ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸಿಸ್‌ ವಿರುದ್ಧ ಅಂತಿಮ ಏಕದಿನ ಪಂದ್ಯ: ಭಾರತದ ಬೌಲರ್‌ಗಳ ಮೇಲೆ ಒತ್ತಡ

ಆಸ್ಟ್ರೇಲಿಯಾ ಮಹಿಳೆಯರ ಎದುರು ಮಿಥಾಲಿ ಬಳಗದ ಏಕದಿನ ಪಂದ್ಯ; ಕ್ಲೀನ್ ಸ್ವೀಪ್‌ನಿಂದ ಪಾರಾಗುವ ಬಯಕೆ
Last Updated 25 ಸೆಪ್ಟೆಂಬರ್ 2021, 11:25 IST
ಅಕ್ಷರ ಗಾತ್ರ

ಮಕಾಯ, ಆಸ್ಟ್ರೇಲಿಯಾ: ಮೊದಲ ಎರಡು ಪಂದ್ಯಗಳನ್ನು ಸೋತಿರುವ ಭಾರತ ಮಹಿಳಾ ತಂಡಆಸ್ಟ್ರೇಲಿಯಾ ಮಹಿಳೆಯರ ಎದುರಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾನುವಾರ ಸೆಣಸಲಿದೆ. ಎರಡೂ ಪಂದ್ಯಗಳಲ್ಲಿ ಎದುರಾಳಿ ತಂಡದ ಬ್ಯಾಟರ್‌ಗಳು ಪಾರುಪತ್ಯ ಮೆರೆದ ಕಾರಣ ಕೊನೆಯ ಪಂದ್ಯದಲ್ಲಿ ಭಾರತದ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಿದೆ. ಇದನ್ನು ಮೀರಿ ನಿಂತು ಜಯ ಗಳಿಸಿ ಸರಣಿ ಕ್ಲೀನ್ ಸ್ವೀಪ್ ತಪ್ಪಿಸಲು ಮಿಥಾಲಿ ರಾಜ್ ಬಳಗ ಪ್ರಯತ್ನಿಸಲಿದೆ.

ಮೊದಲ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ನಾಯಕಿ ಮಿಥಾಲಿ ಅವರ ಏಕಾಂಗಿ ಹೋರಾಟದ ಫಲವಾಗಿ 200ರ ಗಡಿ ದಾಟಿದ್ದ ತಂಡ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಭರ್ಜರಿ ಆಟಕ್ಕೆ ಮಣಿದಿತ್ತು. ಎರಡನೇ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಂಡಿತ್ತು. ಉತ್ತಮ ಮೊತ್ತ ಸೇರಿಸಿದ್ದ ತಂಡ ಎದುರಾಳಿಗಳ ಅಗ್ರ ಕ್ರಮಾಂಕಕ್ಕೆ ಪೆಟ್ಟು ನೀಡಿ ಜಯದತ್ತ ಹೆಜ್ಜೆ ಹಾಕಿತ್ತು. ಆದರೆ ಆರಂಭಿಕ ಬ್ಯಾಟರ್ ಬೇತ್ ಮೂನಿ, ಮಧ್ಯಮ ಕ್ರಮಾಂಕದ ತಹಲಿಯಾ ಮೆಗ್ರಾ ಮತ್ತು ನಿಕೋಲಾ ಕ್ಯಾರಿ ಅವರು ಭಾರತದ ಆಸೆಗೆ ತಣ್ಣೀರು ಹಾಕಿದ್ದರು. ಈ ಮೂಲಕ ಆತಿಥೇಯರು ಸತತ 27ನೇ ಜಯ ಸಾಧಿಸಿದ್ದರು.

ಕೊನೆಯ ಓವರ್‌ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 13 ರನ್ ಬೇಕಾಗಿತ್ತು. ಇದನ್ನು ನಿಯಂತ್ರಿಸಲಾಗದೆ ಅನುಭವಿ ಬೌಲರ್ ಜೂಲನ್ ಗೋಸ್ವಾಮಿ ಕೈಸುಟ್ಟುಕೊಂಡಿದ್ದರು. ನಿರ್ಣಾಯಕ ಓವರ್‌ನಲ್ಲಿ ಅವರು ಎರಡು ನೋಬಾಲ್‌ಗಳು ಹಾಕಿದ್ದು ತಂಡಕ್ಕೆ ಮಾರಕವಾಗಿತ್ತು. ಜೂಲನ್ ಅವರ ಒಂದು ನೋಬಾಲ್ ವಿವಾದ ಸೃಷ್ಟಿಸಿದ್ದರೂ ಸೋಲು ಭಾರತ ಮಹಿಳೆರಯನ್ನು ಕಂಗೆಡಿಸಿದೆ.

2021ರಲ್ಲಿ ಭಾರತ ಮಹಿಳಾ ತಂಡದ ಬೌಲರ್‌ಗಳು ಗಮನಾರ್ಹ ಸಾಧನೆಯನ್ನೇನೂ ಮಾಡಲಿಲ್ಲ. ಜೂಲನ್ ಅವರೊಂದಿಗೆ ಹೊಸ ಚೆಂಡನ್ನು ಸಮರ್ಥವಾಗಿ ಹಂಚಿಕೊಳ್ಳುವ ಬೌಲರ್‌ ಒಬ್ಬರನ್ನು ಕಂಡುಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ. ಶಿಖಾ ಪಾಂಡೆ, ಮಾನಸಿ ಜೋಶಿ, ಪೂಜಾ ವಸ್ತ್ರಕಾರ್‌, ಮೋನಿಕಾ ಪಟೇಲ್ ಮುಂತಾದವರು ನಿರೀಕ್ಷಿತ ಮಟ್ಟಕ್ಕೇರಲಿಲ್ಲ. ಸ್ಪಿನ್ ವಿಭಾಗ ತಂಡದ ಶಕ್ತಿಯಾಗಿದ್ದರೂ ಬಲಿಷ್ಠ ತಂಡಗಳ ಎದುರು ಪೂನಂ ಯಾದವ್ ಮತ್ತು ದೀಪ್ತಿ ಶರ್ಮಾ ಅವರಂಥ ಬೌಲರ್‌ಗಳು ಕೂಡ ಪರಿಣಾಮ ಬೀರುತ್ತಿಲ್ಲ.

ಬ್ಯಾಟಿಂಗ್‌ನಲ್ಲಿ ಮಿಥಾಲಿ ರಾಜ್ ಉತ್ತಮ ಲಯ ಉಳಿಸಿಕೊಂಡಿದ್ದಾರೆ. ಸ್ಮೃತಿ ಮಂದಾನ, ರಿಚಾ ಘೋಷ್‌ ಮತ್ತು ಶಫಾಲಿ ವರ್ಮಾ ಅವರ ಮೇಲೆ ಇರೀಕ್ಷೆ ಇದೆ. ಹೆಬ್ಬೆರಳಿಗೆ ಗಾಯವಾಗಿರುವ ಹರ್ಮನ್‌ಪ್ರೀತ್ ಕೌರ್ ಭಾನುವಾರದ ಪಂದ್ಯಕ್ಕೆ ಲಭ್ಯ ಇರುವ ಬಗ್ಗೆ ಮಾಹಿತಿ ಇಲ್ಲ. ಆಟಕ್ಕೆ ಲಭ್ಯ ಇದ್ದರೂ ಅವರು ಫಾರ್ಮ್‌ನಲ್ಲಿ ಇಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಆರಂಭ: ಬೆಳಿಗ್ಗೆ 5.55 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ಸಿಕ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT