ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಕ್ರಿಕೆಟ್: ಡಿಜಿಟಲ್ ವೀಕ್ಷಕರ ಸಂಖ್ಯೆ ದಾಖಲೆ

Last Updated 7 ಆಗಸ್ಟ್ 2019, 12:16 IST
ಅಕ್ಷರ ಗಾತ್ರ

ದುಬೈ: ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ಅಧಿಕೃತ ಡಿಜಿಟಲ್ ಮಾಧ್ಯಮಗಳಲ್ಲಿ ವೀಕ್ಷಿಸಿದವರ ಸಂಖ್ಯೆಯು 35 ಲಕ್ಷಕ್ಕೂ ಹೆಚ್ಚು ಜನರನ್ನು ದಾಟಿದೆ.

ಬುಧವಾರ ಈ ಕುರಿತು ವರದಿ ಬಿಡುಗಡೆ ಮಾಡಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ವಿವಿಧ ತಾಣಗಳಲ್ಲಿ ಪ್ರಸಾರವಾದ ಅಧಿಕೃತ ವಿಡಿಯೋ ತುಣುಕುಗಳ ಮೂಲಕ ವೀಕ್ಷಿಸಿದವರ ಸಂಖ್ಯೆಯು ವಿಶ್ವದಾದ್ಯಂತ ನೂರು ಕೋಟಿ ದಾಟಿದೆ. ಇದು ಸಾರ್ವಕಾಲಿಕ ದಾಖಲೆ ಎಂದು ಐಸಿಸಿ ದೃಢಪಡಿಸಿದೆ.

ಐಸಿಸಿ ಯೂಟ್ಯೂಬ್‌ ಚಾನೆಲ್‌ನಲ್ಲಿ 200 ಕೋಟಿಗೂ ಹೆಚ್ಚಿನ ನಿಮಿಷಗಳು, ಫೇಸ್‌ಬುಕ್‌ನಲ್ಲಿ 120 ಕೋಟಿಗಿಂತ ಹೆಚ್ಚು ನಿಮಿಷಗಳ ಅವಧಿಯಲ್ಲಿ ವೀಕ್ಷಿಸಲಾಗಿದೆ.

‘ದಾಖಲೆ ಪ್ರಮಾಣದಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ಜನರು ವೀಕ್ಷಿಸಿದ್ದಾರೆ. ವಿಶ್ವವನ್ನೇ ಒಗ್ಗೂಡಿಸುವ ಶಕ್ತಿ ಕ್ರಿಕೆಟ್‌ಗೆ ಇದೆ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಈ ಬಾರಿ ಬಹಳಷ್ಟು ಹೊಸ ಅಭಿಮಾನಿಗಳ ಬಳಗವು ಸೇರ್ಪಡೆಯಾಗಿರುವುದು ಆಶಾದಾಯಕ’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಮನು ಸವಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT