ಮಂಗಳವಾರ, ಫೆಬ್ರವರಿ 25, 2020
19 °C
ಬೃಹತ್‌ ಮುನ್ನಡೆಯತ್ತ ಆಸ್ಟ್ರೇಲಿಯಾ

AUS vs NZ | ಟೆಸ್ಟ್ ಕ್ರಿಕೆಟ್‌ನಲ್ಲಿ 7,000 ರನ್‌ ಪೂರೈಸಿದ ಡೇವಿಡ್ ವಾರ್ನರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್: ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ ಪೂರೈಸುವ ಮೂಲಕ, ಈ ಸಾಧನೆ ಮಾಡಿದ ಮಾಡಿದ ಆಸಿಸ್‌ನ 12ನೇ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೂ ಭಾಜನರಾದರು.

ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅವರು 17 ರನ್‌ ಗಳಿಸಿದ್ದಾಗ 7000 ರನ್‌ ದಾಖಲೆ ಬರೆದರು. ಇದರೊಂದಗೆ ಆಸಿಸ್‌ಪರ ಅತ್ಯಂತ ವೇಗವಾಗಿ 7000 ರನ್‌ ಪೂರೈಸಿದ 5ನೇ ಆಟಗಾರ ಎನಿಸಿದರು. ವಾರ್ನರ್‌ ಇದುವರೆಗೆ 82 ಟೆಸ್ಟ್ ಪಂದ್ಯಗಳ 151 ಇನಿಂಗ್ಸ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ ಈ ಸಾಧನೆ ಮಾಡಿದ ದಾಖಲೆ ಆಸ್ಟ್ರೇಲಿಯಾದವರೇ ಆದ ಸ್ಟೀವ್‌ ಸ್ಮಿತ್‌ ಹೆಸರಲ್ಲಿದೆ. ಸ್ಮಿತ್‌ 126ನೇ ಇನಿಂಗ್ಸ್‌ನಲ್ಲಿ ಏಳು ಸಹಸ್ರ ರನ್‌ ಗಡಿ ದಾಟಿದ್ದರು.

ಗುರುವಾರ ಆರಂಭವಾದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ 416 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್‌ ತಂಡ 166 ರನ್‌ ಗಳಿಷಲಷ್ಟೇ ಶಕ್ತವಾಗಿತ್ತು. 250 ರನ್‌ಗಳ ಮುನ್ನಡೆ ಸಾಧಿಸಿ ಎರಡನೇ ಇನಿಂಗ್ಸ್‌ ಆರಂಭಿಸಿದ ಆಸಿಸ್‌, 20 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 53 ಬ್ಯಾಟಿಂಗ್‌ ಮಾಡುತ್ತಿದೆ.

ವಾರ್ನರ್‌ 19 ರನ್‌ ಗಳಿಸಿ ಔಟಾಗಿದ್ದರೆ. ಮೊದಲ ಇನಿಂಗ್ಸ್‌ ಶತಕವೀರ ಮಾರ್ನಸ್ ಲಾಬುಶೇನ್ (4) ಹಾಗೂ ಜೋ ಬರ್ನ್ಸ್‌ (24) ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 146.2 ಓವರ್‌ಗಳಲ್ಲಿ 416

ಡೇವಿಡ್ ವಾರ್ನರ್ 43, ಮಾರ್ನಸ್ ಲಾಬುಶೇನ್ 143, ಸ್ಟೀವ್ ಸ್ಮಿತ್ 43, ಟ್ರಾವಿಸ್ ಹೆಡ್ 56, ಟಿಮ್ ಪೆನ್ 39, ಪ್ಯಾಟ್ ಕಮಿನ್ಸ್ 20, ಮಿಚೆಲ್ ಸ್ಟಾರ್ಕ್ 30
ಟಿಮ್ ಸೌಥಿ 93ಕ್ಕೆ 4, ನೀಲ್ ವಾಗ್ನರ್ 92ಕ್ಕೆ 4

ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 55.2 ಓವರ್‌ಗಳಲ್ಲಿ 166
ಕೇನ್ ವಿಲಿಯಮ್ಸನ್ 34, ರಾಸ್ ಟೇಲರ್ 80
ಮಿಚೆಲ್ ಸ್ಟಾರ್ಕ್ 52ಕ್ಕೆ 5, ನಾಥನ್‌ ಲಯೋನ್‌ 48ಕ್ಕೆ 2

ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್: 20 ಓವರ್‌ಗಳಲ್ಲಿ 53
ಡೇವಿಡ್ ವಾರ್ನರ್ 19, ಜೋ ಬರ್ನ್ಸ್‌ 24
ಟಿಮ್ ಸೌಥಿ 18ಕ್ಕೆ 1

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು