ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕ್ರಿಕೆಟ್‌: 243ಕ್ಕೆ ಆಸ್ಟ್ರೇಲಿಯಾ ಪತನ; ಭಾರತಕ್ಕೆ 287 ರನ್‌ ಗುರಿ

Last Updated 17 ಡಿಸೆಂಬರ್ 2018, 7:51 IST
ಅಕ್ಷರ ಗಾತ್ರ

ಪರ್ತ್: ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ, ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸೋಮವಾರ ಆಸ್ಟ್ರೇಲಿಯಾ 243 ರನ್‌ಗಳಿಗೆ ಆಟ ಅಂತ್ಯಗೊಳಿಸಿದೆ. ಭಾರತ ಗೆಲವು ಪಡೆಯಲು 287 ರನ್‌ ಗಳಿಸಬೇಕಿದೆ.

ಭಾನುವಾರ ಮೂರನೇ ದಿನದಾಟದ ಅಂತ್ಯಕ್ಕೆ ತನ್ನ ಎರಡನೇ ಇನಿಂಗ್ಸ್‌ನಲ್ಲಿ 48 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 132 ರನ್‌ ಗಳಿಸಿದ ಆಸ್ಟ್ರೇಲಿಯಾ ತಂಡಕ್ಕೆ ನಾಲ್ಕನೇ ದಿನ ಮೊಹಮ್ಮದ್‌ ಶಮಿ ಮಾರಕವಾದರು. 56 ರನ್‌ ನೀಡಿ 6 ವಿಕೆಟ್‌ ಕಬಳಿಸುವ ಮೂಲಕ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ ಶಮಿ, ಆಸ್ಟ್ರೇಲಿಯಾ 250ರ ಗಡಿ ದಾಟದಂತೆ ನಿಯಂತ್ರಿಸಿದರು.

ಇನ್ನಿಂಗ್ಸ್‌ ಆರಂಭದಲ್ಲಿ ಉಸ್ಮಾನ್‌ ಖ್ವಾಜಾ ಮತ್ತು ಟಿಮ್‌ ಪೇನ್‌ ಜೋಡಿ ಭಾರತದ ಬೌಲರ್‌ಗಳನ್ನು ಕಾಡಿಸಿ 70 ರನ್‌ ಜತೆಯಾಟ ನೀಡಿದರು. ಆದರೆ, ಶಮಿ ಎಸೆತದ ಮುಂದೆ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಖ್ವಾಜಾ ಅತಿ ಹೆಚ್ಚು ರನ್‌(72) ಗಳಿಸಿದರು. 190ನೇ ರನ್‌ ವರೆಗೂ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದ ತಂಡ, ಮುಂದಿನ 51 ರನ್‌ ಗಳಿಕೆಯಲ್ಲಿ ಉಳಿದ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. 243 ರನ್‌ಗಳಿಗೆ ಆಟ ಅಂತ್ಯಗೊಳಿಸಿ, ಭಾರತಕ್ಕೆ 287 ರನ್‌ ಗುರಿ ನೀಡಿದೆ.

ಆಟ ಆರಂಭಿಸಿದ ಭಾರತ, ಟೀ ವಿರಾಮದ ಅವಧಿಗೆ ಪ್ರಮುಖ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಿಷೆಲ್‌ ಸ್ಟಾರ್ಕ್‌ ಮೊದಲ ಓವರ್‌ನಲ್ಲಿಯೇ ಕೆ.ಎಲ್‌.ರಾಹುಲ್‌(0) ವಿಕೆಟ್‌ ಪ‍ಡೆದು ಆಘಾತ ನೀಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ಚೇತೇಶ್ವರ ಪೂಜಾರ(4) ಸಹ ಬಹುಬೇಗ ವಿಕೆಟ್ ಒಪ್ಪಿಸಿದರು. ಪ್ರಸ್ತುತ ಮುರಳಿ ವಿಜಯ್‌(12) ಮತ್ತು ತಂಡದ ನಾಯಕ ವಿರಾಟ್‌ ಕೊಹ್ಲಿ(7) ಕ್ರೀಸ್‌ನಲ್ಲಿದ್ದಾರೆ. ಭಾರತ 10 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 29 ರನ್‌ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT