ಕಾನ್ಪುರ: ಭಾರತ ಮತ್ತು ಬಾಂಗ್ಲಾ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ಅಂತಿಮ ಘಟ್ಟ ತಲುಪಿದ್ದು ಭಾರತ ಗೆಲುವಿನ ಹೊಸ್ತಿಲಲ್ಲಿದೆ.
ಭಾರತ ಈ ಪಂದ್ಯವನ್ನು ಗೆಲ್ಲಬೇಕಾದರೆ ಇಂದಿನ ದಿನದಾಟದಲ್ಲಿ 95 ರನ್‌ಗಳಿಸಬೇಕಿದೆ.
ಬಾಂಗ್ಲಾದೇಶ 2ನೇ ಇನ್ನಿಂಗ್ಸ್‌ನಲ್ಲಿ 47 ಓವರ್‌ಗಳಲ್ಲಿ 146 ರನ್‌ಗಳಿಸಿ ಆಲೌಟ್ ಆಗಿದ್ದು 94 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.
ಬಾಂಗ್ಲಾದೇಶ ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 233 ಮತ್ತು 146 ರನ್‌ಗಳಿಸಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 285 ರನ್‌ಗಳಿಗೆ ಡಿಕ್ಲೆರ್ ಮಾಡಿಕೊಂಡಿತ್ತು.
ಸ್ಕೋರ್...
ಬಾಂಗ್ಲಾ ಮೊದಲ & ಎರಡನೇ ಇನ್ನಿಂಗ್ಸ್: 233 ಮತ್ತು 146
ಭಾರತ ಮೊದಲ ಇನ್ನಿಂಗ್ಸ್: 285–9 (ಡಿಕ್ಲೆರ್)