ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್ | ಚೊಚ್ಚಲ ಶತಕವನ್ನು ದ್ವಿಶತಕವಾಗಿಸಿದ ಮೊದಲ ಬ್ಯಾಟರ್ ಕಿಶನ್

Last Updated 11 ಡಿಸೆಂಬರ್ 2022, 5:51 IST
ಅಕ್ಷರ ಗಾತ್ರ

ಚಿತ್ತಗಾಂಗ್: ಬಾಂಗ್ಲಾದೇಶ ವಿರುದ್ಧದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಭಾರತದ ಇಶಾನ್ ಕಿಶನ್‌, ಎರಡು ವಿಶೇಷ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.ಏಕದಿನ ಕ್ರಿಕೆಟ್‌ನಲ್ಲಿ ತಾವು ಗಳಿಸಿದ ಚೊಚ್ಚಲ ಶತಕವನ್ನೇ ದ್ವಿಶತಕವನ್ನಾಗಿ ಪರಿವರ್ತಿಸಿದ ಹಾಗೂ ವೇಗವಾಗಿ ದ್ವಿಶತಕ ಬಾರಿಸಿದ ಬ್ಯಾಟರ್‌ ಎಂಬ ಶ್ರೇಯ ಅವರದ್ದಾಯಿತು.

ಈ ಮಾದರಿಯ ಕ್ರಿಕೆಟ್‌ನಲ್ಲಿ ಈವರೆಗೆ 7 ಬ್ಯಾಟರ್‌ಗಳು 9 ದ್ವಿಶತಕಗಳನ್ನು ಸಿಡಿಸಿದ್ದಾರೆ. ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌, ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌, ಪಾಕಿಸ್ತಾನದ ಫಖರ್‌ ಜಮಾನ್‌ ಹೊರತುಪಡಿಸಿ ಉಳಿದ ಆರು ದ್ವಿಶತಕಗಳನ್ನುಭಾರತೀಯರೇ ಸಿಡಿಸಿದ್ದಾರೆ. ರೋಹಿತ್‌ ಶರ್ಮಾ 3 ಬಾರಿ ಹಾಗೂಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌, ಇಶಾನ್ ಕಿಶನ್‌ ತಲಾ ಒಮ್ಮೊಮ್ಮೆ ಈ ಸಾಧನೆ ಮಾಡಿದ್ದಾರೆ.

ಈವರೆಗೆ 10 ಪಂದ್ಯಗಳ 9 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಇಶಾನ್, ಒಂದು ದ್ವಿಶತಕ, ಮೂರು ಅರ್ಧಶತಕ ಸಹಿತ477 ರನ್‌ ಕಲೆಹಾಕಿದ್ದಾರೆ.

227 ರನ್‌ ಅಂತರದ ಸೋಲೊಪ್ಪಿಕೊಂಡಬಾಂಗ್ಲಾ
ಛತ್ತೋಗ್ರಾಮ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇನಿಂಗ್ಸ್ ಆರಂಭಿಸಿದ ಅನುಭವಿ ಶಿಖರ್‌ ಧವನ್‌ ಕೇವಲ 3 ರನ್ ಗಳಿಸಿ ಔಟಾದರು. ತಂಡದ ಮೊತ್ತ 1 ವಿಕೆಟ್‌ಗೆ 15 ರನ್ ಆಗಿದ್ದಾಗ ಜೊತೆಯಾದ ಕಿಶನ್‌ ಮತ್ತು ವಿರಾಟ್‌ ಕೊಹ್ಲಿ 2ನೇ ವಿಕೆಟ್‌ ಜೊತೆಯಾಟದಲ್ಲಿ 290 ರನ್‌ ಕಲೆಹಾಕಿದರು.

131 ಎಸೆತಗಳನ್ನು ಎದುರಿಸಿದ ಕಿಶನ್‌ 210 ರನ್ ಗಳಿಸಿ ಔಟಾದರು. ಶತಕ ಗಳಿಸಿಲು 85 ಎಸೆತಗಳನ್ನು ತೆಗೆದುಕೊಂಡ ಅವರು,103ನೇ ಎಸೆತದಲ್ಲಿ 150 ರನ್ ಮತ್ತು 126ನೇ ಎಸೆತದಲ್ಲಿ ಇನ್ನೂರರ ಗಡಿ ದಾಟಿದರು. ಇದರೊಂದಿಗೆ ವೇಗವಾಗಿ ಶತಕ ಸಿಡಿಸಿದ ಬ್ಯಾಟರ್‌ ಎನಿಸಿದರು.2015ರಲ್ಲಿ ಗೇಲ್‌ ಜಿಂಬಾಬ್ವೆ ವಿರುದ್ಧ 138 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದು, ಇದುವರೆಗೆ ದಾಖಲೆಯಾಗಿತ್ತು.

ಕಿಶನ್‌ಗೆ ಉತ್ತಮ ಸಹಕಾರ ನೀಡಿದಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 44ನೇ ಶತಕದ (113 ರನ್) ಸಂಭ್ರಮ ಆಚರಿಸಿದರು.ಹೀಗಾಗಿ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 409 ರನ್ ಕಲೆಹಾಕಿತು.

ಕಠಿಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ 34 ಓವರ್‌ಗಳಲ್ಲಿ 182 ರನ್‌ ಗಳಿಸಿ ಆಲೌಟ್‌ ಆಯಿತು. ಹೀಗಾಗಿಭಾರತ 227 ರನ್‌ಗಳ ಅಂತರದಿಂದ ಗೆದ್ದಿತು. ಆದಾಗ್ಯೂಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಬಾಂಗ್ಲಾ ತಂಡವು ಸರಣಿಯನ್ನು 2–1ರಿಂದ ವಶಕ್ಕೆ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT