ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್ | ಲೀ ಶತಕಕ್ಕೆ ಒಲಿದ ಜಯ; ಬಿ ಗುಂಪಿನ ಅಗ್ರಸ್ಥಾನಕ್ಕೆ ಆಫ್ರಿಕಾ

Last Updated 28 ಫೆಬ್ರುವರಿ 2020, 12:36 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ: ಮಹಿಳೆಯರ ಟಿ 20 ವಿಶ್ವಕಪ್‌ ಟೂರ್ನಿಯ ಥಾಯ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ,ದಕ್ಷಿಣ ಆಫ್ರಿಕಾ ತಂಡ 113 ರನ್‌ಗಳ ಅಂತರದ ಗೆಲುವು ಸಾಧಿಸಿತು.

ಇಲ್ಲಿನ ಮಾನುಕಾ ಓವಲ್‌ ಮೈದಾನದಲ್ಲಿನಡೆದ ಪಂದ್ಯದಲ್ಲಿಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 195ರನ್‌ ಗಳಿಸಿತ್ತು.ಆರಂಭಿಕ ಆಟಗಾರ್ತಿ ಲಿಜೆಲ್ಲೆ ಲೀ ಹಾಗೂ ಸುನೆಲೂಸ್‌ ಭರ್ಜರಿ ಬ್ಯಾಟಿಂಗ್‌ ನಡೆಸಿದರು.

ಕೇವಲ 60 ಎಸೆತಗಳನ್ನು ಎದುರಿಸಿದ ಲೀ 16 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 101 ಚಚ್ಚಿದರೆ,ಲೂಸ್‌, 41 ಎಸೆತಗಳಲ್ಲಿ 61 ರನ್‌ ಗಳಿಸಿ ಆಜೇಯರಾಗಿ ಉಳಿದರು. ಥಾಯ್ಲೆಂಡ್‌ ತಂಡದ 7 ಆಟಗಾರರು ಬೌಲಿಂಗ್‌ ಮಾಡಿದರೂ, ಆಫ್ರಿಕನ್ನರನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ.

ಬಳಿಕ, ಬೃಹತ್‌ ಮೊತ್ತದೆದುರು ಇನಿಂಗ್ಸ್‌ ಆರಂಭಿಸಿದಥಾಯ್ಲೆಂಡ್‌ಗೆ ಅಗ್ರ ಕ್ರಮಾಂಕದಪ್ರಮುಖ ಬ್ಯಾಟ್ಸ್‌ವುಮನ್‌ಗಳು ಕೈಕೊಟ್ಟರು. ಕೇವಲ 15 ರನ್‌ ಆಗುವಷ್ಟರಲ್ಲಿ ನಾಲ್ವರು ಪೆವಿಲಿಯನ್‌ ಸೇರಿಕೊಂಡರು. 26 ರನ್‌ ಗಳಿಸಿದಮಧ್ಯಮಕ್ರಮಾಂಕದ ಆಟಗಾರ್ತಿ ಒನಿಚಾ ಕಮ್ಚೊಮ್ಫು ಥಾಯ್ಲೆಂಡ್‌ ಪರ ಗರಿಷ್ಠ ಸ್ಕೋರರ್‌ ಎನಿಸಿದರು. ಒನಿಚಾ ಮತ್ತು ಚಾನಿದಾ ಸುತ್ತಿರುವಾಂಗ್‌ (13) ಹೊರತುಪಡಿಸಿ ಉಳಿದ ಯಾರೊಬ್ಬರೂ ಎರಡಂಕಿ ದಾಟಲಿಲ್ಲ.

ಅಂತಿಮವಾಗಿ ಥಾಯ್ಲೆಂಡ್‌ 19.1ನೇ ಓವರ್‌ನಲ್ಲಿ 80ರನ್‌ ಗಳಿಸಿ ಆಲೌಟ್‌ ಆಯಿತು.

ಮೊದಲ ಸ್ಥಾನಕ್ಕೆ ಆಫ್ರಿಕಾ
ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ‘ಬಿ’ ಗುಂಪಿನಲ್ಲಿ ನಾಲ್ಕು ಪಾಯಿಂಟ್‌ ಸಂಪಾದಿಸಿಮೊದಲ ಸ್ಥಾನಕ್ಕೇರಿತು. ಆಫ್ರಿಕನ್ನರು ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT