.

ಒಟ್ಟಾರೆ ಅತಿಹೆಚ್ಚು ರೇಟಿಂಗ್‌ ಪಾಯಿಂಟ್ಸ್‌ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ 14ನೇ ಸ್ಥಾನದಲ್ಲಿದ್ದಾರೆ. ಕ್ರಿಕೆಟ್‌ ದಂತಕತೆ ಆಸ್ಟ್ರೇಲಿಯಾದ ಡಾನ್‌ ಬ್ರಾಡ್‌ಮನ್‌(961) ಹಾಗೂ ಸ್ಟೀವ್‌ ಸ್ಮಿತ್‌(947) ಮೊದಲೆರಡು ಸ್ಥಾನದಲ್ಲಿದ್ದಾರೆ.

ವಿರಾಟ್‌ ಇಂಗ್ಲೆಂಡ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ 200(ಮೊದಲ ಇನಿಂಗ್ಸ್‌ 149, ಎರಡನೇ ಇನಿಂಗ್ಸ್‌ 51) ರನ್‌ ಗಳಿಸಿ ಏಕಾಂಗಿ ಹೋರಾಟ ನಡೆಸಿದ್ದರು. ಅವರ ಆಟದ ಹೊರತಾಗಿಯೂ ಪಂದ್ಯ 31ರನ್‌ಗಳ ಅಂತರದಿಂದ ಕೈ ತಪ್ಪಿತ್ತು. ಈ ಪಂದ್ಯಕ್ಕೂ ಮೊದಲು ವಿರಾಟ್‌ ಖಾತೆಯಲ್ಲಿ ಇದ್ದದ್ದು 903 ಪಾಯಿಂಟ್ಸ್‌.

ಉಳಿದಂತೆ ಎರಡರಿಂದ ಹತ್ತನೇ ಸ್ಥಾನದಲ್ಲಿರುವ ಆಟಗಾರರ ರ‍್ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಆದರೆ ಇಂಗ್ಲೆಂಡ್‌ ಎದುರಿನ ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದ ಕೆ.ಎಲ್‌ ರಾಹುಲ್‌ ಒಂದು ಸ್ಥಾನ ಕಳೆದುಕೊಂಡಿದ್ದರೆ, ಅಜಿಂಕ್ಯ ರಹಾನೆ ಮೂರು ಸ್ಥಾನ ಏರಿಕೆ ಕಂಡಿದ್ದಾರೆ. ಸದ್ಯ ರಾಹುಲ್‌ 19 ಮತ್ತು ರಹಾನೆ 22ನೇ ಸ್ಥಾನದಲ್ಲಿದ್ದಾರೆ. ಶಿಖರ್‌ ಧವನ್‌ ಮತ್ತು ಮುರುಳಿ ವಿಜಯ್‌ 25ನೇ ಸ್ಥಾನ ಹಂಚಿಕೊಂಡಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್ಸನ್‌(884) ಹಾಗೂ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ(882) ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !