ಗುರುವಾರ , ಜನವರಿ 20, 2022
15 °C

T20 WC | IND vs PAK: ಭಾರತಕ್ಕೆ ಮುಖಭಂಗ; ಪಾಕ್‌ಗೆ 10 ವಿಕೆಟ್ ಗೆಲುವು

Published:
Updated:
ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ.
 • 11:36 pm

  ಪಾಕಿಸ್ತಾನಕ್ಕೆ 10 ವಿಕೆಟ್ ಅಂತರದ ಭರ್ಜರಿ ಗೆಲುವು

 • 11:35 pm

  ಭಾರತಕ್ಕೆ ಹೀನಾಯ ಸೋಲು

 • 10:58 pm

  ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಸೋಲಿನ ಮುಖಭಂಗ

  ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ.  

  ಇದರೊಂದಿಗೆ ಐಸಿಸಿ ವಿಶ್ವಕಪ್‌ ಇತಿಹಾಸದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದೆ. ಈ ಹಿಂದಿನ 12 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿತ್ತಾದರೂ ದುಬೈಯಲ್ಲಿ ನಡೆದ ಪಂದ್ಯದಲ್ಲಿ ಮತ್ತದೇ ಫಲಿತಾಂಶ ಮರುಕಳಿಸಲು ವಿರಾಟ್ ಕೊಹ್ಲಿ ಬಳಗಕ್ಕೆ ಸಾಧ್ಯವಾಗಲಿಲ್ಲ. 

  ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತ, ನಾಯಕ ವಿರಾಟ್ ಕೊಹ್ಲಿ (57) ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. 

  ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ ಯಾವುದೇ ಒತ್ತಡಕ್ಕೆ ಒಳಗಾಗಲಿಲ್ಲ. ಆರಂಭಿಕರಾದ ನಾಯಕ ಬಾಬರ್ ಆಜಂ (68*) ಹಾಗೂ ಮೊಹಮ್ಮದ್ ರಿಜ್ವಾನ್ (79*) ಶತಕದ ಜೊತೆಯಾಟದ ನೆರವಿನಿಂದ 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಭರ್ಜರಿ ಗೆಲುವು ದಾಖಲಿಸಿದೆ. 

 • 10:46 pm

  ಗೆಲುವಿನತ್ತ ಪಾಕ್, ಸೋಲಿನ ಭೀತಿಯಲ್ಲಿ ಭಾರತ

 • 10:39 pm

  ಮೊಹಮ್ಮದ್ ರಿಜ್ವಾನ್ ಫಿಫ್ಟಿ ಸಾಧನೆ

 • 10:31 pm

  40 ಎಸೆತಗಳಲ್ಲಿ ಬಾಬರ್ ಫಿಫ್ಟಿ ಸಾಧನೆ

 • 10:25 pm

  ಭಾರತದ ಪಾಳಯದಲ್ಲಿ ಮಡುಗಟ್ಟಿದ ಆತಂಕ

 • 10:16 pm

  10 ಓವರ್ ಅಂತ್ಯಕ್ಕೆ ಪಾಕಿಸ್ತಾನ 71/0

  10 ಓವರ್ ಅಂತ್ಯಕ್ಕೆ ಪಾಕಿಸ್ತಾನ ವಿಕೆಟ್ ನಷ್ಟವಿಲ್ಲದೆ 71 ರನ್ ಗಳಿಸಿದೆ. ನಾಯಕ ಬಾಬರ್ ಆಜಂ (34*) ಮೊಹಮ್ಮದ್ ರಿಜ್ವಾನ್ (35*) ಕ್ರೀಸಿನಲ್ಲಿದ್ದಾರೆ. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 81 ರನ್ ಬೇಕಿದೆ. 

 • 10:01 pm

  ಬಾಬರ್-ರಿಜ್ವಾನ್ ಉತ್ತಮ ಆಟ

 • 09:59 pm

  ಪವರ್ ಪ್ಲೇ ಅಂತ್ಯಕ್ಕೆ ಪಾಕಿಸ್ತಾನ 43/0

  ಪವರ್ ಪ್ಲೇ ಅಂತ್ಯಕ್ಕೆ ಪಾಕಿಸ್ತಾನ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಸಿದೆ. ಬಾಬರ್ ಆಜಂ (17*) ಮೊಹಮ್ಮದ್ ರಿಜ್ವಾನ್ (25*) ಕ್ರೀಸಿನಲ್ಲಿದ್ದಾರೆ. 

