ಮುಂದಿನ ವರ್ಷದಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್

7

ಮುಂದಿನ ವರ್ಷದಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್

Published:
Updated:

ದುಬೈ: ಐಸಿಸಿ ಆಯೋಜಿಸಲಿರುವ ಚೊಚ್ಚಲ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಮೊದಲ ಎದುರಾಳಿ ವೆಸ್ಟ್ ಇಂಡೀಸ್‌. 2019ರ ಜುಲೈ 15ರಿಂದ ಚಾಂಪಿಯನ್‌ಷಿಪ್ ನಡೆಯಲಿದೆ. ಒಟ್ಟು ಒಂಬತ್ತು ತಂಡಗಳು 
ಸ್ಪರ್ಧಿಸಲಿವೆ.

ಐಸಿಸಿಯು (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) 2021ರವರೆಗೆ ನಡೆಯುವ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಮತ್ತು ದ್ವಿಪಕ್ಷೀಯ ಸರಣಿಗಳ ವೇಳಾಪಟ್ಟಿಯನ್ನು ಬುಧವಾರ  ಬಿಡುಗಡೆ ಮಾಡಿದೆ.  ಏಕದಿನ ವಿಶ್ವಕಪ್ ಟೂರ್ನಿಯ ನಂತರ ಟೆಸ್ಟ್‌ ಚಾಂಪಿಯನ್‌ಷಿಪ್ ಆರಂಭವಾಗಲಿದೆ.  ಚಾಂಪಿಯನ್‌ಷಿಪ್‌ನಲ್ಲಿ ಭಾರತವು ಪಾಕಿಸ್ತಾನ ಎದುರು ಪಂದ್ಯಗಳನ್ನು ಆಡುವುದಿಲ್ಲ ಎಂದು ಐಸಿಸಿ  ತಿಳಿಸಿದೆ.

‘ಮುಂದಿನ ಐದು ವರ್ಷಗಳ ಕ್ರಿಕೆಟ್ ಸರಣಿಗಳು ಮತ್ತು ಟೂರ್ನಿಗಳ ವೇಳಾಪಟ್ಟಿಯನ್ನು ಈಗ ಪ್ರಕಟಿಸಲಾಗಿದೆ. ಫ್ಯೂಚರ್ ಟೂರ್ ಪ್ಲ್ಯಾನ್ (ಎಫ್‌ಟಿಪಿ) ಯೋಜನೆಯಲ್ಲಿ ಈಗ ವೇಳಾಪಟ್ಟಿ ಪ್ರಕಟಿಸಿದ್ದೇವೆ. ಎಲ್ಲ ಸದಸ್ಯ ದೇಶಗಳ 
ಸಹಮತ ವ್ಯಕ್ತವಾಗಿದೆ’ ಎಂದು ಐಸಿಸಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡೇವಿಡ್ ರಿಚರ್ಡ್ಸನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !