ದುಬೈ: ಮುಂಬರುವ ಮಹಿಳಾ ಟಿ20 ವಿಶ್ವಕಪ್ಗಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಸೋಮವಾರ ದಾಖಲೆ ಮೊತ್ತದ ₹82 ಕೋಟಿ ಬಹುಮಾನ ಘೋಷಿಸಿದೆ.

ಪ್ರಸಕ್ತ ಸಾಲಿನ ಮಹಿಳಾ ಟಿ20 ವಿಶ್ವಕಪ್ ಜೂನ್ 12ರಿಂದ ಆರಂಭವಾಗಲಿದ್ದು, ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ನಡೆಯಲಿದೆ.

ಒಟ್ಟು ಬಹುಮಾನದ ಮೊತ್ತವನ್ನು 2024ರ ಆವೃತ್ತಿಗಿಂತ ಶೇಕಡ 10ರಷ್ಟು ಹೆಚ್ಚಿಸಲಾಗಿದೆ. ಈ ಬಾರಿ ಟೂರ್ನಿಯಲ್ಲಿ 12 ತಂಡಗಳು ಭಾಗವಹಿಸಲಿವೆ. ಜೂನ್ 12ರಿಂದ ಜುಲೈ 5ರವರೆಗೆ ಏಳು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಯುಎಇನಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ₹74 ಕೋಟಿ ಇದ್ದ ಬಹುಮಾನ ಮೊತ್ತ ಈ ಬಾರಿ ₹82 ಕೋಟಿಗೆ ಏರಿಕೆಯಾಗಿದೆ.

ಚಾಂಪಿಯನ್ ಆಗುವ ತಂಡಕ್ಕೆ ₹21.8 ಕೋಟಿ ಲಭಿಸಲಿದೆ. ರನ್ನರ್ ಅಪ್ ಆಗುವ ತಂಡಕ್ಕೆ ₹10 ಕೋಟಿ ಬಹುಮಾನ ಸಿಗಲಿದೆ.

ಸೆಮಿಫೈನಲ್ನಲ್ಲಿ ಸೋಲುವ ತಂಡಗಳು ತಲಾ ₹6.29 ಕೋಟಿ ಪಡೆಯಲಿವೆ. ಪ್ರತಿ ಲೀಗ್ ಪಂದ್ಯದ ಗೆಲ್ಲುವ ತಂಡಕ್ಕೆ ₹29 ಲಕ್ಷ ಸಿಗಲಿದೆ. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ 12 ತಂಡಗಳಿಗೆ ಕನಿಷ್ಠ ₹2.06 ಕೋಟಿ ಬಹುಮಾನ ಮೊತ್ತ ಖಚಿತವಾಗಿದೆ.

ಜೂನ್ 12ರಂದು ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ನಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭವಾಗಲಿದೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭಾರತ, ಐರ್ಲೆಂಡ್, ನೆದರ್ಲೆಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕಣದಲ್ಲಿವೆ. ಒಟ್ಟು 24 ದಿನಗಳಲ್ಲಿ 33 ಪಂದ್ಯಗಳು ನಡೆಯಲಿವೆ.

‘ಮಹಿಳಾ ಕ್ರಿಕೆಟ್ನ ಬೆಳವಣಿಗೆಯು ವೇಗವಾಗಿ ಸಾಗುತ್ತಿದೆ. ವಿಶ್ವಕಪ್ ತಂಡಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಿರುವುದು ಮತ್ತು ದಾಖಲೆ ಮೊತ್ತದ ಬಹುಮಾನ ನೀಡುತ್ತಿರುವುದು ಜಾಗತಿಕವಾಗಿ ಕ್ರಿಕೆಟ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಮ್ಮ ಬದ್ಧತೆ ತೋರಿಸುತ್ತದೆ’ ಎಂದು ಐಸಿಸಿ ಸಿಇಒ ಸಂಜೋಗ್ ಗುಪ್ತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.