ಗುರುವಾರ , ಆಗಸ್ಟ್ 11, 2022
24 °C
ಐಸಿಸಿಯ ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘನೆ ಆರೋಪ

ಯುಎಇಯ ಇಬ್ಬರು ಕ್ರಿಕೆಟಿಗರ ತಾತ್ಕಾಲಿಕ ಅಮಾನತು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಮ್ಯಾಚ್‌ ಫಿಕ್ಸಿಂಗ್ ಆರೋಪದ ಮೇಲೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಕ್ರಿಕೆಟಿಗರಾದ ಅಮೀರ್‌ ಹಯಾತ್‌ ಹಾಗೂ ಆಶ್ಫಾಕ್‌ ಅಹ್ಮದ್‌ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಭಾನುವಾರ ತಾತ್ಕಾಲಿಕವಾಗಿ ಅಮಾನತು ಮಾಡಿದೆ. 

ಆಶ್ಫಾಕ್‌ ಅವರನ್ನು ಐಸಿಸಿ ಟ್ವೆಂಟಿ–20 ವಿಶ್ವಕಪ್‌ ಅರ್ಹತಾ ಟೂರ್ನಿಯ ಸಂದರ್ಭದಲ್ಲೇ ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಅಮಾನತು ಮಾಡಿತ್ತು. ಆದರೆ ತನಿಖೆಗಳು ಮುಗಿಯುವ ತನಕ ಆರೋಪ ಹೊರಿಸಿರಲಿಲ್ಲ. 

38 ವರ್ಷದ ಮಧ್ಯಮ ವೇಗಿ ಹಯಾತ್‌ 9 ಏಕದಿನ, ನಾಲ್ಕು ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ. 35 ವರ್ಷದ ಆಶ್ಫಾಕ್‌ 16 ಏಕದಿನ ಹಾಗೂ 12 ಟ್ವೆಂಟಿ–20 ಪಂದ್ಯಗಲ್ಲಿ ಯುಎಇ ತಂಡವನ್ನು ಪ್ರತಿನಿಧಿಸಿದ್ದಾರೆ.

 ‘ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಲು ಇಬ್ಬರೂ ಆಟಗಾರರಿಗೆ 14 ದಿನಗಳ ಅವಕಾಶ ನೀಡಲಾಗಿದೆ. ಈ ಹಂತದಲ್ಲಿ ಕೌನ್ಸಿಲ್‌ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ‘ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು