ಬೆಂಗಳೂರು: ಭಾನುವಾರ ಮುಕ್ತಾಯಗೊಂಡ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ತಂಡವು ಸತತ ಎರಡನೇ ಬಾರಿ ಚಾಂಪಿಯನ್ ಆಗಿದೆ. ಟಿ20 ವಿಶ್ವಕಪ್ನಲ್ಲಿ ಅತೀ ಹೆಚ್ಚು ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ.

ತವರಿನಲ್ಲಿ ನಡೆದ ವಿಶ್ವಕಪ್ನಲ್ಲಿ ಭಾರತ ತಂಡ ಪ್ರಾಬಲ್ಯ ಸಾಧಿಸಿ ಟ್ರೋಫಿ ಗೆದ್ದರೂ, ಐಸಿಸಿ ಘೋಷಣೆ ಮಾಡಿರುವ ಟಿ20 ವಿಶ್ವಕಪ್ನ ಅತ್ಯುತ್ತಮ ಆಡುವ XIರ ತಂಡಕ್ಕೆ ದಕ್ಷಿಣ ಆಫ್ರಿಕಾದ ಏಡನ್ ಮಾರ್ಕರಂ ನಾಯಕರಾಗಿದ್ದಾರೆ. ಈ ತಂಡದಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ.

ಐಸಿಸಿ ಘೋಷಿಸಿದ ಟಿ20 ವಿಶ್ವಕಪ್ನ ಅತ್ಯುತ್ತಮ ಆಡುವ XIರ ತಂಡ

ಸಾಹಿಬ್ಜಾದಾ ಫರ್ಹಾನ್ (ಪಾಕಿಸ್ತಾನ)

ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟರ್ ಸಾಹಿಬ್ಜಾದಾ ಫರ್ಹಾನ್ ಟೂರ್ನಿಯ ಗರಿಷ್ಠ ರನ್ ಗಳಿಸಿದ ಆಟಗಾರನಾಗಿದ್ದಾರೆ. ಅವರು 2 ಶತಕ ಸಹಿತ 7 ಪಂದ್ಯಗಳಲ್ಲಿ 383 ರನ್ ಗಳಿಸಿದ್ದಾರೆ. ಟೂರ್ನಿಯಲ್ಲಿ ಅವರ ಸರಾಸರಿ 76.60 ಆಗಿದೆ.

ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್, ಭಾರತ)

ಟೂರ್ನಿಯಲ್ಲಿ ಆಡಿರುವ ಕೇವಲ 5 ಪಂದ್ಯಗಳಲ್ಲಿ 3 ಅರ್ಧಶತಕ ಸಹಿತ 321 ರನ್ಗಳಿಸಿದ ಸಂಜು ಸ್ಯಾಮ್ಸನ್ ಅವರು ಸರಣಿ ಶ್ರೇಷ್ಠ ಆಟಗಾರರಾಗಿದ್ದಾರೆ. ಅವರು ಟೂರ್ನಿಯಲ್ಲಿ 80.25 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಇಶಾನ್ ಕಿಶನ್ (ಭಾರತ)

ಆರಂಭಿಕ ಹಾಗೂ ಮೂರನೇ ಕ್ರಮಾಂಕ ಎರಡೂ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್, ಭಾರತ ಟ್ರೋಫಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು, ಆಡಿದ 9 ಪಂದ್ಯಗಳಿಂದ 317 ರನ್ ಕಲೆಹಾಕಿದ್ದಾರೆ.

ಏಡನ್ ಮಾರ್ಕರಂ (ನಾಯಕ, ದಕ್ಷಿಣ ಆಫ್ರಿಕಾ)

ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡನ್ ಮಾರ್ಕರಂ ಅವರನ್ನು ಐಸಿಸಿಯು ಈ ಬಾರಿಯ ಅತ್ಯುತ್ತಮ ಆಡುವ ಹನ್ನೊಂದರ ತಂಡಕ್ಕೆ ನಾಯಕನನ್ನಾಗಿ ಘೋಷಿಸಿದೆ. ಅವರು ಆಡಿರುವ 8 ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ 286 ರನ್ ಕಲೆಹಾಕಿದ್ದಾರೆ.

ಹಾರ್ದಿಕ್ ಪಾಂಡ್ಯ (ಭಾರತ)

ಭಾರತ ತಂಡದ ತಾರಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಆಡಿರುವ 9 ಪಂದ್ಯಗಳಲ್ಲಿ 217 ರನ್ ಹಾಗೂ 9 ವಿಕೆಟ್ ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ವಿಲ್ ಜಾಕ್ಸ್ (ಇಂಗ್ಲೆಂಡ್)

ಇಂಗ್ಲೆಂಡ್ ತಂಡದ ಸ್ಪಿನ್ ಆಲ್ರೌಂಡರ್ ವಿಲ್ ಜಾಕ್ಸ್ ಕೂಡ ಈ ಬಾರಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಆಡಿದ 8 ಪಂದ್ಯಗಳಲ್ಲಿ 226 ರನ್ ಮತ್ತು 9 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ.

ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್)

ವೆಸ್ಟ್ ಇಂಡೀಸ್ ತಂಡದ ಅನುಭವಿ ಆಲ್ರೌಂಡರ್ ಜೇಸನ್ ಹೋಲ್ಡರ್ ಅವರು 7 ಪಂದ್ಯಗಳಲ್ಲಿ 10 ವಿಕೆಟ್ಗಳು ಹಾಗೂ 141 ರನ್ ಕಲೆಹಾಕಿರುವ ಅವರು ಐಸಿಸಿ ಘೋಷಿಸಿರುವ ಅತ್ಯುತ್ತಮ ಆಡುವ XIರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಜಸ್ಪ್ರೀತ್ ಬುಮ್ರಾ (ಭಾರತ)

ಭಾರತ ಟಿ20 ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಐಸಿಸಿ ಘೋಷಣೆ ಮಾಡಿದ ಅತ್ಯುತ್ತಮ ಆಡುವ XIರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಿಂದ 6.21ರ ಎಕಾನಮಿಯಲ್ಲಿ 14 ವಿಕೆಟ್ ಪಡೆದುಕೊಂಡಿದ್ದಾರೆ.

ಲುಂಗಿ ಎನ್ಗಿಡಿ (ದಕ್ಷಿಣ ಆಫ್ರಿಕಾ)

ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್ಗಿಡಿ ಐಸಿಸಿ ಘೋಷಣೆ ಮಾಡಿದ ಅತ್ಯುತ್ತಮ ಆಡುವ XIರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಅವರು, ಆಡಿದ 7 ಪಂದ್ಯಗಳಲ್ಲಿ 7.19ರ ಎಕಾನಮಿಯಲ್ಲಿ 12 ವಿಕೆಟ್ ಪಡೆದಿದ್ದಾರೆ.

ಆದಿಲ್ ರಶೀದ್ (ಇಂಗ್ಲೆಂಡ್)

ಇಂಗ್ಲೆಂಡ್ ತಂಡದ ಸ್ಪಿನ್ ಬೌಲರ್ ಆದಿಲ್ ರಶೀದ್ ಅವರು ಆಡಿರುವ 8 ಪಂದ್ಯಗಳಿಂದ 8.15ರ ಎಕಾನಮಿಯಲ್ಲಿ 13 ವಿಕೆಟ್ ಪಡೆದಿದ್ದಾರೆ.

ಬ್ಲೆಸ್ಸಿಂಗ್ ಮುಜರಬಾನಿ (ಜಿಂಬಾಬ್ವೆ)

ಜಿಂಬಾಬ್ವೆ ತಂಡದ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಐಸಿಸಿ ಘೋಷಣೆ ಮಾಡಿದ ಅತ್ಯುತ್ತಮ ಆಡುವ XIರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಅವರು 6 ಪಂದ್ಯಗಳಲ್ಲಿ 7.88ರ ಎಕಾನಮಿಯಲ್ಲಿ 13 ವಿಕೆಟ್ ಪಡೆದಿದ್ದಾರೆ.

ಶಡ್ಲಿ ವ್ಯಾನ್ ಸ್ಕಾಲ್ವಿಕ್ ( 12 ನೇ ಆಟಗಾರ, ಅಮೆರಿಕ)

ಐಸಿಸಿ ಘೋಷಣೆ ಮಾಡಿದ ಅತ್ಯುತ್ತಮ ಆಡುವ XIರ ಬಳಗದಲ್ಲಿ 12ನೇ ಆಟಗಾರನಾಗಿ, 4 ಪಂದ್ಯಗಳಲ್ಲಿ 6.80 ಸರಾಸರಿಯಲ್ಲಿ 13 ವಿಕೆಟ್ ಪಡೆದ ಶಡ್ಲಿ ವ್ಯಾನ್ ಸ್ಕಾಲ್ವಿಕ್ ಆಯ್ಕೆಯಾಗಿದ್ದಾರೆ.

ಐಸಿಸಿ ಘೋಷಿಸಿದ ಟಿ20 ವಿಶ್ವಕಪ್ನ ಅತ್ಯುತ್ತಮ ಆಡುವ XIರ ಬಳಗ: ಸಾಹಿಬ್ಜಾದಾ ಫರ್ಹಾನ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಏಡನ್ ಮಾರ್ಕರಂ (ನಾಯಕ), ಹಾರ್ದಿಕ್ ಪಾಂಡ್ಯ, ವಿಲ್ ಜಾಕ್ಸ್, ಜೇಸನ್ ಹೋಲ್ಡರ್, ಜಸ್ಪ್ರೀತ್ ಬುಮ್ರಾ, ಆದಿಲ್ ರಶೀದ್, ಬ್ಲೆಸ್ಸಿಂಗ್ ಮುಜರಬಾನಿ, ಶಡ್ಲಿ ವ್ಯಾನ್ ಸ್ಕಾಲ್ವಿಕ್ ( 12 ನೇ ಆಟಗಾರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.