 • 09:50 pm

  ಪಾಕ್ ಎಚ್ಚರಿಕೆಯ ಆರಂಭ

  ಸವಾಲಿನ ಮೊತ್ತ ಬೆನ್ನತ್ತಿದ ಪಾಕಿಸ್ತಾನ ಎಚ್ಚರಿಕೆಯ ಆರಂಭವನ್ನು ಪಡೆದಿದೆ. ನಾಲ್ಕು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿದೆ. 

 • 09:18 pm

  ಪಾಕಿಸ್ತಾನಕ್ಕೆ 152 ರನ್ ಗೆಲುವಿನ ಗುರಿ

  ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿರುವ ಭಾರತ, ನಾಯಕ ವಿರಾಟ್ ಕೊಹ್ಲಿ (57) ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. 

  ರೋಹಿತ್ ಶರ್ಮಾ (0), ಕೆ.ಎಲ್. ರಾಹುಲ್ (3) ಹಾಗೂ ಸೂರ್ಯಕುಮಾರ್ ಯಾದವ್ (11) ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದರು. ಅತ್ತ ನಾಯಕನ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ 57 ರನ್ ಗಳಿಸಿ ಮಿಂಚಿದರು. 47 ಎಸೆತಗಳನ್ನು ಎದುರಿಸಿದ ಕೊಹ್ಲಿ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.

  ನಾಯಕನಿಗೆ ತಕ್ಕ ಸಾಥ್ ನೀಡಿದ ರಿಷಭ್ ಪಂತ್ 39 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಇನ್ನುಳಿದಂತೆ ರವೀಂದ್ರ ಜಡೇಜ (13) ಹಾಗೂ ಹಾರ್ದಿಕ್ ಪಾಂಡ್ಯ (11) ರನ್ ಗಳಿಸಿದರು. 

  ಪಾಕಿಸ್ತಾನ ಪರ ಶಾಹೀನ್ ಆಫ್ರಿದಿ ಮೂರು ವಿಕೆಟ್ ಕಬಳಿಸಿದರು. 

 • 09:14 pm

  ಜಡೇಜ 13 ರನ್ ಗಳಿಸಿ ಔಟ್

 • 09:06 pm

  ಕೊಹ್ಲಿ ಸಮಯೋಚಿತ ಆಟ

 • 09:05 pm

  ನಾಯಕನ ಆಟವಾಡಿದ ಕೊಹ್ಲಿ

 • 09:01 pm

  ವಿರಾಟ್ ಕೊಹ್ಲಿ ಆಕರ್ಷಕ ಫಿಫ್ಟಿ

 • 08:48 pm

  15 ಓವರ್ ಅಂತ್ಯಕ್ಕೆ ಭಾರತ 100/4

  15 ಓವರ್ ಅಂತ್ಯಕ್ಕೆ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ (37*) ಹಾಗೂ ರವೀಂದ್ರ ಜಡೇಜ (6*) ಕ್ರೀಸಿನಲ್ಲಿದ್ದಾರೆ. 

 • 08:42 pm

  ಪಂತ್ 'ಸಿಕ್ಸರ್'

 • 08:41 pm

  ಪಂತ್ 39 ರನ್ ಗಳಿಸಿ ಔಟ್

 • 08:25 pm

  ರಿಷಭ್ ಪಂತ್ ಆಕರ್ಷಕ ಬೌಂಡರಿ

 • 08:22 pm

  ಕೊಹ್ಲಿ-ಪಂತ್ ಆಸರೆ

 • 08:19 pm

  10 ಓವರ್ ಅಂತ್ಯಕ್ಕೆ ಭಾರತ 60/3

  10 ಓವರ್ ಅಂತ್ಯಕ್ಕೆ ಭಾರತ ಮೂರು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ (26*) ಹಾಗೂ ರಿಷಭ್ ಪಂತ್ (19*) ಕ್ರೀಸಿನಲ್ಲಿದ್ದಾರೆ. 

 • 08:14 pm

  ಸೂರ್ಯಕುಮಾರ್ ವಿಕೆಟ್ ಪತನ

 • 08:07 pm

  ಕೊಹ್ಲಿ 'ಸಿಕ್ಸರ್'

 • 08:04 pm

  ಪವರ್ ಪ್ಲೇಯಲ್ಲಿ ಭಾರತ ಪರದಾಟ

  ಪವರ್ ಪ್ಲೇ ಅಂತ್ಯಕ್ಕೆ ಭಾರತ ಮೂರು ವಿಕೆಟ್ ನಷ್ಟಕ್ಕೆ 36ರನ್ ಗಳಿಸಿದೆ. ರೋಹಿತ್ ಶರ್ಮಾ (3), ಕೆ.ಎಲ್. ರಾಹುಲ್ (0) ಹಾಗೂ ಸೂರ್ಯಕುಮರ್ ಯಾದವ್ (11) ವಿಕೆಟ್ ನಷ್ಟವಾಗಿದೆ. ನಾಯಕ ವಿರಾಟ್ ಕೊಹ್ಲಿ (20*) ಹಾಗೂ ರಿಷಭ್ ಪಂತ್ (1*) ಕ್ರೀಸಿನಲ್ಲಿದ್ದಾರೆ. 

 • 07:58 pm

  ಕೆ.ಎಲ್. ರಾಹುಲ್ ಕ್ಲೀನ್ ಬೌಲ್ಡ್

 • 07:56 pm

  ಸೂರ್ಯ 'ಸಿಕ್ಸರ್'

 • 07:48 pm

  ರೋಹಿತ್, ರಾಹುಲ್ ವಿಕೆಟ್ ಪತನ

  ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಪ್ರಥಮ ಓವರ್‌ನಲ್ಲೇ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (0) ಅವರನ್ನು ಎಡಗೈ ವೇಗಿ ಶಾಹೀನ್ ಆಫ್ರಿದಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಇದರಿಂದಾಗಿ ರೋಹಿತ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. 

  ಬೆನ್ನಲ್ಲೇ ಕೆ.ಎಲ್. ರಾಹುಲ್‌ರನ್ನು (3) ಕ್ಲೀನ್ ಬೌಲ್ಡ್ ಮಾಡಿದರು. ಇದರೊಂದಿಗೆ 6 ರನ್ನಿಗೆ ಆರಂಭಿಕರನ್ನು ಕಳೆದುಕೊಂಡ ಭಾರತ ಒತ್ತಡಕ್ಕೊಳಗಾಯಿತು. 

 • 07:43 pm

  ಶಾಹೀನ್ ಆಫ್ರಿದಿ ಕ್ಲೀನ್ ಬೌಲ್ಡ್ ಮಾಡಿದ ಶಾಹೀನ್ ಆಫ್ರಿದಿ

 • 07:41 pm

  ರೋಹಿತ್ ಔಟ್, ಭಾರತಕ್ಕೆ ಆರಂಭದಲ್ಲೇ ಹಿನ್ನಡೆ

  ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಪ್ರಥಮ ಓವರ್‌ನಲ್ಲೇ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (0) ಅವರನ್ನು ಎಡಗೈ ವೇಗಿ ಶಾಹೀನ್ ಆಫ್ರಿದಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಇದರಿಂದಾಗಿ ರೋಹಿತ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. 

 • 07:38 pm

  ರೋಹಿತ್ ಶರ್ಮಾ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದ ಶಾಹೀನ್ ಅಫ್ರಿದಿ

 • 07:29 pm

  ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್

 • 07:28 pm

  ಟಾಸ್ ಝಲಕ್

 • 07:10 pm

  ಟೀಮ್ ಇಂಡಿಯಾ ಸಜ್ಜು

 • 07:10 pm

  ಹಾರ್ದಿಕ್ ಪಾಂಡ್ಯ ಇನ್, ಭಾರತ ತಂಡ ಇಂತಿದೆ

 • 07:01 pm

  ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ಪಾಕಿಸ್ತಾನ

  ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೂಪರ್-12 ಹಂತದ ಗ್ರೂಪ್ 2ರ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದಿರುವ ಪಾಕಿಸ್ತಾನ ನಾಯಕ ಬಾಬರ್ ಆಜಂ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

 • 06:59 pm

  'ಮೆಂಟರ್' ಸಿಂಗ್ ಧೋನಿ

 • 06:54 pm

  ಟಾಸ್‌ಗೆ ಕ್ಷಣಗಣನೆ, ಕಿಂಗ್ ಕೊಹ್ಲಿ ರೆಡಿ

 • 06:28 pm

  ಭಾರತಕ್ಕೆ ಶುಭ ಹಾರೈಸಿದ ವಿನಯ್ ಕುಮಾರ್

 • 06:24 pm

  ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅನಿಸಿಕೆಗಳು

 • 06:21 pm

  ಮೌಕಾ, ಮೌಕಾ...

 • 06:20 pm

  ಕೊಹ್ಲಿ vs ಬಾಬರ್

 • 06:18 pm

  ರೋಮಾಂಚನ - ಹಳೆಯ ವಿಡಿಯೊ

 • 06:15 pm

  ಅಂದು ಧೋನಿ ನಾಯಕ, ಇಂದು ಮೆಂಟರ್

 • 06:14 pm

  ಕೊಹ್ಲಿ ಪಡೆಗೆ 'ಭಾರತ್ ಆರ್ಮಿ' ಬೆಂಬಲ

 • 06:05 pm

  ದುಬೈಯಲ್ಲಿ ಹೈವೋಲ್ಟೇಜ್ ಪಂದ್ಯ

 • 05:43 pm

  ಹೋಟೆಲ್‌ನಿಂದ ದುಬೈ ಮೈದಾನದತ್ತ ಕೊಹ್ಲಿ ಪಡೆ

 • 05:07 pm

  ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಭಾರತದ ಗೆಲುವಿನ ರೋಚಕ ಕ್ಷಣ

 • 05:06 pm

  ಮೆನ್ ಇನ್ ಬ್ಲೂ

 • 05:05 pm

  ಕೊಹ್ಲಿ ಹೇಳಿದ್ದೇನು?

 • 05:04 pm

  ಗೇಮ್ ಆನ್

 • 05:02 pm
 • 05:00 pm

  ಭಾರತ-ಪಾಕ್ ಕ್ರಿಕೆಟ್ ಪಂದ್ಯದ ಸುತ್ತ; ತಜ್ಞರ ವಿಶ್ಲೇಷಣೆ

 • 04:58 pm
 • 04:58 pm

  ತಂಡಗಳು ಇಂತಿವೆ:

  ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜ, ಆರ್. ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ರಾಹುಲ್ ಚಾಹರ್.

  ಪಾಕಿಸ್ತಾನ: ಬಾಬರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಫಕರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಅಲಿಫ್ ಅಲಿ, ಇಮಾದ್ ವಾಸೀಂ, ಶಾದಾಬ್ ಖಾನ್, ಹ್ಯಾರಿಸ್ ರವೂಫ್, ಹಸನ್ ಅಲಿ, ಶಾಹೀನ್ ಶಾ ಆಫ್ರಿದಿ, ಹೈದರ್ ಅಲಿ.

 • 04:57 pm

  ಭಾರತ vs ಪಾಕಿಸ್ತಾನ

  ಭಾರತ ತಂಡಕ್ಕೆ ವಿಶ್ವಕಪ್ ಟೂರ್ನಿಗಳಲ್ಲಿ ಅಜೇಯ ಇತಿಹಾಸದ ಪರಂಪರೆಯನ್ನು ಉಳಿಸಿಕೊಳ್ಳುವ ಛಲ. ವಿರಾಟ್ ಕೊಹ್ಲಿ ಬಳಗದ ಆಟಕ್ಕೆ ತಡೆಯೊಡ್ಡಿ ಹೊಸ ಇತಿಹಾಸ ನಿರ್ಮಿಸುವ ಕನಸು ಬಾಬರ್ ಆಜಂ ಬಳಗದ್ದು. 

  ಭಾನುವಾರ ನಡೆಯಲಿರುವ ಕ್ರಿಕೆಟ್‌ ಜಗತ್ತಿನ ಈ ಬದ್ಧ ಎದುರಾಗಳಿಗಳ ಹಣಾಹಣಿಯನ್ನು ಕಣ್ಮನ ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಕಾದಿದ್ದಾರೆ. 

  ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಸಲ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಪಾಕ್ ತಂಡವನ್ನು ಎದುರಿಸುತ್ತಿದೆ. ಈ ಹಿಂದಿನ ಎಲ್ಲ ಟಿ20 ವಿಶ್ವಕಪ್‌ಗಳಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ಭಾರತವು ಪಾಕ್ ಎದುರು ಜಯಿಸಿತ್ತು. ಅದೇ ಪರಂಪರೆಯನ್ನು ಮುಂದುವರಿಸುವ ಸವಾಲು ವಿರಾಟ್ ಮುಂದಿದೆ.ಈ ಟೂರ್ನಿಯ ನಂತರ ಟಿ20 ತಂಡದ ನಾಯಕತ್ವವನ್ನು ವಿರಾಟ್ ಬಿಟ್ಟುಕೊಡಲಿದ್ದಾರೆ. ಆದ್ದರಿಂದ ಅವರಿಗೆ ಗೆಲುವಿನ ಕಾಣಿಕೆ ಕೊಡುವ ಛಲದಲ್ಲಿ ತಂಡವೂ ಇದೆ.