ಬುಧವಾರ, ಆಗಸ್ಟ್ 10, 2022
23 °C

ಆಸೀಸ್ ವಿರುದ್ಧದ ಚೊಚ್ಚಲ ಡೇ-ನೈಟ್ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಘೋಷಣೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಚೊಚ್ಚಲ ಪಿಂಕ್ ಬಾಲ್ ಡೇ-ನೈಟ್ ಪಂದ್ಯಕ್ಕಾಗಿನ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಘೋಷಿಸಲಾಗಿದೆ. 

ಮೊದಲ ಪಂದ್ಯದ ಬಳಿಕ ತವರಿಗೆ ಮರಳುತ್ತಿರುವ ಕಪ್ತಾನ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. 

ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಹಗಲು-ರಾತ್ರಿ ಪಂದ್ಯದಲ್ಲಿ ಪೃಥ್ವಿ ಶಾ ಹಾಗೂ ಮಯಂಕ್ ಅಗರವಾಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಇದರಿಂದಾಗಿ ಶುಭಮನ್ ಗಿಲ್ ಹಾಗೂ ಕೆಎಲ್ ರಾಹುಲ್ ಅವಕಾಶ ವಂಚಿತವಾಗಿದ್ದಾರೆ. 

ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಬಲ ತುಂಬಲಿದ್ದಾರೆ. ಕೆಳ ಕ್ರಮಾಂಕದಲ್ಲಿ ಹನುಮ ವಿಹಾರಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. 

ಇದನ್ನೂ ಓದಿ: 

ಇನ್ನು ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ವೇಗದ ಅಸ್ತ್ರವಾಗಲಿದ್ದಾರೆ. ಇವರಿಗೆ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಾಥ್ ನೀಡಲಿದ್ದಾರೆ. ಅಲ್ಲದೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರವೀಂದ್ರ ಜಡೇಜ ಅವರ ಆಯ್ಕೆಯನ್ನು ಪರಿಗಣಿಸಿಲ್ಲ. 

ಇನ್ನುಳಿದಂತೆ ರಿಷಭ್ ಪಂತ್, ಕುಲ್‌ದೀಪ್ ಯಾದವ್, ನವದೀಪ್ ಸೈನಿ ಹಾಗೂ ಮೊಹಮ್ಮದ್ ಸಿರಾಜ್ ಅವಕಾಶ ವಂಚಿತವಾಗಿದ್ದಾರೆ. ಅತ್ತ ಆಸೀಸ್ ಪ್ರಯಾಣ ಬೆಳೆಸಿರುವ ರೋಹಿತ್ ಶರ್ಮಾ, ಕೋವಿಡ್ ನಿಯಮದ ಭಾಗವಾಗಿ 14 ದಿನಗಳ ಕ್ವಾರೈಂಟನ್‌ಗೆ ಒಳಗಾಗಿದ್ದಾರೆ.  

ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ದಿನ ಕ್ರಿಕೆಟ್ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆಲ್ ಘೋಷಿಸುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ಹಾಗಾಗಲಿಲ್ಲ. ಇನ್ನೊಂದೆಡೆ ಆಸೀಸ್‌ಗೂ ಮುನ್ನ ಟೀಮ್ ಇಂಡಿಯಾ, ಆಡುವ ಬಳಗ ಘೋಷಿಸಿ ಅಚ್ಚರಿ ಮೂಡಿಸಿದೆ. 
 

ಟೀಮ್ ಇಂಡಿಯಾ ಆಡುವ ಬಳಗ ಇಂತಿದೆ:
ವಿರಾಟ್ ಕೊಹ್ಲಿ (ನಾಯಕ), ಪೃಥ್ವಿ ಶಾ, ಮಯಂಕ್ ಅಗರವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬುಮ್ರಾ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು