ದುಬೈ: ಭಾರತಕ್ಕೆ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಬಂದಿದ್ದ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಆಟಗಾರರು ತಮ್ಮ ತವರಿಗೆ ತೆರಳಲು ವಿಳಂಬವಾಗಿರುವುದರ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ‘ಸಹಾನುಭೂತಿ’ ವ್ಯಕ್ತಪಡಿಸಿದೆ.

ಈ ಬಗ್ಗೆ ವ್ಯಕ್ತವಾಗಿರುವ ಟೀಕೆಗಳನ್ನು ತಳ್ಳಿಹಾಕಿರುವ ಐಸಿಸಿಯು, ‘ಆಟಗಾರರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಅದು ಬಿಟ್ಟು ಬೇರೆ ಯಾವುದೇ ಕಾರಣವಿಲ್ಲ’ ಎಂದಿದೆ.

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ನಡೆಯುತ್ತಿರುವುದರಿಂದ ವಿಮಾನಯಾನ ವ್ಯವಸ್ಥೆಯಲ್ಲಿ ವ್ಯತ್ಯಯವುಂಟಾಗಿದೆ. ಅದರಲ್ಲೂ ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣವಿರುವುದಿರಿಂದ ಬಹಳಷ್ಟು ವಿಮಾನ ಮಾರ್ಗಗಳನ್ನು ಮುಚ್ಚಲಾಗಿದೆ.

‘ಲಭ್ಯವಿರುವ ಪರ್ಯಾಯ ಮಾರ್ಗಗಳ ಮೂಲಕ ಪ್ರಯಾಣ ವ್ಯವಸ್ಥೆಯನ್ನು ಮಾಡುವಾಗ ಆಟಗಾರರ ಸುರಕ್ಷತೆ ಮತ್ತು ಕ್ಷೇಮಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಬಹಳ ಕಾಳಜಿಪೂರ್ವಕವಾಗಿ ಅವರ ಮರುಪ್ರಯಾಣದ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಐಸಿಸಿ ತಿಳಿಸಿದೆ.

‘ದಕ್ಷಿಣ ಆಫ್ರಿಕಾದ ಆಟಗಾರರ ಮರಳುವಿಕೆಯು ಆರಂಭವಾಗಿದೆ. ತಂಡದ ನಾಲ್ವರು ಆಟಗಾರರು ಮತ್ತು ಐವರು ಕುಟುಂಬ ಸದಸ್ಯರು ಈಗಾಗಲೇ ವಿಮಾನವೇರಿದ್ದಾರೆ. ಇನ್ನುಳಿದ 29 ಸದಸ್ಯರ ಬಳಗವು 24 ಗಂಟೆಗಳಲ್ಲಿ ಪ್ರಯಾಣ ಆರಂಭಿಸುವರು’ ಎಂದು ಐಸಿಸಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ವೆಸ್ಟ್ ಇಂಡೀಸ್ ತಂಡದ ಒಂಬತ್ತು ಮಂದಿ ಈಗಾಗಲೇ ಕೆರಿಬಿಯನ್ ದ್ವೀಪಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನೂ 16 ಜನರಿಗೆ ಮುಂಬರುವ 12 ಗಂಟೆಗಳಲ್ಲಿ ತಮ್ಮ ಸ್ವದೇಶಕ್ಕೆ ಮರಳುವ ವ್ಯವಸ್ಥೆ ಮಾಡಲಾಗಿದೆ’ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಮತ್ತು ದಕ್ಷಿಣ ಆಫ್ರಿಕಾ ತಂಡದ ಆಟಗಾರ ಡೇವಿಡ್ ಮಿಲ್ಲರ್ ಅವರು ಐಸಿಸಿಯನ್ನು ಟೀಕಿಸಿದ್ದರು. ಇಂಗ್ಲೆಂಡ್ ಆಟಗಾರರು ಸೆಮಿಫೈನಲ್ನಲ್ಲಿ ಸೋತ ಮರುದಿನವೇ ಸ್ವದೇಶಕ್ಕೆ ಪ್ರಯಾಣಿಸಿದ್ದರು. ಅವರಿಗಿಂತ ಮುಂಚೆಯೇ ಮುಗಿದಿದ್ದ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಸೋತಿದ್ದವು. ಆದರೆ ಮರುಪ್ರಯಾಣ ಸಾಧ್ಯವಾಗದಿರುವ ಬಗ್ಗೆ ವಿಂಡೀಸ್ ಮುಖ್ಯ ಕೋಚ್ ಡ್ಯಾರೆನ್ ಸಾಮಿ ಬೇಸರ ವ್ಯಕ್ತಪಡಿಸಿದ್ದರು.

ಈ ಕುರಿತು ಯಾರ ಹೆಸರನ್ನೂ ಉಲ್ಲೇಖಿಸದೇ ಪ್ರತಿಕ್ರಿಯೆ ನೀಡಿರುವ ಐಸಿಸಿ, ‘ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ದೇಶಗಳಿಗೆ ಮಾಡುವ ಪ್ರಯಾಣದ ವ್ಯವಸ್ಥೆ ಮತ್ತು ಇಂಗ್ಲೆಂಡ್ ಪ್ರಯಾಣಕ್ಕಾಗಿ ಮಾಡಿದ ವ್ಯವಸ್ಥೆಗಳಿಗೆ ಯಾವುದೇ ಸಂಬಂಧ ಇಲ್ಲ. ಎರಡೂ ಕಡೆಯ ಪರಿಸ್ಥಿತಿ ಭಿನ್ನವಾಗಿವೆ. ಪ್ರಯಾಣದ ಮಾರ್ಗಗಳೂ ಬೇರೆ ಬೇರೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.